Road development at a cost of Rs 2 forts in Ujjain
Published on:
Copied
Follow Us
ಹುಲಿಯೂರುದುರ್ಗ:ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಉಜ್ಜನಿ ಗ್ರಾಮದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿಮಾರ್ಣ ಕಾಮಗಾರಿಗೆ ಶಾಸಕ ಡಾ.ರಂಗನಾಥ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ಕುಣಿಗಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೆಂಕಟರಾಮ ಮಾತನಾಡಿ, ಕಳೆದೊಂದು ವರ್ಷದಲ್ಲಿ ಉಜ್ಜನಿ ಗ್ರಾಪಂ ವ್ಯಾಪ್ತಿಯ ಎಲ್ಲ ರಸ್ತೆಗಳು ಡಾಂಬರೀಕರಣಗೊಂಡಿದ್ದು, ಸುಮಾರು 30 ಕೋಟಿ ರೂ. ಅನುದಾನದಲ್ಲಿ ಉಜ್ಜನಿ, ಎಲೆಕಡಕಲು, ಕಾಡುಬೋರನಹಳ್ಳಿ, ಬಿಸೆಗೌಡನದೋಡ್ಡಿ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೆ ವೈ.ಜಿ ಗುಡ್ಡ ಏತನೀರಾವರಿ ಯೋಜನೆಯಡಿ ಉಜ್ಜನಿ ಗ್ರಾಪಂ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಶಾಸಕ ಡಾ.ರಂಗನಾಥ್ ತಾಲೂಕಿಗೆ ಶಾಸಕರಾಗಿ ಆಯ್ಕೆಯಾದ ನಂತರ ಉಜ್ಜನಿ ಗ್ರಾಮ ರಸ್ತೆ ಹಾಗೂ ಮೂಲ ಸೌಕರ್ಯದ ಸಮಸ್ಯೆಯಿಂದ ಮುಕ್ತವಾಗಿದೆ ಎಂದರು
.
ಮುಖಂಡರಾದ ತಾಪಂ ಮಾಜಿ ಸದಸ್ಯ ಕುಮಾರ್, ನಾರಾಯಣ್, ಯು.ಸಿ.ರಾಜು, ಪಾರ್ಥಸಾರಥಿ, ಜಯರಾಮಯ್ಯ, ಚಲುವರಾಜು, ಬೋರೆಗೌಡ, ಕಾಮನಹಳ್ಳಿ ಕುಮಾರ್, ಎಲೆಕಡಕಲು ಜಯರಾಮು ಇದ್ದರು.