

ನಂದಗುಡಿ :
ದೇವಾಲಯಗಳು ಜನರನ್ನು ಒಗ್ಗೂಡಿಸುವ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ವೇದಿಕೆಯಾಗುವ ಕೇಂದ್ರಗಳಾಗಿವೆ. ಇಂತಹ ಧಾರ್ಮಿಕ ಕೇಂದ್ರಗಳ ಸಂರಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೋಬಳಿಯ ತಾವರೆಕೆರೆ ಶ್ರೀಚನ್ನಕೇಶವ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಗೋಪುರ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟಿನ ಸಂದೇಶ ಸಾರುತ್ತವೆ. ಧಾರ್ಮಿಕ ಕೇಂದ್ರದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಮುಖ್ಯವಾದದ್ದು. ಹಿರಿಯರು ದೇವಾಲಯಗಳನ್ನು ಕೇವಲ ದೇವರ ಆರಾಧನೆಯ ಸ್ಥಳಗಳಾಗಿ ನಿರ್ಮಿಸಿರಲಿಲ್ಲ, ಸಂಸತಿ, ಸಂಪ್ರದಾಯ ಹಾಗೂ ಪರಂಪರೆ ಉಳಿಸಿ ಬೆಳೆಸುವ ಪ್ರಮುಖ ಕೇಂದ್ರಗಳಾಗಿ ರೂಪಿಸಿದ್ದರು.
ಧಾರ್ಮಿಕ ಕೇಂದ್ರಗಳು ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗದೆ, ಇವುಗಳಿಗೆ ಐತಿಹಾಸಿಕ ಹಾಗೂ ಸಾಂಸತಿಕ, ವೈಜ್ಞಾನಿಕ ಮಹತ್ವವಿದೆ. ಶ್ರೀಚನ್ನಕೇಶವ ಸ್ವಾಮಿಯ ಆಶೀರ್ವಾದದಿಂದ ಗ್ರಾಮಸ್ಥರು ಸುಖ, ಶಾಂತಿ, ಆರೋಗ್ಯದಿಂದ ಜೀವನ ನಡೆಸುವಂತಾಗಲಿ. ದೇವಾಲಯದ ಧಾರ್ಮಿಕ ಚಟುವಟಿಕೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
3 ದಿನಗಳ ಕಾಲ ವಿವಿಧ ಹೋಮ, ಹವನ, ವಿಶೇಷ ಪೂಜೆ, ಧಾರ್ಮಿಕ ವಿಧಿ&ವಿಧಾನ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಚನ್ನಕೇಶವ ಸ್ವಾಮಿಯ ದರ್ಶನ ಪಡೆದರು. ಭಕ್ತರಿಗೆ ಅನ್ನಸಂತರ್ಪಣೆ ಸೇವೆ ನಡೆಯಿತು.
ಹೊಸಕೋಟೆ ಕುರುಬರ ಸಂದ ಕಾರ್ಯದರ್ಶಿ ಟಿ.ಜಿ.ಶ್ರೀಕಾಂತ್, ಬಿಜೆಪಿ ಮುಖಂಡರಾದ ನಿಖಿಲ್, ಪ್ರಶಾಂತ್, ಸಾಂಬಾಜಿ ರಾವ್, ಕೃಷ್ಣೋಜಿ ರಾವ್, ಅರುಣ್ ಕುಮಾರ್, ನಾಗರಾಜ್, ವಿಜಯ್ ಕುಮಾರ್, ದೇವಾಲಯ ಸಮಿತಿ ಅಧ್ಯ ವಿ.ಎನ್.ನಾಗರಾಜ್, ಉಪಾಧ್ಯ ಎಸ್.ನಾಗರಾಜ್, ಕಾರ್ಯದರ್ಶಿ ವಿಜಯ್ ಕುಮಾರ್, ಸದಸ್ಯರಾದ ರೂಪ ಬಸವಪ್ರಕಾಶ್, ಮುನಿಯಮ್ಮ, ಮೇಲೂರಪ್ಪ, ಟಿ.ಕೆ.ಶಂಕರ್, ಚಂದ್ರಶೇಖರ್, ಪ್ರಧಾನ ಅರ್ಚಕರಾದ ಬಸವರಾಜ್ ಆರಾಧ್ಯ, ಸುನಿಲ್ ಶಾಸಿ, ಇತರರು ಇದ್ದರು.