ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ನೀರು ಹರಿಸಿ

ಯಾದಗಿರಿ ಹೊರವಲಯದ ದೊಡ್ಡ ಕೆರೆಗೆ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ನೀರು ಹರಿಸಬೇಕೆಂದು ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ನಾಳ್ ನೇತೃತ್ವದಲ್ಲಿ ಭಾನುವಾರ ಕೆರೆ ಪರಿಸರದಲ್ಲಿ ಪ್ರತಿಭಟನೆ ನಡೆಯಿತು. ಶರಣಗೌಡ, ಭೀಮಾಶಂಕರ, ಮಹ್ಮದ್ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲಪ್ಪ, ಸೂರಪ್ಪ, ಮಹಾದೇವಪ್ಪ ಮಹಾಂತೇಶ, ಹಣಮಂತ ಇತರರಿದ್ದರು.

Published on

ನಗರ ಹೊರವಲಯದ ದೊಡ್ಡ ಕೆರೆಗೆ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ನೀರು ಹರಿಸಬೇಕೆಂದು ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ನಾಳ್ ಆಗ್ರಹಿಸಿದ್ದಾರೆ.

ರೈತರು ಮತ್ತು ಸಾರ್ವಜನಿಕರೊಂದಿಗೆ ಭಾನುವಾರ ದೊಡ್ಡ ಕೆರೆ ಪರಿಸರದಲ್ಲಿ ಪ್ರತಿಭಟನೆ ನಡೆಸಿದ ಅವರು, ಮೂರು ವರ್ಷ ಹಿಂದೆಯೇ ಸನ್ನತಿ ಸೇತುವೆಯಿಂದ ದೊಡ್ಡ ಕೆರೆವರೆಗೆ ಪೈಪ್‌ಲೈನ್ ಮಾಡಿದ್ದರೂ ಹನಿ ನೀರಿ ಹರಿಸಿಲ್ಲ. ನಗರ ಹಾಗೂ ಸುತ್ತಮುತ್ತಲಿನ ಹಳ್ಳಿ ಜನರ ಜೀವನಾಡಿಯಾಗಿರುವ ದೊಡ್ಡ ಕೆರೆ ಮಳೆಯಿಲ್ಲದೆ ತುಂಬುತ್ತಿಲ್ಲ. ಇದರಿಂದ ಈ ಕೆರೆ ನೀರು ನಂಬಿದ ರೈತರು ಕಷ್ಟದಲ್ಲಿದ್ದು ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟದಲ್ಲಿ ಮಳೆ ಹೆಚ್ಚಾಗಿದ್ದರಿಂದ ಭೀಮಾ ನದಿಗೆ ಬಂದ ೫೦ ಸಾವಿರ ಕ್ಯೂಸೆಕ್ ನೀರು ಹರಿದು ತೆಲಂಗಾಣ ಪಾಲಾಗುತ್ತಿದೆ. ಇದನ್ನು ಗಮನಿಸಿದ ಜಿ¯್ಲÁಡಳಿತ ಗುರುಸುಣಿಗಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಸುಮಾರು ೩೫ ಕೆರೆಗಳಿಗೆ ಮೂರು ದಿನಗಳಿಂದ ನಿರಂತರ ನೀರು ಹರಿಸುತ್ತಿದೆ. ಆದರೆ ಸನ್ನತಿ ಬ್ಯಾರೇಜ್‌ನಿಂದ ದೊಡ್ಡ ಕೆರೆವರೆಗೆ ಪೈಪ್‌ಲೈನ್ ಏಕೆ ನೀರು ಹರಿಸುತ್ತಿಲ್ಲ? ಈಗಲೂ ಕಾಲಮಿಂಚಿಲ್ಲ, ದೊಡ್ಡಕೆರೆಗೆ ನೀರು ಹರಿಸಿ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದರೆ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಶರಣಗೌಡ, ಭೀಮಾಶಂಕರ, ಮಹ್ಮದ್ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲಪ್ಪ, ಸೂರಪ್ಪ, ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ, ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವಕುಮಾರ, ಮಹೇಶ, ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸz್ದÁಂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net