ಕಲಬುರಗಿ ವಿಮಾನ ಸೇವೆ ಪುನಾರಂಭಿಸಿ

ಕಲಬುರಗಿ ಕೆಕೆಸಿಸಿಐಗೆ ಬುಧವಾರ ಭೇಟಿ ನೀಡಿದ್ದ ಸ್ಟಾರ್​ಏರ್​ ದಕ್ಷಿಣ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಮೊಹಮ್ಮದ್​ ಸೋಹೈಲ್​ ಅಹ್ಮದ್​ ಅವರನ್ನು ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪ ಸತ್ಕರಿಸಿದರು. ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಇತರರಿದ್ದರು.
ಕಲಬುರಗಿ ಕೆಕೆಸಿಸಿಐಗೆ ಬುಧವಾರ ಭೇಟಿ ನೀಡಿದ್ದ ಸ್ಟಾರ್​ಏರ್​ ದಕ್ಷಿಣ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಮೊಹಮ್ಮದ್​ ಸೋಹೈಲ್​ ಅಹ್ಮದ್​ ಅವರನ್ನು ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪ ಸತ್ಕರಿಸಿದರು. ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮನವಿ
  • ಸ್ಟಾರ್​ಏರ್​ ವ್ಯವಸ್ಥಾಪಕರ ಜತೆ ಸಮಗ್ರ ಚರ್ಚೆ
ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಗೆ ಬುಧವಾರ ಭೇಟಿ ನೀಡಿದ ಸ್ಟಾರ್​ ಏರ್​ ಸಂಸ್ಥೆಯ ದಣ ವಿಭಾಗದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಮೊಹಮ್ಮದ್​ ಸೋಹೈಲ್​ ಅಹ್ಮದ್​ ಅವರೊಂದಿಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಪುನಾರಂಭಿಸುವ ಕುರಿತು ಚರ್ಚೆ ನಡೆಯಿತು.
ಸ್ಟಾರ್​ ಏರ್​ ಸಂಸ್ಥೆಯು ನೂತನವಾಗಿ ೂಷಿಸಲಾದ ಮಾರ್ಪಡಿತ ಉಡಾನ್​ ಯೋಜನೆ ಅಡಿಯಲ್ಲಿ ವಿಮಾನ ಸೇವೆ ಪುನಾರಂಭಿಸುವ ಬಗ್ಗೆ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಹಿಂದಿನ ಅವಧಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಯಶಸ್ವಿಯಾಗಿ ವಿಮಾನ ಸೇವೆ ನಡೆಸಿದ ಅನುಭವವ ಗಮನದಲ್ಲಿಟ್ಟುಕೊಂಡು, ಶ್ರೀದಲ್ಲೆ ಸೇವೆ ಪ್ರಾರಂಭಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಿತು. ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಯಾಣಿಕರ ಬೇಡಿಕೆ ದೃಷ್ಟಿಯಿಂದಲೂ ಈ ಸೇವೆ ಅವಶ್ಯಕತೆ ಸಂಸ್ಥೆ ಪ್ರತಿಪಾದಿಸಿತು.
ಸ್ಟಾರ್​ಏರ್​ಗೆ ಮನವಿಪತ್ರ
ಈ ಸಂದರ್ಭದಲ್ಲಿ ಕೆಕೆಸಿಸಿಐ ಸಂಸ್ಥೆಯು ಸ್ಟಾರ್​ಏರ್​ ಸಂಸ್ಥೆಗೆ ಮನವಿಪತ್ರ ಸಲ್ಲಿಸಿ, ಕಲಬುರಗಿಯಿಂದ ವಿಮಾನ ಸೇವೆ ಶ್ರೀದಲ್ಲಿ ಪುನಾರಂಭಿಸಲು ಒತ್ತಾಯಿಸಿತು. ಕಲಬುರಗಿ ವಿಮಾನ ನಿಲ್ದಾಣವು ಹಿಂದಿನ ಉಡಾನ್​ ಯೋಜನೆಯಡಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ನೈಟ್​ ಲ್ಯಾಂಡಿಂಗ್​ ಸೇರಿ ಅಗತ್ಯ ಮೂಲಸೌಕರ್ಯ ಹೊಂದಿರುವುದರಿಂದ ತಣ ಸೇವೆ ಪ್ರಾರಂಭಿಸಲು ಯಾವುದೇ ತಾಪತ್ರಯ ಇಲ್ಲ ಎಂದು ತಿಳಿಸಿತು.
