ಊಟ ಮಾಡುವಾಗ ರೈತರನ್ನು ಸ್ಮರಿಸಿ / DEVANAHALLI

ದೇವನಹಳ್ಳಿಯಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಮಣ್ಣು ದಿನಾಚರಣೆಯಲ್ಲಿ ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು ಮಾತನಾಡಿದರು. ಕೃಷಿಕ ಸಮಾಜದ ಉಪಾಧ್ಯಕ್ಷ ಮಾರೇಗೌಡ, ಪ್ರಧಾನಕಾರ್ಯದರ್ಶಿ ಎಸ್​.ಪಿ.ಮುನಿರಾಜು, ನಿರ್ದೇಶಕರಾದ ಎಚ್​.ಎಂ.ರವಿಕುಮಾರ, ಎನ್​.ಎಸ್​.ಸುರೇಶ, ಎ.ಮುನಿರಾಜು, ಡಿ.ಎಸ್​.ಮುನಿರಾಜು, ಟಿ.ಮಂಜುನಾಥ್​ ಇದ್ದರು.
ದೇವನಹಳ್ಳಿಯಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಮಣ್ಣು ದಿನಾಚರಣೆಯಲ್ಲಿ ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು ಮಾತನಾಡಿದರು. ಕೃಷಿಕ ಸಮಾಜದ ಉಪಾಧ್ಯಕ್ಷ ಮಾರೇಗೌಡ, ಪ್ರಧಾನಕಾರ್ಯದರ್ಶಿ ಎಸ್​.ಪಿ.ಮುನಿರಾಜು, ನಿರ್ದೇಶಕರಾದ ಎಚ್​.ಎಂ.ರವಿಕುಮಾರ, ಎನ್​.ಎಸ್​.ಸುರೇಶ, ಎ.ಮುನಿರಾಜು, ಡಿ.ಎಸ್​.ಮುನಿರಾಜು, ಟಿ.ಮಂಜುನಾಥ್​ ಇದ್ದರು.
Published on
ದೇವನಹಳ್ಳಿ : ತಾಲೂಕಿನ ಕೃಷಿಕ ಸಮಾಜ ಹಾಗೂ ಜಿಲ್ಲಾ ಕೃಷಿಕ ಸಮಾಜ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಬಹಳ ಅನುಕೂಲವಾಗಿದೆ. ವಿಶೇಷ ಕಾರ್ಯಾಗಾರಗಳ ಮೂಲಕ ಉಪಯುಕ್ತ ಮಾಹಿತಿ ಹಾಗೂ ಆಧುನಿಕ ಬೇಸಾಯ ಪದ್ಧತಿಯ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಬಮುಲ್​ ನಿದೇರ್ಶಕ ಎಸ್​.ಪಿ.ಮುನಿರಾಜು ಹೇಳಿದರು.
ಪಟ್ಟಣದಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಮಣ್ಣು ದಿನಾಚರಣೆ, ಕಿಸಾನ್​ ಗೋಷ್ಠಿ, ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿನಿತ್ಯ ಊಟ ಮಾಡುವಾಗ ರೈತರನ್ನು ಸ್ಮರಿಸಲೇಬೇಕು. ರೈತರಿಗೆ ಅನುಕೂಲವಾಗುವ ಆಧುನಿಕ ಕೃಷಿ ಪದ್ಧತಿಯ ತರಬೇತಿ, ಯಾವ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು, ಜೇನು ಕೃಷಿ ರೈತರಿಗೆ ಎಷ್ಟರ ಮಟ್ಟಿಗೆ ವರದಾನ ಎಂಬುವುದರ ಸಮಗ್ರ ಮಾಹಿತಿಯನ್ನು ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಮೂಲಕ ನೀಡಬೇಕು.
