ನಿವೇಶನ ರಕ್ಷಣೆಗೆ ರೆಡಿಮೇಡ್ ಕಾಂಪೌಂಡ್; ಖರ್ಚು ಕಡಿಮೆ, ತ್ವರಿತ ಕೆಲಸ, ತರಹೇವಾರಿ ಡಿಸೈನ್

ನಿವೇಶನ ರಕ್ಷಣೆಗೆ ರೆಡಿಮೇಡ್ ಕಾಂಪೌಂಡ್
ನಿವೇಶನ ರಕ್ಷಣೆಗೆ ರೆಡಿಮೇಡ್ ಕಾಂಪೌಂಡ್
Published on

ಪ್ರಮುಖ ಮುಖ್ಯಾಂಶಗಳು

  • ನಿವೇಶನ ರಕ್ಷಣೆಗೆ ರೆಡಿಮೇಡ್ ಕಾಂಪೌಂಡ್ ತಕ್ಕಮಟ್ಟಿನ ಪರಿಹಾರ
  • ರೆಡಿಮೇಡ್ ಕಾಂಪೌಂಡ್​ಗಳಿಗೆ ವೆಚ್ಚ ಕಡಿಮೆ, ತ್ವರಿತ ಕೆಲಸ
  • ನೋಡಲು ಆಕರ್ಷಕ, ಯಾವಾಗ ಬೇಕಾದರೂ ಸ್ಥಳಾಂತರಿಸಬಹುದು

ಪ್ರಶಾಂತರಿಪ್ಪನ್​ಪೇಟೆ ಬೆಂಗಳೂರು:ಜೀವನದಲ್ಲಿಒಂದು ಸ್ವಂತ ನಿವೇಶನ ಅಥವಾ ಆಸ್ತಿಖರೀದಿಸಿ ನಮ್ಮದೇ ಒಂದು ಸೂರುನಿರ್ಮಿಸಿಕೊಳ್ಳಬೇಕೆಂಬ ಬಯಕೆಬಹುತೇಕ ಎಲ್ಲರಿಗೂ ಇರುತ್ತದೆ.ಶ್ರಮ ಮತ್ತುಪ್ರಯತ್ನದಿಂದ ಅದರಲ್ಲಿ ಯಶಸ್ವಿಯೂಆಗಬಹುದು. ಆದರೆನಿವೇಶನ ಅಥವಾ ಆಸ್ತಿ ಖರೀದಿಸಿದಕೂಡಲೇ ಅಲ್ಲಿ ಮನೆ ನಿರ್ಮಿಸಲುಸಾಧ್ಯವಾಗದ ಸಂದರ್ಭದಲ್ಲಿ ನಿವೇಶನಅಥವಾ ಆಸ್ತಿ ರಕ್ಷಣೆಗೆ ರೆಡಿಮೇಡ್ಕಾಂಪೌಂಡ್ ಉತ್ತಮ ಪರಿಹಾರ.

