2025ರ ಡಿ.17ರಿಂದ ಫೆಬ್ರವರಿ 23ವರೆಗೆ 4.9 ಕೋಟಿ ರೂಪಾಯಿಯನ್ನು ವಂಚಕರ ಖಾತೆಗೆ ಮಂಜುನಾಥ್ ವರ್ಗಾಯಿಸಿದ್ದಾರೆ. ಇದು ಅವರ ಪತ್ನಿಯ ಜಂಟಿ ಖಾತೆಯಿಂದ ತೆಗೆದ ಹಣವಾಗಿದೆ. 92 ಲಕ್ಷ ರೂ, 76 ಲಕ್ಷ ರೂ., 1 ಕೋಟಿ ರೂ., 57 ಲಕ್ಷ ರೂ ಮತ್ತು 1.3 ಕೋಟಿ ರೂ. ಹಣವನ್ನು ಆರ್ಟಿಜಿಎಸ್ ಮೂಲಕ ಸೈಬರ್ ವಂಚಕರಿಗೆ ಕಳುಹಿಸಿದ್ದಾರೆ. ಇಲ್ಲಿಗೆ ನಿಲ್ಲದ ಅವರ ಹಣದ ದಾಹ ಇನ್ನಷ್ಟು ಹೆಚ್ಚುತ್ತಿದ್ದಂತೆ ಮಂಜುನಾಥ್ ಅಕೌಂಟ್ ಖಾಲಿಯಾಗಿದೆ. ಯಾವಾಗ ತಮ್ಮ ಸ್ನೇಹಿತನ ಬಳಿ ಹೆಚ್ಚುವರಿ ಹಣ ಪಡೆಯಲು ಸಹಾಯ ಕೋರಿದರು, ಆಗ ಅವರು ಇದೊಂದು ಡಿಜಿಟಲ್ ಅರೆಸ್ಟ್ ಎಂದು ಎಚ್ಚರಿಸಿ, ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದರು. ಸದ್ಯ ಕೇಸ್ ದಾಖಲಾಗಿದ್ದು, ಖಾಕಿ ಪಡೆ ತನಿಖೆ ಕೈಗೊಂಡಿದೆ,(ಏಜೆನ್ಸೀಸ್).