

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಶ್ರೀಜಗದ್ಗುರುರೇಣುಕಾಚಾರ್ಯರು ನೀಡಿರುವ ಸಾಮಾಜಿಕಸಂದೇಶಗಳು ನಮ್ಮ ಇಂದಿನ ಯುವಜನರಿಗೆ ದಾರಿದೀಪವಾಗಿದ್ದು,ಆ ಕಾರಣದಿಂದಲೇರಾಜ್ಯ, ಜಿಲ್ಲೆಮತ್ತು ತಾಲೂಕು ಮಟ್ಟದಲ್ಲಿಕಾರ್ಯಕ್ರಮ ಆಯೋಜಿಸಿದ್ದೇವೆಎಂದು ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿಹೇಳಿದರು.
ರವೀಂದ್ರಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದಶ್ರೀಜಗದ್ಗುರು ರೇಣುಕಾಚಾರ್ಯಜಯಂತಿ ಯುಗಮಾನೋತ್ಸವ ಸಮಾರಂಭದಲ್ಲಿಮಾತನಾಡಿದರು.
ಮಹಾತ್ಮರು,ಯೋಗಿಗಳು,ಸಂತರ ಜಯಂತಿಮಹೋತ್ಸವಗಳನ್ನು ಮಾಡುವ ಉದ್ದೇಶಅವರ ತತ್ವ-ಸಂದೇಶಗಳುನಮ್ಮ ಯುವಕರ ಮೇಲೆ ಪ್ರಭಾವ ಬೀರಬೇಕು.ಆ ಕಾರಣದಿಂದಲೇನಮ್ಮ ಸರ್ಕಾರ ಜಗದ್ಗುರುರೇಣುಕಾಚಾರ್ಯರು,ಬುದ್ಧ,ಬಸವ,ಅಂಬೇಡ್ಕರ್,ಕನಕದಾಸ ಹೀಗೆವರ್ಷದಲ್ಲಿ 50ಕ್ಕೂಹೆಚ್ಚು ಮಹಾತ್ಮರ ಜಯಂತಿಗಳನ್ನುಆಚರಿಸುತ್ತಿದೆ. ಶ್ರೀಜಗದ್ಗುರುರೇಣುಕಾಚಾರ್ಯರು ಪ್ರಾಚೀನಕಾಲದಲ್ಲಿಯೇ ಕೊಲ್ಲಿಪಾಕಿಕ್ಷೇತ್ರದಲ್ಲಿ 18ಜಾತಿ-ಜನಾಂಗಗಳಿಗೆಮಠಗಳನ್ನು ನಿರ್ಮಿಸಿ ಆ ಸಮುದಾಯಗಳನ್ನುಮೇಲೆತ್ತುವ ಕಾರ್ಯ ಮಾಡಿದ್ದಾರೆ.ಮಹಿಳೆಯರಿಗೆ,ಕೆಳವರ್ಗದವರಿಗೆಸಮಾನತೆ ನೀಡಿ ಇತರರಿಗೆ ಮೇಲ್ಪಂಕ್ತಿಹಾಕಿ ಕೊಟ್ಟಿದ್ದಾರೆ.ಸಾಮಾಜಿಕ ನ್ಯಾಯಕ್ಕೆ ಪೂಜ್ಯರದ್ದು ದೊಡ್ಡ ಕೊಡುಗೆಎಂದು ತಂಗಡಗಿ ಸ್ಮರಿಸಿದರು.
ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ದೊಡ್ಡಗುಣಿಹಿರೇಮಠದ ಶ್ರೀರೇವಣಸಿದ್ದೇಶ್ವರಶಿವಾಚಾರ್ಯ ಸ್ವಾಮಿಗಳು,ಜೀವಾತ್ಮಪರಮಾತ್ಮನಾಗಲು ಬೇಕಾದ ಮಹಾಮಾರ್ಗವನ್ನುಜಗದ್ಗುರು ರೇಣುಕಾಚಾರ್ಯರುಬೋದಿಸಿದ್ದಾರೆ.ದಲಿತ ವರ್ಗದಲ್ಲಿಜನಿಸಿದ ಪಂಚ ಮುನಿಗಳಿಗೆ ಜಗದ್ಗುರುಪಂಚಾಚಾರ್ಯರು ತತ್ವೋಪದೇಶ ಮಾಡುವಮೂಲಕ ಸಾಮಾಜಿಕ ನ್ಯಾಯವನ್ನುಎತ್ತಿ ಹಿಡಿದಿದ್ದಾರೆ ಎಂದರು.
ಸಮಾರಂಭದಲ್ಲಿವಿಜಯವಾಣಿ ಹಿರಿಯ ವರದಿಗಾರ ಹಾಗೂಸಾಹಿತಿ ಪ್ರಶಾಂತ ರಿಪ್ಪನ್‌ಪೇಟೆಜಗದ್ಗುರು ರೇಣುಕಾಚಾರ್ಯರ ಸಾಮಾಜಿಕಸತ್ಕ್ರಾಂತಿ ಕುರಿತು ಉಪನ್ಯಾಸನೀಡಿದರು. ಗಾನಸುಧೆಭನಾ ಮಂಡಳಿಯ ಶಿವಶಂಕರ ಶಾಸಿತಂಡದವರಿಂದ ರೇಣುಕ ಗೀತಗಾಯನನಡೆಯಿತು. ವೀರಶೈವಲಿಂಗಾಯತ ಸಮನ್ವಯ ವೇದಿಕೆ ಮುಖಂಡಪಾಲನೇತ್ರ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದಯುವ ಘಟಕದ ಅಧ್ಯಕ್ಷ ಮನೋಹರಅಬ್ಬಿಗೆರೆ,ಮಹಿಳಾ ಘಟಕದಅಧ್ಯಕ್ಷೆ ವೀಣಾ ಕಾಶಪ್ಪನವರ್,ಕಾರ್ಯದಶಿ ರೇಣುಕಪ್ರಸನ್ನ, ಬೆಂಗಳೂರುಘಟಕದ ಅಧ್ಯಕ್ಷ ಬಿ.ಆರ್.ನವೀನ್‌ಕುಮಾರ್,ಮಾಜಿ ಮೇಯರ್ಪುಟ್ಟರಾಜು,ಕನ್ನಡ ಮತ್ತುಸಂಸ್ಕೃತಿ ಇಲಾಖೆ ನಿರ್ದೇಶಕಡಾ.ಬಿ.ಎಸ್.ಮಂಜುನಾಥಸ್ವಾಮಿ,ಜಂಟಿ ನಿರ್ದೇಶಕಬಲವಂತರಾವ್ ಪಾಟೀಲ್ ಮತ್ತಿತರರುಪಾಲ್ಗೊಂಡಿದ್ದರು.
ಮಹಾಪುರುಷರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಸರ್ವರ ಒಳಿತಿಗಾಗಿ, ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಿದವರು. ರೇಣುಕಾದಿ ಆಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಶಾಂತಿ ಎಂದು ಪ್ರತಿಪಾದಿಸಿದ್ದಾರೆ. ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ. ವೀರಶೈವ ಲಿಂಗಾಯತ ಮಠಮಾನ್ಯಗಳು ಸರ್ವ ಧರ್ಮ, ಸರ್ವಜಾತಿ, ಜನಾಂಗದವರಿಗೂ ಆಶ್ರಯ, ಅನ್ನ ಮತ್ತು ವಿದ್ಯೆ ನೀಡುವ ಮೂಲಕ ಪರಂಪರೆಯನ್ನು ಪೋಷಿಸಿಕೊಂಡು ಬಂದಿವೆ.