ಕಲಬುರಗಿ ರಂಗಾಯಣ ಸಭಾಭವನದಲ್ಲಿ ಮಹಿಳಾ ದಿನ ನಿಮಿತ್ತ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಜಯದೇವಿ ಗಾಯಕವಾಡ ಅವರ ಕಾವ್ಯ ಸಂಕಲನ ಗ್ರಂಥವನ್ನು ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಬಿಡುಗಡೆ ಮಾಡಿದರು. ಡಾ.ಸದಾನಂದ ಪೆರ್ಲ, ಡಾ.ಗವಿಸಿದ್ದಪ್ಪ ಪಾಟೀಲ್, ಪ್ರೊ.ಶಿವರಾಜ ಪಾಟೀಲ್, ಡಾ.ಶೋಭಾದೇವಿ ಚಕ್ಕಿ, ಪಂಚಾರಿ ಸ್ವಾಮೀಜಿ ಇತರರಿದ್ದರು.
ಕಲಬುರಗಿ: ಕೊಡುವ ಮತ್ತು ಪಡೆಯುವ ಕೈ ಶುದ್ಧವಾಗಿರಬೇಕು. ಯೋಗ ಇಲ್ಲದವರಿಗೆ ಯೋಗ್ಯತೆ ಇರಲ್ಲ. ಯೋಗ್ಯತೆ ಇರುವವರಿಗೆ ಯೋಗ ಇರುವುದಿಲ್ಲ. ಇಲ್ಲಿ ಸಾಧಕರ ಗುರುತಿಸಿ ಮುಖ್ಯವಾಹಿನಿಗೆ ತಂದಿದ್ದು, ಜವಾಬ್ದಾರಿ ಹೆಚ್ಚಿಸಿಕೊಂಡು ಕಾರ್ಯ ಮಾಡಬೇಕು ಎಂದು ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ರಂಗಾಯಣ ಸಭಾ ಭವನದಲ್ಲಿ ಸಿರಿಗನ್ನಡ ವೇದಿಕೆ ಸೋಮವಾರ ಏರ್ಪಡಿಸಿದ್ದ ವಿಾನ ರತ್ನ ಮತ್ತು ತ್ರಿವೇಣಿ ಸಂಗಮ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಶೇ.33 ಮೀಸಲು ಸಿಗಲಿದ್ದು, ಸಾಹಿತ್ಯ ಸಮಾಜ ಸೇವೆಯ ಮಹಿಳಾ ಮಣಿಗಳಿಗೆ ಅವಕಾಶ ಹೆಚ್ಚಲಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಹಾಗೂ ಹಿರಿಯ ಸಾಹಿತಿ ಪ್ರೊ.ಶಿವರಾಜ ಪಾಟೀಲ್ ಮಾತನಾಡಿದರು.
ವೈದ್ಯಾಧಿಕಾರಿ ಡಾ.ಸಂಧ್ಯಾ ಕಾನೇಕರ್ ಮಾತನಾಡಿ, ತಂದೆ ಓದಿಸಿ ಬರೆಸಿದರೆ, ಪತಿ ನೌಕರಿ ಜತೆ ಸಮಾಜದಲ್ಲಿ ದುಡಿಮೆಗೆ ಅವಕಾಶ ಕಲ್ಪಿಸಿದವರನ್ನು ಮರೆಯಬಾರದು ಎಂದರು.
ಸಾಹಿತಿ ಡಾ.ಜಯದೇವಿ ಗಾಯಕವಾಡರ ಸಾಕಿ ಕೇಳಿದ ರುಬಾಯಿಗಳು ಎಂಬ ಕಾವ್ಯ ಸಂಕಲನ ಬಿಡುಗಡೆ ಮಾಡಿದ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಮಾತನಾಡಿ, ಇಂತಹ ಅಪರೂಪದ ನಾಲ್ಕು ಸಾಲಿನ ಪದ್ಯ ಡಿವಿಜಿ, ಬ್ಯಾಳಿ, ಅಮರಚಿಂತ ಸೇರಿ ಅನೇಕ ಕವಿಗಳು ಬರೆದಿದ್ದಾರೆ. ಆದರೆ ಮಹಿಳೆಯರು ಬರೆದ ಮೊದಲ ರುಬಾಯಿ ಸಂಕಲನ ಇದಾಗಿದೆ. ಇಲ್ಲಿ ಸಾಮಾಜಿಕ ಕಳಕಳಿ, ಮಹಿಳಾ ಚಿಂತನೆ, ದಲಿತ ಪ್ರೆ ವ್ಯಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯತೆ ವಹಿಸಿದ್ದ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯ ಡಾ.ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, ವೇದಿಕೆಯು ಸಾಹಿತ್ಯ, ಸಂಸತಿ ಬೆಳೆಸಿ ಸಾಹಿತಿ, ಕವಿ, ಕಲಾವಿದರನ್ನು ಮುಖ್ಯವಾಹಿನಿಗೆ ತಂದು ಉತ್ತಮ ಸಾಧಕರನ್ನು ಉತ್ತೇಜಿಸಲು ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಬೇಲೂರು ಉರಿಲಿಂಗಪೆದ್ದಿ ಮಠದ ಶ್ರೀ ಪಂಚಾರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಪೀರಪ್ಪ ಸಜ್ಜನ್ ಮತ್ತು ಶೋಭಾದೇವಿ ಚೆಕ್ಕಿ ಪ್ರಾರ್ಥಿಸಿದರು. ಕೋಶಾಧ್ಯ ಸಿದ್ದರಾಮ ಸರಸಂಬಿ ಸ್ವಾಗತಿಸಿದರು. ಡಾ.ಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಜಕುಮಾರ ಮಾಳಗೆ ನಿರೂಪಣೆ ಮಾಡಿದರು. ಡಾ.ಶೀಲಾದೇವಿ ಬಿರಾದಾರ್ ವಂದಿಸಿದರು.
ಭಾರತ ರತ್ನ ಸಿ.ವಿ.ರಾಮನ್ ಮತ್ತು ಸಾವಿತ್ರಿಬಾಯಿ, ಫಾತಿಮಾ ಶೇಖ, ರಮಾಬಾಯಿ ಅಂಬೇಡ್ಕರ್ ಹೋರಾಟ, ತ್ಯಾಗ, ಶಿಣ ಮತ್ತು ಸಾಮುದಾಯಿಕ ಚಿಂತನೆಯನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.