ಸಂಸ್ಥೆಯು ಕಲಬುರಗಿ ಬೆಂಗಳೂರು ಮಾರ್ಗವನ್ನು ಮರುಪ್ರಾರಂಭಿಸುವುದರ ಜತೆಗೆ ಮುಂಬೈ, ದೆಹಲಿ, ತಿರುಪತಿ, ಗೋವಾ, ಹೈದರಾಬಾದ್​, ಮಂಗಳೂರು ಹಾಗೂ ಅಹಮದಾಬಾದ್​ ಸೇರಿ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ವಿಸ್ತರಿಸುವಂತೆ ಮನವಿ ಮಾಡಿತು. ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ ಮತ್ತು ರಾತ್ರಿ ವಿಮಾನ ಸೇವೆ ಪ್ರಾರಂಭಿಸುವ ಅಗತ್ಯವನ್ನೂ ಒತ್ತಿ ಹೇಳಿತು.
ಸೇವೆಗಳ ಕಾರ್ಯಮತೆ ಹೆಚ್ಚಿಸಲು, ಬೆಂಗಳೂರು ಹಾಗೂ ಹೈದರಾಬಾದ್​ ಮೂಲಕ ಹಬ್​ ಆಧಾರಿತ ಅಥವಾ ಹಾಪ್​ ಮಾರ್ಗ ಅನುಸರಿಸುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಬಹುದು, ಕಾರ್ಯಾಚರಣೆ ಪರಿಣಾಮಕಾರಿಯಾಗಲಿದೆ ಎಂದು ಸಂಸ್ಥೆ ಸಲಹೆ ನೀಡಿತು.
ಟಿಕೆಟ್​ ದರ ಕಡಿತಕ್ಕೆ ಸಲಹೆ
ಹಿಂದಿನ ಅವಧಿಯಲ್ಲಿ ಕಲಬುರಗಿ ಬೆಂಗಳೂರು ಮಾರ್ಗದಲ್ಲಿ ಟಿಕೆಟ್​ ದರಗಳು ಸಾಮಾನ್ಯ ಪ್ರಯಾಣಿಕರಿಗೆ ಹೊರೆಯಾಗಿತ್ತು. ಉಡಾನ್​ ಯೋಜನೆಯ ಉದ್ದೇಶಕ್ಕೆ ಅನುಗುಣವಾಗಿ, 5,000 ರೂ.ಗಿಂತ ಕಡಿಮೆ ದರ ನಿಗದಿಪಡಿಸಿ, ಒಟ್ಟು ಆಸನಗಳ ಕೇವಲ ಶೇ.5ಕ್ಕೆ ಮಾತ್ರ ಈ ಗರಿಷ್ಠ ದರ ಅನ್ವಯಿಸಬೇಕು. ಇದರಲ್ಲಿ ಎಲ್ಲಾ ಡೈನಾಮಿಕ್​ ದರ ಒಳಗೊಂಡಿರಬೇಕು ಎಂದು ಸಂಸ್ಥೆ ಸೂಚಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿ ಅಧ್ಯ ರಣಬಸಪ್ಪ ಪಪ್ಪಾ ಹಾಗೂ ಕಾರ್ಯದರ್ಶಿ ಶಿವರಾಜ್​ ಇಂಗಿನಶೆಟ್ಟಿ ಅವರು, ಕಲಬುರಗಿಯಿಂದ ವಿಮಾನ ಸೇವೆ ಪುನಾರಂಭಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೊಸ ಉಡಾನ್​ 2.0 ಯೋಜನೆಯ ಮೂಲಕ ವಿಮಾನ ಸಂಸ್ಥೆಗಳು ಮುಂದೆ ಬಂದು ಕಲಬುರಗಿಯನ್ನು ಪ್ರಮುಖ ನಗರಗಳೊಂದಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net