

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಎಂ.ಎಸ್.ರಾಮಯ್ಯಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಆರ್‌ಐಟಿ),ಐಎನ್‌ಎಇ ಬೆಂಗಳೂರುಚಾಪ್ಟರ್ ಸಹಯೋಗದೊಂದಿಗೆಆಯೋಜಿಸಲಾಗಿದ್ದ ‘ಪರ್ಯಾವರಣ2026’ರಲ್ಲಿಎಂಎಸ್‌ಆರ್‌ಐಟಿಗೆ ದ್ವಿತೀಯಬಹುಮಾನ ದೊರೆತಿದೆ.
ಪರಿಸರಸುಸ್ಥಿರತೆಗಾಗಿ ಕೃತಕ ಬುದ್ಧಿಮತ್ತೆ(ಎಐ) ಆಧಾರಿತಪರಿಹಾರಗಳನ್ನು ಹುಡುಕಲು ತಜ್ಞರು,ಸಂಶೋಧಕರು ಮತ್ತುವಿದ್ಯಾರ್ಥಿ ನಾವೀನ್ಯಕಾರರನ್ನುಈ ಕಾರ್ಯಕ್ರಮ ಒಟ್ಟುಗೂಡಿಸಿತ್ತು.
ರಕ್ಷಣಾಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರರುಮತ್ತು ಡಿಆರ್‌ಡಿಒ ಕಾರ್ಯದರ್ಶಿಪದ್ಮವಿಭೂಷಣ ಡಾ. ವಿ.ಕೆ.ಆತ್ರೆ ಕಾರ್ಯಕ್ರಮಉದ್ಘಾಟಿಸಿದರು. ಆರ್‌ಐಟಿಮುಖ್ಯ ಶೈಕ್ಷಣಿಕ ಸಲಹೆಗಾರಡಾ.ಕರಿಸಿದ್ದಪ್ಪ,ಪ್ರಾಂಶುಪಾಲ ಡಾ.ಸತೀಶ್ ಬಾಬು ಮತ್ತುಐಎನ್‌ಎಇ ಬೆಂಗಳೂರು ಚಾಪ್ಟರ್ಅಧ್ಯಕ್ಷ ಪ್ರೊ.ಕೆ.ಜೆ.ವಿನೋಯ್ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿಐಐಎಸ್ಸಿಯ ಪ್ರೊ.ವೈ.ನರಹರಿ,ಪ್ರೊ. ಫಣೀಂದ್ರಯಲವರ್ತಿ ಮತ್ತು ಆಕ್ಸೆಂಚರ್‌ನಡಾ.ಡೆರಿಕ್ ಜೋಸ್ತಾಂತ್ರಿಕ ಸೆಷನ್‌ಗಳನ್ನುನಡೆಸಿಕೊಟ್ಟರು.
ಹ್ಯಾಕಾಥಾನ್‌ಗೆರಾಜ್ಯದಾದ್ಯಂತ 12ಕ್ಕೂಹೆಚ್ಚು ಕಾಲೇಜುಗಳಿಂದ 50ಕ್ಕೂಹೆಚ್ಚು ಅರ್ಜಿಗಳು ಬಂದಿದ್ದು,ಅಂತಿಮ ಸುತ್ತಿಗೆ15 ತಂಡಗಳುಆಯ್ಕೆಯಾಗಿದ್ದವು. ನಾಲ್ಕುಗಂಟೆಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿತಂಡಗಳು ಐದು ಪರಿಸರ ವಿಭಾಗಗಳಲ್ಲಿಪರಿಹಾರಗಳನ್ನು ಅಭಿವೃದ್ಧಿಪಡಿಸಿಸಲ್ಲಿಸಿದವು. ನಂತರತೀರ್ಪುಗಾರರು ಇವುಗಳನ್ನುಮೌಲ್ಯಮಾಪನ ಮಾಡಿದರು.
ನಿಟ್ಟೆಇನ್‌ಸ್ಟಿಟ್ಯೂಟ್ ತಂಡವು 50ಸಾವಿರ ರೂ. ನಗದುಮೊತ್ತದೊಂದಿಗೆ ಪ್ರಥಮ ಬಹುಮಾನವನ್ನುಗಳಿಸಿದರೆ, ಎಂಎಸ್‌ಆರ್‌ಐಟಿತಂಡವು 25 ಸಾವಿರರೂ. ನಗದುಮೊತ್ತದೊಂದಿಗೆ ದ್ವಿತೀಯಬಹುಮಾನವನ್ನು ತನ್ನದಾಗಿಸಿಕೊಂಡಿತು.