ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ

Riders are required to wear helmets.
Riders are required to wear helmets.
Published on
ಬಾಗೇಪಲ್ಲಿ: ಬೈಕ್​ ಸವಾರರ ಆಯುಷ್ಯ ದೀರ್ಕಾಲ ಉಳಿದು ತನ್ನ ಕುಟುಂಬ ಸದಸ್ಯರು ಸಂತೋಷದ ಜೀವನ ಸಾಗಿಸಬೇಕಾದರೆ ಚಾಲನಾ ಸಮಯದಲ್ಲಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸುವ ಹವ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒಕ್ಕಲಿಗರ ಸಂದ ರಾಜ್ಯ ನಿರ್ದೇಶಕ ಟಿ.ಕೋನಪರೆಡ್ಡಿ ತಿಳಿಸಿದರು.
ತಾಲೂಕಿನ ತಿಮ್ಮಂಪಲ್ಲಿ, ಗೊರ್ತಪಲ್ಲಿ, ನಾರೇಮದ್ದೇಪಲ್ಲಿ, ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಕ್​ ಸವಾರರಿಗೆ ಹರಿನಾಥರೆಡ್ಡಿ ಚಾರಿಟಬಲ್​ ಟ್ರಸ್ಟ್​ಯಿಂದ ಆಯೋಜಿಸಿದ್ದ ಉಚಿತ ಹೆಲ್ಮಟ್​ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್​ಯಿಂದ ಹೆಲ್ಮೆಟ್​ ಉಚಿತ ವಿತರಣೆ ಮಾಡುತ್ತಿದ್ದಾರೆಂದು ಸುರಕ್ಷತೆ ಬಗ್ಗೆ ರ್ನಿಲಕ್ಷ$್ಯ ತೋರಬೇಡಿ. ಅತಿವೇಗ, ಅಜಾಗರೂಕತೆ, ಮೊಬೈಲ್​ ಬಳಕೆ ಮಾಡಿಕೊಂಡು ವಾಹನ ಚಾಲನೆ ಮಾಡುವುದು ಅಪಾಯಕಾರಿ. ಬಹುತೇಕ ಯುವಕರು ಹೇರ್​ ಸ್ಟೆಲ್​ ಹಾಳಗುತ್ತದೆ ಎಂಬ ಕಾರಣಕ್ಕಾಗಿ ಹೆಲ್ಮೆಟ್​ ಧರಿಸದೆ ವಾಹನ ಚಾಲನೆ ಮಾಡುವ ವೇಳೆ ಸಂಭವಿಸುವ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮೃತಪಟ್ಟಿರುವ ಪ್ರಕರಣಗಳೆ ಹೆಚ್ಚು ದಾಖಲಾಗಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೈಕ್​ ಸವಾರರು ಹೆಲ್ಮೆಟ್​ ಧರಿಸದೆ ವಾಹನ ಚಲಾಯಿಸಬೇಡಿ ಎಂದರು.
ಎನ್​ಡಿಎ ಮುಖಂಡ ಹರಿನಾಥರೆಡ್ಡಿ ಮಾತನಾಡಿ, ಬೈಕ್​ ಸವಾರರ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್​ ಧರಿಸುವುದನ್ನು ಕಡ್ಡಾಯಗೊಳಿಸಿ ಜಿಲ್ಲಾ ಪೊಲೀಸ್​ ಇಲಾಖೆ ಆದೇಶಿಸಿದೆ. ಪೊಲೀಸ್​ ಇಲಾಖೆ ಆದೇಶಕ್ಕೆ ಪುಷ್ಠಿ ನೀಡುವಂತೆ ಈ ಭಾಗದ ಸಂಸದ ಡಾ.ಕೆ.ಸುಧಾಕರ್​ ಉಚಿತ ಹೆಲ್ಮೆಟ್​ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ಲಾನೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ 28 ಗ್ರಾಮ ಪಂಚಾಯಿತಿಗಳು ಪೂರ್ಣಗೊಂಡಿದ್ದು 5 ಗ್ರಾಮ ಪಂಚಾಯಿತಿಗಳು ಮಾತ್ರ ಉಳಿದ್ದು ಶ್ರೀವೇ ಸೇವಾ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದರು.
ಮುಖಂಡರಾದ ಬಿ.ವಿ.ಪಾಪಿರೆಡ್ಡಿ, ಚಂದ್ರಶೇಖರರೆಡ್ಡಿ, ಡಿ.ವಿ.ಕೃಷ್ಣಪ್ಪ, ಮದ್ದಿರೆಡ್ಡಿ, ಕರಿಪಿರೆಡ್ಡಿ, ವೆಂಕಟರೆಡ್ಡಿ, ಸೂರಿ, ಶೇಷಾರೆಡ್ಡಿ, ಅಯೂಬ್​ಸಾಬ್​, ಕೊಂಡಾರೆಡ್ಡಿ, ಕೇಶವರೆಡ್ಡಿ, ಕದಿರಿನಾಯ್ಡು, ಅಮರ್​, ಶ್ರೀನಾಥ್​, ಬಾಬುರೆಡ್ಡಿ, ವಕೀಲ ಶ್ರೀನಿವಾಸ್​, ಮಹೇಂದ್ರ, ಅನಿಲ್​, ರವಿ, ಪ್ರಶಾಂತ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net