ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸೇವೆಗಳಲ್ಲಿ ಪರಿಷ್ಕೃತ ಬದಲಾವಣೆ

ತುಮಕುರು ದಾವಣಗೆರೆ ಮಾರ್ಗದಲ್ಲಿ ಬ್ರಾಡ್​ಗೇಜ್ ಕಾಮಗಾರಿ
ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳಲ್ಲಿ ಪರಿಷ್ಕೃತ ಬದಲಾವಣೆಗಳು
ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳಲ್ಲಿ ಪರಿಷ್ಕೃತ ಬದಲಾವಣೆಗಳುRevised changes to several train services due to ongoing work.
Published on

ಬೆಂಗಳೂರು : ತುಮಕೂರು-ದಾವಣಗೆರೆ ಮಾರ್ಗದಲ್ಲಿ ನೂತನ ಬ್ರಾಡ್ ಗೇಜ್ ಕಾಮಗಾರಿ ನಡೆಯುತ್ತಿದ್ದು, ರೈಲು ಸೇವೆಗಳಲ್ಲಿ ಹಲವು ಬದಲಾವಣೆಗಳಾಗಿವೆ. ರದ್ದುಗೊಳಿಸುವಿಕೆ, ಭಾಗಶಃ ರದ್ದುಗೊಳಿಸುವಿಕೆ, ಮಾರ್ಗ ಬದಲಾವಣೆ, ಸಮಯ ಬದಲಾವಣೆ, ನಿಯಂತ್ರಣ ಮತ್ತು ನಿಲ್ದಾಣಗಳ ರದ್ದತಿ ಕುರಿತು ರೈಲ್ವೇ ಇಲಾಖೆ ಈ ಕೆಳಕಂಡ ಪ್ರಕಟಣೆ ಹೊರಡಿಸಿದೆ.

ಹಲವು ರೈಲುಗಳ ಸಂಚಾರ ರದ್ದು

ರೈಲು ಸಂಖ್ಯೆ 07341 ಎಸ್‌ಎಸ್‌ಎಸ್ ಹುಬ್ಬಳ್ಳಿ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಗೂ ರೈಲು ಸಂಖ್ಯೆ 07342 ಚಿಕ್ಕಮಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸೃ್ಪ್ರೆಸ್ ವಿಶೇಷ ರೈಲನ್ನು ಅ.03, 04, ಮತ್ತು 10 ರಂದು ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 16214 ಎಸ್‌ಎಸ್‌ಎಸ್ ಹುಬ್ಬಳ್ಳಿ ಅರಸೀಕೆರೆ ಡೈಲಿ ಎಕ್ಸೃ್ಪ್ರೆಸ್ ರೈಲನ್ನು ಅ.8 ಮತ್ತು 9 ರಂದು ಹಾಗೂ ರೈಲು ಸಂಖ್ಯೆ 16213 ಅರಸೀಕೆರೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸೃ್ಪ್ರೆಸ್ ರೈಲು ಅ.9 ಮತ್ತು 10 ರಂದು ರದ್ದುಗೊಳಿಸಲಾಗಿದೆ.

ಸೆ.22 ರಿಂದ ಅ.9 ರವರೆಗೆ ಸುಮಾರು 10 ದಿನ ರೈಲು ಸಂಖ್ಯೆ 12725 ಸಿದ್ಧಗಂಗಾ ಡೈಲಿ ಸೂಪರ್‌ಫಾಸ್ಟ್ ಎಕ್ಸೃ್ಪ್ರೆಸ್ ರೈಲು ಬೀರೂರು ವರೆಗೆ ಮಾತ್ರ ಸಂಚರಿಸಲಿದೆ. ಆ ದಿನಗಳಂದು ಧಾರವಾಡ ಬದಲಿಗೆ ಬೀರೂರಿನಿಂದ ನಿಗದಿತ ಸಮಯಕ್ಕೆ ಹೊರಡಲಿದೆ.

ಬಹುತೇಕ ಇದೇ ದಿನಾಂಕಗಳಲ್ಲಿ ರೈಲು ಸಂಖ್ಯೆ, 07343, 07344, ಹೊಸಪೇಟೆ ಅರಸಿಕೆರೆ ನಡುವೆ ಸಂಚರಿಸುವ ರೈಲು, ರೈಲುಸಂಖ್ಯೆ 17347, 17348 ಹುಬ್ಬಳ್ಳಿ ಚಿತ್ರದುರ್ಗ ನಡುವೆ ಸಂಚರಿಸು ರೈಲು ಹಾಗೂ ರೈಲು ಸಂಖ್ಯೆ 20676 ಮತ್ತು 20675 ಮೈಸೂರು ಬೆಳಗಾವಿ ನಡುವೆ ಸಂಚರಿಸುವ ರೈಲು ಭಾಗಶಃ ರದ್ದುಗೊಳ್ಳಲಿದೆ.

ಹಲವು ರೈಲುಗಳ ಮಾರ್ಗ ಬದಲಾವಣೆ

ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 19667, 22497, 56529, 56530 ಮತ್ತಿತರ ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ ಯಶವಂತಪುರ ಡೈಲಿ ಎಕ್ಸ್‌ಪ್ರೆಸ್, ಬೆಂಗಳೂರು ಸಿಂಧನೂರು ನಡುವೆ ಸಂಚರಿಸುವ ರೈಲು ಚಿಕ್ಕಚಾಜೂರು ರಾಯದುರ್ಗ ಮಾರ್ಗವಾಗಿ ಸಂಚರಿಸಲಿದೆ.

ರೈಲು ಸಂಖ್ಯೆ 16281 ಮೈಸೂರು ಅಜ್ಮೀರ್ ಸಾಪ್ತಾಹಿಕ ಎಕ್ಸೃ್ಪ್ರೆಸ್, ರೈಲು ಸಂಖ್ಯೆ 04113 ಮತ್ತು 04114 ಪ್ರಯಾಗ್‌ರಾಜ್ ಹುಬ್ಬಳ್ಳಿ ನಡುವಿನ ಸಾಪ್ತಾಹಿಕ ಎಕ್ಸೃ್ಪ್ರೆಸ್ ವಿಶೇಷ ರೈಲು, ಯಶವಂತಪುರ ಬಾರ್ಮೇರ್ ಸಾಪ್ತಾಹಿಕ ಎಸಿ ಎಕ್ಸೃ್ಪ್ರೆಸ್ ರೈಲು ಸಂಖ್ಯೆ 14805, ರೈಲು ಸಂಖ್ಯೆ 07314 ಕೊಲ್ಲಂ ಹುಬ್ಬಳ್ಳಿ ಸಾಪ್ತಾಹಿಕ ರೈಲುಗಳ ಮಾರ್ಗದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ.

ಇನ್ನುಳಿದಂತೆ 30ಕ್ಕೂ ಹೆಚ್ಚು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ, ಸಂಚಾರ ಮಾರ್ಗದಲ್ಲಿ ನಿಯಂತ್ರಣ, ಹಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದು ಹೀಗೆ ಸಾಕಷ್ಟು ಬದಲಾವಣೆಗಳಾಗಿದ್ದು, ಹಬ್ಬದ ಸೀಸನ್ ಆಗಿರುವುದರಿಂದ ಪ್ರಯಾಣಿಕರು ಇವುಗಳನ್ನು ಗಮನಿಸಿಕೊಳ್ಳುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net