ಘಟಪ್ರಭಾ: ಸಮೀಪದ ಕೊಣ್ಣೂರ ಪಟ್ಟಣದಲ್ಲಿ ಜ.8ರಿಂದ 9ರವರೆಗೆ ಮರಡಿಮಠದ ಡಾ.ಪವಾಡೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಜ.8ರಂದು ಸಂಜೆ 7 ಗಂಟೆಗೆ ರೇಣುಕಾದೇವಿ ಹಾಗೂ ಲಕ್ಷಿ$್ಮದೇವಿ ಸೇರಿ ಎಲ್ಲ ದೇವರ ಪಲ್ಲಕ್ಕಿಗಳು ರೇಣುಕಾದೇವಿ ದೇವಸ್ಥಾನಕ್ಕೆ ಆಗಮಿಸಲಿವೆ. ರಾತ್ರಿ 9 ಗಂಟೆಗೆ ಹರದೇಶಿ&ನಾಗೇಶಿ ಡೊಳ್ಳಿನ ಪದ ಜರುಗಲಿವೆ. ಜ.9ರಂದು ಬೆಳಗ್ಗೆ 9 ಗಂಟೆಗೆ ರೇಣುಕಾದೇವಿ ಹಾಗೂ ಎಲ್ಲ ದೇವರ ಪಲ್ಲಕ್ಕಿಗಳಿಗೆ ಉಡಿ ತುಂಬಿದ ಬಳಿಕ ಅದ್ದೂರಿ ಪಲ್ಲಕ್ಕಿ ಉತ್ಸವ ಜರುಲಿದೆ. ಬೆಳಗ್ಗೆ 10 ರಿಂದ ಸಂಜೆ ವರೆಗೆ ಹರದೇಶಿ&ನಾಗೇಶಿ ಚೌಡಕಿ ಪದಗಳ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಜರುಗಲಿದೆ ಎಂದು ದೇವಋಷಿ ಕಾಡಣ್ಣ ಅಜ್ಜನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.