ಪಿಎಲ್​ಡಿ ಬ್ಯಾಂಕ್​ ಏಳಿಗೆಗೆ ಶ್ರಮಿಸಿದ ರೇವೂರ್​

ಚಿತ್ತಾಪುರದ ಪಿಎಲ್​ಡಿ ಬ್ಯಾಂಕ್​ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್​ ದಂಪತಿಯನ್ನು ಸತ್ಕರಿಸಲಾಯಿತು. ಭೀಮಣ್ಣ ಸಾಲಿ, ವಿರೂಪಾಕ್ಷಪ್ಪ ಗಡ್ಡದ್​, ಅಶೋಕ ನಿಪ್ಪಾಣಿ ಇತರರಿದ್ದರು.
ಚಿತ್ತಾಪುರದ ಪಿಎಲ್​ಡಿ ಬ್ಯಾಂಕ್​ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್​ ದಂಪತಿಯನ್ನು ಸತ್ಕರಿಸಲಾಯಿತು. ಭೀಮಣ್ಣ ಸಾಲಿ, ವಿರೂಪಾಕ್ಷಪ್ಪ ಗಡ್ಡದ್​, ಅಶೋಕ ನಿಪ್ಪಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಭೀಮಣ್ಣ ಸಾಲಿ ಬಣ್ಣನೆ
  • ಚಿತ್ತಾಪುರದಲ್ಲಿ ಸೇವಾನಿವೃತ್ತಿ ಸಮಾರಂಭ
ಚಿತ್ತಾಪುರ : ಪಿಎಲ್​ಡಿ ಬ್ಯಾಂಕ್​ನ ಏಳಿಗೆಯಲ್ಲಿ ವ್ಯವಸ್ಥಾಪಕ ಬಸವರಾಜ ರೇವೂರ್​ ಅವರ ಶ್ರಮ ಅಪಾರವಾಗಿದೆ ಎಂದು ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಭೀಮಣ್ಣ ಸಾಲಿ ಶ್ಲಾಸಿದರು.
ಪಿಎಲ್​ಡಿ ಬ್ಯಾಂಕ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್​ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 13 ವರ್ಷಗಳಿಂದ ಬ್ಯಾಂಕ್​ನಲ್ಲಿ ಸಾಲಗಾರರ ವಸೂಲಿ ಹೆಚ್ಚು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಪ್ರಾಮಾಣಿಕ ಕಾರ್ಯದಿಂದಾಗಿ ಜಿಲ್ಲೆಯಲ್ಲಿ ಚಿತ್ತಾಪುರ ಬ್ಯಾಂಕ್​ಗೆ 3ನೇ ಸ್ಥಾನ ಲಭಿಸಿದೆ ಎಂದು ಹೇಳಿದರು.
ಸಹಕಾರ ಸಂದ ಜಿಲ್ಲಾ ವ್ಯವಸ್ಥಾಪಕ ಅಜಯ ಮಾಲಿಪಾಟೀಲ್​, ಉಪಾಧ್ಯಕ್ಷ ವಿರೂಪಾಕ್ಷಪ್ಪ ಗಡ್ಡದ್​, ನಿರ್ದೇಶಕರಾದ ಅಶೋಕ ನಿಪ್ಪಾಣಿ, ಅಣ್ಣಾರಾವ ಪಾಟೀಲ್​ ಮುಡಬೂಳ, ನಿವೃತ್ತಿ ಹೊಂದಿದ ವ್ಯವಸ್ಥಾಪಕ ಬಸವರಾಜ ರೇವೂರ್​ ಮಾತನಾಡಿದರು.
ಪ್ರಮುಖರಾದ ರಾಜಶೇಖರ ಕೊಂಕನಳ್ಳಿ, ಮಹಾದೇವ ನಾಶಿ, ರಾಜಶೇಖರಗೌಡ ಸಂಕನೂರ, ಹರಳಯ್ಯ ಬಡಿಗೇರ, ವೀರಭೂಷಣ ಸದಲಾಪುರ, ದಯಾನಂದ, ಶಾರದಾ, ಸಂತೋಷ ರಾಠೋಡ್​ ಇತರರಿದ್ದರು.
ಸಂಗಣ್ಣ ಬಂಡಿ ನಿರೂಪಣೆ ಮಾಡಿದರು. ಕುಸುಮಾವತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net