ಅಕ್ಷರವಂಚಿತ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿ

ಹುಮನಾಬಾದ್​ನಲ್ಲಿ ಶುಕ್ರವಾರ ಕರೆದಿದ್ದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಮಾತನಾಡಿದರು. ತಹಸೀಲ್ದಾರ್​ ಜಗದೀಶ ಚೌರ, ಜಿಲ್ಲಾ ಮಕ್ಕಳ ರಣಾಧಿಕಾರಿ ಶಾರದಾ, ತಾಪಂ ಇಒ ದೀಪಿಕಾ ನಾಯ್ಕರ್​, ಸಿಪಿಐ ಸಂತೋಷ ತಟ್ಟೆಪಳ್ಳಿ ಇತರರಿದ್ದರು.
ಹುಮನಾಬಾದ್​ನಲ್ಲಿ ಶುಕ್ರವಾರ ಕರೆದಿದ್ದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಮಾತನಾಡಿದರು. ತಹಸೀಲ್ದಾರ್​ ಜಗದೀಶ ಚೌರ, ಜಿಲ್ಲಾ ಮಕ್ಕಳ ರಣಾಧಿಕಾರಿ ಶಾರದಾ, ತಾಪಂ ಇಒ ದೀಪಿಕಾ ನಾಯ್ಕರ್​, ಸಿಪಿಐ ಸಂತೋಷ ತಟ್ಟೆಪಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಹಕ್ಕು ಆಯೋಗ ಸದಸ್ಯ ಹಲಮಡಗಿ ಸೂಚನೆ
  • ಹುಮನಾಬಾದ್​ನಲ್ಲಿ ಅಧಿಕಾರಿಗಳ ಸಭೆ
ಹುಮನಾಬಾದ್​: ಶಾಲೆ ಬಿಟ್ಟ ಮತ್ತು ಶಿಕ್ಷಣದಿಂದ ವಂಚಿತ ಪ್ರತಿಯೊಂದು ಮಗುವನ್ನು ಮರಳಿ ಶಾಲೆಗೆ ಸೇರಿಸಲು ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದಿದ್ದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಬೇಕು. ಶಿಕ್ಷಣ ಕಾರ್ಯಪಡೆ ರಚಿಸಿ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆಯಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ಪರಿಶೀಲನೆ ನಡೆಸಬೇಕು ಎಂದರು.
ಪಟ್ಟಣ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್​ ಸಹಾಯವಾಣಿ 112 ಕುರಿತು ಫಲಕ ಅಳವಡಿಸಬೇಕು. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ರಣಾ ನೀತಿ-2016ರನ್ವಯ ಮಕ್ಕಳ ರಕ್ಷಣಾ ಸಮಿತಿ ರಚಿಸಿ ನಿಯಮಿತ ಸಭೆ ನಡೆಸಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ತಹಸೀಲ್ದಾರ್​ ಜಗದೀಶ ಚೌರ, ಜಿಲ್ಲಾ ಮಕ್ಕಳ ರಣಾಧಿಕಾರಿ ಶಾರದಾ, ತಾಪಂ ಇಒ ದೀಪಿಕಾ ನಾಯ್ಕರ್​, ಸಿಪಿಐ ಸಂತೋಷ ತಟ್ಟೆಪಳ್ಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ ಅರಸ್​, ಸಿಡಿಪಿಒ ಶಿವಪ್ರಕಾಶ ಹಿರೇಮಠ, ಬಿಇಒ ವೆಂಕಟೇಶ ಗುಡಾಳ, ಶಿವಕುಮಾರ, ಗೌರಿಶಂಕರ, ರಾಹುಲ್​ ಪ್ರಸಾದ ಇತರರಿದ್ದರು.
ಸಭೆಯ ಬಳಿಕ ಚಿಟಗುಪ್ಪ ತಾಲೂಕಿನ ಮನ್ನಾಎಖೇಳಿ ಪೊಲೀಸ್​ ಠಾಣೆಗೆ ಭೇಟಿ ನೀಡಿದ ಜಗನ್ನಾಥ ಹಲಮಡಗಿ, ಠಾಣೆಯಲ್ಲಿನ ತೆರೆದ ಮನೆ, ಮಕ್ಕಳ ಮತ್ತು ಪೊಲೀಸ್​ ಸಹಾಯವಾಣಿ ವ್ಯವಸ್ಥೆ ಹಾಗೂ ಸಲಹಾ ಪೆಟ್ಟಿಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಿಎಸ್​ಐ ಮಹೇಂದ್ರಕುಮಾರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net