ಸರ್ಕಾರ ಪ್ರತಿವರ್ಷವೂ ಬಜೆಟ್​ನಲ್ಲಿ ಕೋಟ್ಯಂತರ ರೂ. ಅನುದಾನವನ್ನು ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ಮೀಸಲಿಡುತ್ತಾರೆ. ರೈತರು ಸಾವಯವ ಗೊಬ್ಬರ ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಮುಖ್ಯವಾಗಿ ಮಣ್ಣಿನ ಆರೋಗ್ಯವೇ ಮನುಷ್ಯನ ಆರೋಗ್ಯ ಎಂಬ ಮಾತು ಸದಾ ನೆನಪಿನಲ್ಲಿಡಬೇಕು ಎಂದರು.
ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ಮಾರೇಗೌಡ ಮಾತನಾಡಿ, ತಿನ್ನುವ ಆಹಾರ ವಿಷಮಯವಾಗುತ್ತಿದೆ. ಆದ್ದರಿಂದ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರು ಭೂಮಿಯ ಫಲವತ್ತತೆ ಹೆಚ್ಚಿಸಲು ಸಾವಯವ ಕೃಷಿಯತ್ತ ಗಮನಹರಿಸಬೇಕು. ದೇಹದ ಆರೋಗ್ಯಕ್ಕಾಗಿ ಹೇಗೆ ತಪಾಸಣೆ ಮಾಡಿಸಿಕೊಳ್ಳುತ್ತೀರಿ. ಅದೇ ರೀತಿ ಮಣ್ಣಿನ ಆರೋಗ್ಯ ಪರೀಕ್ಷೆ ಮಾಡಿಸಿದರೆ ಸತ್ವಾಂಶದ ಕೊರತೆ ಮತ್ತು ಫಲವತ್ತತೆ ಹೆಚ್ಚುವುದರ ಜತೆಗೆ ಹವಾಮಾನ ಆಧಾರಿತವಾಗಿ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆ ಅಧಿಕಾರಿಗಳಾದ ಎಂ.ರಾಜಲಕ್ಷಿ$್ಮ, ಶಂಕರಯ್ಯ, ಎನ್​.ಶ್ವೇತಾ, ಕೃಷಿ ವಿಜ್ಞಾನಿ ಲಿಂಗರಾಜು, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ, ಪ್ರಗತಿಪರ ರೈತರಾದ ಸುಬ್ಬಣ್ಣ, ಮುನಿರಾಜು ಇತರರು ಇದ್ದರು.
ಜೇನು ಕೃಷಿಗೆ ಉತ್ತೇಜನ : ಮಣ್ಣು ಫಲವತ್ತಾಗಿದ್ದರೆ ಬೆಳೆ ಫಲವತ್ತಾಗಿರುತ್ತದೆ. ಹಾಗಾಗಿ ಯಾವುದೇ ಬೆಳೆ ಬೆಳೆಯುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿದರೆ ಅದರ ಸಂತ್ಯಾಂಶ ಕೊರತೆ ನೀಗಿಸಬಹುದು. ಜತೆಗೆ ಯಾವ ಬೆಳೆ ಬೆಳೆದರೆ ಇಳುವರಿ ಬರುತ್ತದೆ ಎಂದು ತಿಳಿಯುತ್ತದೆ. ಜೇನು ಕೃಷಿಗೆ ಉತ್ತೇಜನ ನೀಡಿದೆ. ಜೇನು ಹುಳುಗಳ ಪರಾಗಸ್ಪರ್ಶದಿಂದ ಬೆಳೆ ಫಲವತ್ತಾಗಿ ಬೆಳೆಯಬಹುದು. ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿ ಮಾಡಿದರೆ ಒಳಿತು. ದೇಶ ಕಾಯುವ ಯೋಧರಿಗೆ ನೀಡುವ ಗೌರವವನ್ನು ಅನ್ನದಾತರಿಗೂ ನೀಡಬೇಕು ಎಂದು ಕೃಷಿ ಇಲಾಖೆ ವಿಜ್ಞಾನಿ ಈಶ್ವರಪ್ಪ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net