ನಿವೇಶನಅಥವಾ ಮನೆ ನಿರ್ಮಿಸಿದ ನಂತರವುಕಾಂಪೌಂಡ್ ಅತ್ಯವಶ್ಯಕ.ಆದರೆ ಈ ಹಿಂದಿನಂತೆಪೂರ್ಣ ಗೋಡೆಯ ಕಾಂಪೌಂಡ್ ನಿರ್ಮಾಣದವೆಚ್ಚ ಹೆಚ್ಚಾಗುವುದರಿಂದಕಾಂಪೌಂಡ್ ನಿರ್ಮಾಣ ಮಾಡದೇ ಹಾಗೇಬಿಡುತ್ತಾರೆ.ಜೊತೆಗೆ ಒಮ್ಮೆಕಾಂಪೌಂಡ್ ನಿರ್ಮಾಣವಾದ ನಂತರಅದನ್ನು ಮತ್ತೆ ಬದಲಿಸಲು ಸಾಧ್ಯವಿಲ್ಲ.ಆದರೆ ಹೊಸದಾಗಿಬಂದಿರುವ ರೆಡಿಮೇಡ್ ಕಾಂಪೌಂಡ್ಖರ್ಚು ಕಡಿಮೆ ಮತ್ತು ಕೆಲಸವೂಕೂಡಲೇ ಆಗುತ್ತದೆ.ಜತೆಗೆ ಈ ಕಾಂಪೌಂಡ್ಯಾವಾಗ ಬೇಕಾದರು ತೆಗೆದು ಹೊಸಸ್ವರೂಪದಲ್ಲಿ ಬಳಸಬಹುದು.ನಿವೇಶನಕ್ಕೆಹಾಕಿದ ರೆಡಿಮೇಡ್ ಕಾಂಪೌಂಡ್‌ನ್ನುಮನೆ ನಿರ್ಮಾಣದ ಸಂದರ್ಭದಲ್ಲಿತೆಗೆದು ಮರಳು,ಜೆಲ್ಲಿ,ಇಟ್ಟಿಗೆ ಇತ್ಯಾದಿಮನೆ ನಿರ್ಮಾಣಕ್ಕೆ ಬೇಕಾದಸಾಮಾಗ್ರಿಗಳ ಲಾರಿ ಮತ್ತಿತರವಾಹನವನ್ನು ನಿವೇಶನದ ಒಳಗೆತರಬಹುದು. ಕಾಮಗಾರಿಮುಗಿದ ನಂತರ ಯಥಾಪ್ರಕಾರಕಾಂಪೌಂಡ್‌ಗಳನ್ನು ಮರು ಜೋಡಿಸಲುಅವಕಾಶವಿರುತ್ತದೆ.

ಆಸ್ತಿರಕ್ಷಣೆ ಒಂದು ಸವಾಲು

ಬೆಂಗಳೂರುಮತ್ತು ಸುತ್ತಮುತ್ತಲ ಪ್ರದೇಶದಲ್ಲಿರಿಯಲ್ ಎಸ್ಟೇಟ್ ಬೃಹದಾಕಾರವಾಗಿಬೆಳೆದಿದೆ. ನಗರದಕೇಂದ್ರಭಾಗದಿಂದ 50ಕಿ.ಮೀ.ವರೆಗೂಬೆಂಗಳೂರು ನಿವಾಸಿಗಳನ್ನುಟಾರ್ಗೆಟ್ ಮಾಡಿ ಹೊಸ ಬಡಾವಣೆಗಳನ್ನುಅಭಿವೃದ್ಧಿಪಡಿಸಲಾಗುತ್ತದೆ.ಹೊಸ ಬಡಾವಣೆಗಳಲ್ಲಿನಿವೇಶನಗಳನ್ನು ಖರೀದಿ ಮಾಡಿಕೂಡಲೇ ಮನೆ ನಿರ್ಮಾಣ ಮಾಡದಿರುವಸಂದರ್ಭದಲ್ಲಿ ಆ ನಿವೇಶನಗಳ ರಕ್ಷಣೆಕೂಡಾ ದೊಡ್ಡ ಸವಾಲು.

