ಭೂಮಿ ಪ್ರಕರಣ ತ್ವರಿತ ಇತ್ಯರ್ಥಪಡಿಸಿ

ಸಿಂಧನೂರಿನಲ್ಲಿ ಶಿರಸ್ತೇದಾರ್ ಅಂಬಾದಾಸ್‌ಗೆ ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ರೈತ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.ಪ್ರಮುಖರಾದ ಎಂ. ಗಂಗಾಧರ, ಹನುಮಂತಪ್ಪ ಗೋಡಿಹಾಳ, ಎಚ್.ಆರ್.ಹೊಸಮನಿ, ಮುದಿಯಪ್ಪ ಹನುಮನಗರ ಕ್ಯಾಂಪ್, ನರಸಪ್ಪ ಕಟ್ಟಿಮನಿ, ರಂಗಪ್ಪ ಚಿಕ್ಕಬೇರ‌್ಗಿ, ಸಂಗಪ್ಪ, ರಾಜಶೇಖರ ಇದ್ದರು.

Published on
ಸಿಂಧನೂರು: ನಲವತ್ತೈದು ವರ್ಷಗಳಿಂದ ಬಾಕಿ ಉಳಿದಿರುವ ಜವಳಗೇರಾ ಗ್ರಾಮದ ಸಿದ್ದಲಿಂಗಮ್ಮ ವೆಂಕಟರಾವ ಅವರ ಹೆಚ್ಚುವರಿ ಭೂಮಿ ಪ್ರಕರಣ (ಕೇಸ್ ನಂ.2641)ವನ್ನು ಸಿಂಧನೂರು ಭೂ ನ್ಯಾಯ ಮಂಡಳಿ ತುರ್ತು ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ರೈತ ಸಂಘದ ತಾಲೂಕು ಘಟಕದಿಂದ ಸೋಮವಾರ ತಹಸಿಲ್ ಕಚೇರಿಯಲ್ಲಿ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಲಾಯಿತು. 
ಸಿಂಧನೂರು ಭೂ ನ್ಯಾಯ ಮಂಡಳಿಯಲ್ಲಿ ಇರುವ ಹೆಚ್ಚುವರಿ ಭೂಮಿ ಪ್ರಕರಣ ಫೈಲ್ ನಂ.264 1/1981-82 ಎಂದಿದ್ದು, ಘೋಷಣದಾರರು ತಮ್ಮ ಘೋಷಣಾ ಪತ್ರದಲ್ಲಿ 1169 ಎಕರೆ ಭೂಮಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. 
ಪತಿ ಮರಣಹೊಂದಿದ್ದು, ಮಕ್ಕಳಿಲ್ಲ. ಸಂಯುಕ್ತ ಕುಟುಂಬಕ್ಕೆ ಸೇರಿಲ್ಲ ಎಂದು ಮಹಿಳೆ ಘೋಷಿಸಿದ್ದಾರೆ.  ವಿಚಾರಣೆ ನಡೆಸಿದ ಸಿಂಧನೂರು ಭೂನ್ಯಾಯ ಮಂಡಳಿಯು 1981ರ ನ.5ರಂದು ತೀರ್ಪು ಪ್ರಕಟಿಸಿ, ಸಿದ್ದಲಿಂಗಮ್ಮ ವೆಂಕಟರಾವ ಅವರಿಗೆ 54 ಎಕರೆ ನಿಗದಿಪಡಿಸಿ, ಉಳಿದ 1069 ಎಕರೆ 32 ಗುಂಟೆ ಹೆಚ್ಚುವರಿ ಭೂಮಿ ಎಂದು ಘೋಷಿಸಿದೆ. 
ಆದರೆ ಹೈಕೋರ್ಟ್ ಆದೇಶದ ಪ್ರಕಾರ ಸದರಿ ಪ್ರಕರಣದ ಮರು ವಿಚಾರಣೆ ನಡೆದಿಲ್ಲ. ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಸಿಂಧನೂರ ಭೂ ನ್ಯಾಯ ಮಂಡಳಿ ಮುಂದಾಗಬೇಕು ಎಂದು ಒತ್ತಾಯಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net