ಖರೀದಿದಾರರು-ಮಾರಾಟಗಾರರ ಸಮಾವೇಶದಲ್ಲಿ ದಾಖಲೆ ವ್ಯವಹಾರ: 45.47 ಕೋಟಿ ವ್ಯಾಪಾರದ ಒಪ್ಪಂದಕ್ಕೆ ಸಹಿ | KSRLPS

ಬೆಂಗಳೂರಿನ 32ಕ್ಕೂ ಅಧಿಕ ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಮೇಳದಲ್ಲಿ, ಉತ್ಪನ್ನಗಳ ನಿರಂತರ ಖರೀದಿಗೆ ಸಂಬಂಧಿಸಿದಂತೆ ಅಭಿಯಾನದ ನಿರ್ದೇಶಕರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರ ಉಪಸ್ಥಿತಿಯಲ್ಲಿ ಪ್ರಮುಖ ಒಪ್ಪಂದಗಳಿಗೆ (MoU) ಸಹಿ ಹಾಕಲಾಯಿತು.
KSRLPS
ಖರೀದಿದಾರರು-ಮಾರಾಟಗಾರರ ಸಮಾವೇಶದಲ್ಲಿ ದಾಖಲೆ ವ್ಯವಹಾರ: 45.47 ಕೋಟಿ ವ್ಯಾಪಾರದ ಒಪ್ಪಂದಕ್ಕೆ ಸಹಿ
Published on: 

ಬೆಂಗಳೂರು: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (KSRLPS) ಸಹಯೋಗದಲ್ಲಿ ಜಯಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸಲಾಗಿದ್ದ ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶದಲ್ಲಿ ಬರೋಬ್ಬರಿ 45.47 ಕೋಟಿ ರೂಪಾಯಿಗಳ ದಾಖಲೆ ವ್ಯವಹಾರ ನಡೆದಿದೆ.

ರಾಜ್ಯದ 60 ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಗಳು ಮತ್ತು ಸ್ವಸಹಾಯ ಗುಂಪುಗಳು ಉತ್ಪಾದಿಸಿದ ಗೃಹಾಲಂಕಾರಿಕ ವಸ್ತುಗಳು, ಕರಕುಶಲ, ಕೈಮಗ್ಗ, ಸಾವಯವ ಆಹಾರ ಉತ್ಪನ್ನಗಳು ಹಾಗೂ ಮಸಾಲೆ ಪದಾರ್ಥಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಬೆಂಗಳೂರಿನ 32ಕ್ಕೂ ಅಧಿಕ ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಮೇಳದಲ್ಲಿ, ಉತ್ಪನ್ನಗಳ ನಿರಂತರ ಖರೀದಿಗೆ ಸಂಬಂಧಿಸಿದಂತೆ ಅಭಿಯಾನದ ನಿರ್ದೇಶಕರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರ ಉಪಸ್ಥಿತಿಯಲ್ಲಿ ಪ್ರಮುಖ ಒಪ್ಪಂದಗಳಿಗೆ (MoU) ಸಹಿ ಹಾಕಲಾಯಿತು.

Also Read
ಈ ವಾರ ಇಬ್ಬರು ಎಲಿಮಿನೇಟ್​! ತಾಂಡವ್​ ರಾಮ್​ ದೊಡ್ಮನೆಗೆ ವಾಪಾಸ್​ ಬೆನ್ನಲ್ಲೇ ಹೊಸ ವೈಲ್ಡ್​ಕಾರ್ಡ್​ ಎಂಟ್ರಿಗಳು? | BBK13
KSRLPS

ಸಂಜೀವಿನಿ ಅಭಿಯಾನದ ನಿರ್ದೇಶಕರಾದ ಶ್ರೀನಿವಾಸ್ ಎಂ., ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ. ಕವಿತಾ ಯೋಗಪ್ಪನವರ್ ಹಾಗೂ ಸಂಘಟನೆಯ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಈ ಸಮಾವೇಶ ಯಶಸ್ವಿಯಾಗಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net