ರಿಯಲ್ಎಸ್ಟೇಟ್ ಮಾಫಿಯಾದ ಕರಾಳ ಕೈಗಳುಎಲ್ಲೆಂದರಲ್ಲಿ ಜಾಗ ಒತ್ತುವರಿಮಾಡುವುದು, ನಂತರಅನಾವಶ್ಯಕ ಲಿಟಿಗೇಶನ್ ಕ್ರಿಯೇಟ್ಮಾಡಿ ಹಣದ ಬೇಡಿಕೆ ಇಟ್ಟು ರಾಜಿಗೆಮುಂದಾಗುತ್ತಾರೆ.ಆಸ್ತಿ ಉಳಿಸಿಕೊಳ್ಳಬೇಕಾದಒತ್ತಡಕ್ಕೆ ಮಣಿದು ಹಣ ನೀಡಲುಒಪ್ಪಬೇಕಾಗುತ್ತದೆ.ಇದಕ್ಕೆ ಪ್ರಮುಖಕಾರಣ ನಿವೇಶನ ಅಥವಾ ಆಸ್ತಿಯ ಗಡಿಗುರುತಿಸುವ ಸರಿಯಾದ ಬೌಂಡರಿಇಲ್ಲದಿರುವುದು.ಈ ಸಮಸ್ಯೆಗೆರೆಡಿಮೇಡ್ ಕಾಂಪೌಂಡ್ ತಕ್ಕಮಟ್ಟಿಗೆಪರಿಹಾರವನ್ನು ಒದಗಿಸುತ್ತದೆ.ಬೇಲಿ ಹಾಕಿದರೆಮನೆ ನಿರ್ಮಾಣದ ನಂತರ ಕಾಂಪೌಂಡ್ನಿರ್ಮಿಸಲೇ ಬೇಕು.ಸುಮ್ಮನೆ ಎರಡೆರಡುಖರ್ಚು ಏಕೆ ಎಂದು ಹಾಗೆ ಬಿಟ್ಟರೆಇನ್ನೊಂದು ರೀತಿಯ ಸಮಸ್ಯೆಗೆಕಾರಣವಾಗುತ್ತದೆ.

ತರಹೆವಾರಿ ರೆಡಿಮೇಡ್ ಕಾಂಪೌಂಡ್ ಲಭ್ಯ

ಹಿಂದೆಲ್ಲ ಮನೆ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಕಲ್ಲು-ಮಣ್ಣುಗಳ ಬಳಕೆ ಹೆಚ್ಚಾಗಿತ್ತು. ಈಗ ಎಲ್ಲದಕ್ಕೂ ಸಿಮೆಂಟ್ ಬಳಸಲಾಗುತ್ತದೆ. ಹಾಲೋ ಬ್ಲಾಕ್ಸ್‌ಗಳು ಬಂದ ನಂತರ ರೆಡಿಮೇಡ್ ಕಾಂಪೌಂಡ್ ಕಾನ್ಸೆಪ್ಟ್ ಚಾಲ್ತಿಗೆ ಬಂತು. ಪಿಲ್ಲರ್ ನಿಂದ ಪಿಲ್ಲರ್‌ಗೆ ಸಿಮೆಂಟ್ ಬ್ಲಾಕ್ಸ್‌ಗಳನ್ನು ಇಂಟರ್ ಲಾಕ್ ಮೂಲಕ ಜೋಡಿಸಲಾಗುತ್ತದೆ. ಬೇಡಿಕೆಗನುಗುಣವಾಗಿ ಎಷ್ಟು ಅಗಲ ಮತ್ತು ಎತ್ತರ ಬೇಕೋ ಆ ಅಳತೆಗಳಲ್ಲಿ ಬ್ಲಾಕ್‌ಗಳು ಸಿಗುತ್ತವೆ. ಇವುಗಳಲ್ಲಿ ಪ್ಲೇನ್, ವಿವಿಧ ಬಗೆಯ ಡಿಸೈನ್‌ಗಳು ದೊರೆಯುತ್ತವೆ. ಇತ್ತೀಚೆಗೆ ರೆಡಿಮೇಡ್ ಕಾಂಪೌಂಡ್‌ಗಳು ವಿವಿಧ ಬಣ್ಣಗಳಲ್ಲಿ ಆಕರ್ಷಕವಾಗಿಯೂ ದೊರೆಯುತ್ತಿವೆ. ನಿವೇಶನದ ಹಿಂದೆ ಮತ್ತು ಅಕ್ಕಪಕ್ಕದಲ್ಲಿ ಸಾದಾ ಬ್ಲಾಕ್‌ಗಳನ್ನು ಬಳಸಿ ಮನೆಯ ಮುಂದೆ ಆಕರ್ಷಕ ಬಣ್ಣ ಮತ್ತು ವಿನ್ಯಾಸದ ಬ್ಲಾಕ್‌ಗಳನ್ನು ಬಳಸಿ ಕಾಂಪೌಂಡ್ ನಿರ್ಮಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net