ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ

ಹುಲಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಮಿತಿ ತಾಲೂಕು ಅಧ್ಯ  ಸಿದ್ರಾಮ ಕಾಮಣ್ಣ ಮಾತನಾಡಿದರು. ತಾಪಂ ಇಒ ಮಹಾದೇವ ಜಮ್ಮು ಇತರರಿದ್ದರು.
ಹುಲಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಮಿತಿ ತಾಲೂಕು ಅಧ್ಯ ಸಿದ್ರಾಮ ಕಾಮಣ್ಣ ಮಾತನಾಡಿದರು. ತಾಪಂ ಇಒ ಮಹಾದೇವ ಜಮ್ಮು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ರಾಮ ಕಾಮಣ್ಣ ಸೂಚನೆ
  • ಹುಲಸೂರಿನಲ್ಲಿ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ
ಹುಲಸೂರು: ಬಡವರ ಆರ್ಥಿಕ ಪ್ರಗತಿಗೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಫಲಾನುಭವಿಗಳಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಸಿದ್ರಾಮ ಕಾಮಣ್ಣ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುವಲ್ಲಿ ಯಾವುದೇ ವಿಳಂಬವಾಗಬಾರದು. ಗ್ರಾಮೀಣ ಭಾಗಗಳಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ತಣ ಗಮನಿಸಿ ಶ್ರೀ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಪಂಪ್​ ಸೆಟ್​ಗಳಿಗೆ ವಿದ್ಯುತ್​ ಸಮಸ್ಯೆ ಉಂಟಾಗದಂತೆ ಕ್ರಮಕೈಗೊಳ್ಳಬೇಕು. ಟ್ರಾನ್ಸ್​ಫಾರ್ಮರ್​ ಹಾಗೂ ವೋಲ್ಟೇಜ್​ ಸಮಸ್ಯೆಗಳನ್ನು ತಣ ಸರಿಪಡಿಸುವಂತೆ ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಸಂಬಂಧ ಕೆಲವು ಗ್ರಾಮಗಳಲ್ಲಿ ಉಂಟಾದ ಅಸಮರ್ಪಕತೆ ಕುರಿತು ಗಂಭೀರವಾಗಿ ಗಮನಹರಿಸಿ ನ್ಯಾಯಬೆಲೆ ಅಂಗಡಿಗಳ ಮೂಲಕ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಿಸಬೇಕು. ಅಂತರಭಾರತಿ ತಾಂಡಾದಲ್ಲಿ ರೇಷನ್​ ವಿತರಣೆ ಸರಿಯಾಗಿ ಮಾಡುತ್ತಿಲ್ಲವೆಂದು ಸಾರ್ವಜನಿಕರ ದೂರು ಕೇಳಿ ಬರುತ್ತಿದೆ. ಬರುವ ತಿಂಗಳಿನಿಂದ ತಾಂಡಾದಲ್ಲಿ ಪಡಿತರ ವಿತರಣೆ ಮಾಡಬೇಕು ಎಂದು ತಿಳಿಸಿದರು.
ಗೃಹಲ್ಮ ಯೋಜನೆಯಲ್ಲಿ ಬಾಕಿ ಇರುವ ಹಣವನ್ನು ಶ್ರೀ ಬಿಡುಗಡೆ ಮಾಡುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ತಾಪಂ ಇಒ ಮಹಾದೇವ ಜಮ್ಮು, ಗ್ಯಾರಂಟಿ ಯೋಜನೆಯ ಸದಸ್ಯರಾದ ಶಿವಕುಮಾರ ಜಮಾದಾರ, ವಿನಾಯಕ ಪವಾರ್​, ತ್ರಿಬುಂಕ ಜವಾಯಿ, ಮಹೇಶ ಪಾಟೀಲ, ಪ್ರೀತಮ ಜಾಧವ್​, ಗೌಸೋದಿನ್​ ಬಿರಿವಾಲೆ, ಸತೀಶ ಗಾಯಕವಾಡ, ವೆಂಕಟೇಶ ಗುತ್ತೇದಾರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net