ಹೆದ್ದಾರಿ ದುರಸ್ತಿಗೊಳಿಸಿ ಟೋಲ್​ ಸಂಗ್ರಹಿಸಿ highway tolls

ಹೆದ್ದಾರಿ ದುರಸ್ತಿಗೊಳಿಸಿ ಟೋಲ್​ ಸಂಗ್ರಹಿಸಿ highway tolls
ಹೆದ್ದಾರಿ ದುರಸ್ತಿಗೊಳಿಸಿ ಟೋಲ್​ ಸಂಗ್ರಹಿಸಿ highway tolls
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂದ ಉಪಾಧ್ಯ ಕೆ.ನಾರಾಯಣಗೌಡ ಹೇಳಿಕೆ
ಮುಳಬಾಗಿಲು: ಕೋಲಾರದ ರಾಮಸಂದ್ರ ಗಡಿಭಾಗ, ಬೈಪಾಸ್​ನಿಂದ ನಂಗಲಿ ಗಡಿಭಾಗದವರೆಗೂ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯನ್ನು ಸರಿಪಡಿಸುವವರೆಗೂ ಟೋಲ್​ ಸಂಗ್ರಹ ಸ್ಥಗಿತಗೊಳಿಸಿ ಜನ ಸಾಮಾನ್ಯರ ಜೀವ ಉಳಿಸುವಂತೆ ರೈತ ಸಂ ತಾಲೂಕಿನ ಹನುಮನಹಳ್ಳಿ&ದೇವರಾಯಸಮುದ್ರ ಟೋಲ್​ನ ವ್ಯವಸ್ಥಾಪಕ ಪಾಂಡ್ಯನ್​ ಅವರಿಗೆ ಮನವಿ ಸಲ್ಲಿಸಿತು. highway tolls
ರಾಜ್ಯ ರೈತ ಸಂದ ಉಪಾಧ್ಯ ಕೆ.ನಾರಾಯಣಗೌಡ ಮಾತನಾಡಿ, ಪ್ರತಿ ವರ್ಷ ನಡೆಯುವ ರಸ್ತೆ ಸುರಾ ಸಾಪ್ತಾಹ ಜಿಲ್ಲಾಧಿಕಾರಿಗಳ ಕಚೇರಿಗೆ ಸೀಮಿತವಾಗಿದೆ. ಕಾನೂನಿನ ಪ್ರಕಾರ ಹೆದ್ದಾರಿಯಲ್ಲಿ ಯಾವುದೇ ಗುಂಡಿಗಳು ಇರಬಾರದು. ವಿದ್ಯುತ್​ ದೀಪಗಳು ನಿರಂತರವಾಗಿ ಉರಿಯಬೇಕು. ಪ್ರತಿ ಗೇಟ್​ ಬಳಿ ತಂಗುದಾಣ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆದರೆ ಎನ್​ಎಚ್​ಎಐ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಈ ರಸ್ತೆ ಅವ್ಯವಸ್ಥೆಯ ಹೆದ್ದಾರಿಯಾಗಿ ರೂಪುಗೊಂಡಿದೆ ಎಂದು ಆರೋಪಿಸಿದರು.
ಸಂದ ಮುಖಂಡ ನಂಗಲಿ ನಾಗೇಶ್​ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75 ಜನ ಸಾಮಾನ್ಯರ ಪ್ರಾಣ ತೆಗೆಯುವ ಯಮಧೂತ ರಸ್ತೆಯಾಗಿ ಮಾರ್ಪಟ್ಟಿದೆ. ಸಾವಿರಾರು ಕೋಟಿ ತೆರಿಗೆ ಹಣದಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆ ವೈಪಲ್ಯಗಳಿಂದ ಕೂಡಿದ್ದು, ಪ್ರಯಾಣಿಕರು ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಹದಗೆಟ್ಟಿದ್ದರೂ ಸರಿಪಡಿಸಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಪಾಂಡ್ಯನ್​ ಮಾತನಾಡಿ, ರಸ್ತೆ ಅವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸಂದ ವೇಣು, ಕೇಶವ, ಸುನಿಲ್​ ಕುಮಾರ, ಕಾಮನೂರು ಬಾಬು, ವಿಜಯ್​ಪಾಲ್​, ಹೆಬ್ಬಣಿ ಆನಂದರೆಡ್ಡಿ, ಶ್ರೀಕಾಂತ್​, ಯಲ್ಲಣ್ಣ, ಅಂಬ್ಲಕಲ್​ ಮಂಜುನಾಥ, ಶೈಲಜಾ, ಸುಶೀಲಮ್ಮ, ಪವಿತ್ರಾ, ವೆಂಕಟಮ್ಮ, ರತ್ನಮ್ಮ, ಗೌರಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net