ಡಬ್ಲ್ಯೂಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್‌ಸಿಬಿ..ಐತಿಹಾಸಿಕ ಗೆಲುವಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮೆಚ್ಚುಗೆ | WPL Final 2026

 WPL Final 2026 | ಡಬ್ಲ್ಯೂಪಿಎಲ್ ಟ್ರೋಫಿಯೊಂದಿಗೆ ಆರ್​​ಸಿಬಿ ಆಟಗಾರ್ತಿಯರು
WPL Final 2026 | ಡಬ್ಲ್ಯೂಪಿಎಲ್ ಟ್ರೋಫಿಯೊಂದಿಗೆ ಆರ್​​ಸಿಬಿ ಆಟಗಾರ್ತಿಯರು
Published on
ಬೆಂಗಳೂರು: 2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದಿಸಿದ್ದಾರೆ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಮತ್ತೊಮ್ಮೆ ಆರ್.ಸಿ.ಬಿ ಮಹಿಳೆಯರ ತಂಡ ಡಬ್ಲ್ಯೂ.ಪಿ.ಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇಡೀ ಟೂರ್ನಿಯುದ್ದಕ್ಕೂ ಉತ್ಕೃಷ್ಟ ಪ್ರದರ್ಶನ ನೀಡುತ್ತಾ, ಇಂದಿನ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ನೋಡಿ ಖುಷಿಯಾಯಿತು.
ಸಂಘಟಿತ ಹೋರಾಟದ ಮೂಲಕ ಟ್ರೋಫಿ ಗೆದ್ದ ನಮ್ಮ ಆರ್.ಸಿ.ಬಿ ಯ ಹೆಣ್ಣುಮಕ್ಕಳಿಗೆ ಅಭಿನಂದನೆಗಳು. ಪಂದ್ಯದ ಕೊನೆಯವರೆಗೂ ಗೆಲುವಿಗಾಗಿ ಸಾಕಷ್ಟು ಸೆಣೆಸಿದ ಡೆಲ್ಲಿ ತಂಡದ ಆಟ ಕೂಡ ಶ್ಲಾಘನೀಯ, ಈ ಸಲ ಕಪ್​ ನಮ್ದು ಎಂದು ಬರೆದುಕೊಂಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಪೋಸ್ಟ್​​

ಡಬ್ಲ್ಯೂಪಿಎಲ್ ಪ್ರಶಸ್ತಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ತಂಡವು ಆತ್ಮವಿಶ್ವಾಸ, ಶಿಸ್ತು ಮತ್ತು ಏಕತೆಯನ್ನು ಪ್ರದರ್ಶಿಸಿತು, ಫೈನಲ್ ಪಂದ್ಯವನ್ನು ಅತ್ಯಂತ ಶಾಂತತೆಯಿಂದ ನಿರ್ವಹಿಸಿತು, ಫೈನಲ್‌ಗೆ ನಿಜವಾಗಿಯೂ ಸೂಕ್ತವಾದ ಪಂದ್ಯ, ಈ ಸಲ ಕೂಡ ಕಪ್ ನಮ್ದೇ ಎಂದು ಬರೆದುಕೊಂಡಿದ್ದಾರೆ.
ಗುರುವಾರ (ಫೆ-06) ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಸ್ಮೃತಿ ಮಂಧಾನ ಪಡೆ, ಎರಡನೇ ಬಾರಿಗೆ ಡೆಲ್ಲಿ ತಂಡವನ್ನು ಮಣಿಸಿ, ಡಬ್ಲ್ಯೂಪಿಎಲ್​ ಕಿರೀಟವನ್ನು ಮುಡಿಗೇರಿಸಿಕೊಂಡಿತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net