ಮುರಿದು ಬಿದ್ದ ವಿದ್ಯುತ್​ ಕಂಬ ದುರಸ್ತಿ

ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಮುರಿದು ಬಿದ್ದ ವಿದ್ಯುತ್​ ಕಂಬವನ್ನು ತೆರವುಗೊಳಿಸಿ ಹೊಸ ಕಂಬ ಹಾಕಿದ ಜೆಸ್ಕಾಂ ಅಧಿಕಾರಿಗಳು.
ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಮುರಿದು ಬಿದ್ದ ವಿದ್ಯುತ್​ ಕಂಬವನ್ನು ತೆರವುಗೊಳಿಸಿ ಹೊಸ ಕಂಬ ಹಾಕಿದ ಜೆಸ್ಕಾಂ ಅಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ವರದಿಗೆ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು
  • ನಿಟ್ಟುಸಿರುವ ಬಿಟ್ಟ ಸಾರ್ವಜನಿಕರು
ವಡಗೇರಾ: ಮಳೆ ಮತ್ತು ಗಾಳಿಗೆ ಮುರಿದು ಬಿದ್ದ ವಿದ್ಯುತ್​ ಕಂಬವನ್ನು ಕೊನೆಗೂ ಅದನ್ನು ತೆರವುಗೊಳಿಸಿ, ಹೊಸದೊಂದು ಕಂಬವನ್ನು ಜೆಸ್ಕಾಂ ಅಧಿಕಾರಿಗಳು ಅಳವಡಿಸುವ ಮೂಲಕ ಸಾರ್ವಜನಿಕರ ಭಯವನ್ನು ದೂರ ಮಾಡಿದ್ದಾರೆ.
ಈ ಕುರಿತು ವಿಜಯವಾಣಿ ಮಾ.23ರಂದು "ಮುರಿದು ಬಿದ್ದ ವಿದ್ಯುತ್​ ಕಂಬ' ಎಂಬ ಶೀರ್ಷಿಕೆಯಡಿ ಸವಿಸ್ತಾರವಾಗಿ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚತ್ತ ಅಧಿಕಾರಿಗಳು ಮರುದಿನವೇ ಹೊಸದೊಂದು ಕಂಬವನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಭಯವನ್ನು ದೂರ ಮಾಡಿದ್ದಾರೆ.
ಗ್ರಾಮದ ರಸ್ತೆಯ ಪಕ್ಕದಲ್ಲಿ ಮುರಿದು ಬಿದ್ದಿದ್ದ ಕಂಬದಿಂದ ವಿದ್ಯುತ್​ ತಂತಿಗಳು ನೆಲದತ್ತ ಜೋತು ಬಿದ್ದು, ಜನರು ಭಯದಲ್ಲಿ ಸಂಚರಿಸುತ್ತಿದ್ದರು. ಮಕ್ಕಳಿಗೆ, ಪಶುಗಳಿಗೆ ಅಪಾಯ ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಿಯರು ಹಲವು ಬಾರಿ ದೂರು ನೀಡಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ವಿಜಯವಾಣಿ ವರದಿ ನಂತರ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಇದರಿಂದ ಸಾರ್ವಜನಿಕರು ಪತ್ರಿಕೆ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net