'ಸದ್ಯಕ್ಕಿಲ್ಲ ರೇಷನ್​ ಕಾರ್ಡ್​ ಪರಿಷ್ಕರಣೆ, ಸೆ.30ರೊಳಗೆ e-KYC ಕಡ್ಡಾಯ': ಸಚಿವ ರಿಜ್ವಾನ್ ಅರ್ಷದ್..Ration Card e-KYC

Ration Card e-KYC Karnataka
Ration Card e-KYC Karnataka
Published on

ಪ್ರಮುಖ ಮುಖ್ಯಾಂಶಗಳು

  • ರೇಷನ್ ಕಾರ್ಡ್ ಪರಿಷ್ಕರಣೆ ತಾತ್ಕಾಲಿಕ ನಿಲ್ಲಿಸಲಾಗಿದೆ ಎಂದ ಆಹಾರ ಸಚಿವ ರಿಜ್ವಾನ್ ಅರ್ಷದ್.
  •  ಸೆ.30ವರೆಗೆ ಇಕೆವೈಸಿ ಮಾಡಿಸಲು ಗಡುವು ನೀಡಲಾಗಿದೆ.
  • ರೇಷನ್​ ಕಾರ್ಡ್​ ರದ್ದಾಗುವ ಭೀತಿಯಲ್ಲಿದ್ದ ಜನರಿಗೆ ಗುಡ್​ನ್ಯೂಸ್​ ಕೊಟ್ಟ ರಿಜ್ವಾನ್ ಅರ್ಷದ್.

ಬೆಂಗಳೂರು: ರೇಷನ್​ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಶುರುವಾಗುತ್ತದೆ ಎಂದು ಭೀತಿಯಲ್ಲಿದ್ದ ಜನರಿಗೆ ಸದ್ಯ ಸರ್ಕಾರ 

ಕೊಂಚ ರಿಲೀಫ್​ ಕೊಟ್ಟಿದೆ. 

ರೇಷನ್ ಕಾರ್ಡ್ ಪರಿಷ್ಕರಣೆ ಕಾರ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸೆ.30ರೊಳಗೆ ಇ-ಕೆವೈಸಿ ಮಾಡಿಸುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಅವರು

ಮಾಹಿತಿ ನೀಡಿದರು.

ಅನರ್ಹ ರೇಷನ್​ ಕಾರ್ಡ್​ ಹೊಂದಿರುವವರ ಪಟ್ಟಿ ಮಾಡಿ  ಅವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಆಹಾರ ಧಾನ್ಯ ಬಡವರ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಫಲಾನುಭವಿಗಳಿಗೆ ಸಮಸ್ಯೆಯಾಗ ಕೂಡದು ಎಂದು ಹೇಳಿದ್ದರು.

 ಪರಿಷ್ಕರಣೆ ತಾತ್ಕಾಲಿಕ ಬಂದ್

ಇದರಿಂದ ಕೆಲವು ಪಡಿತರ ಚೀಟಿ ಹೊಂದಿರುವ ನಾಗರಿಕರಿಗೆ ಭಯ ಹೆಚ್ಚಾಗಿತ್ತು. ಆದರೆ ಆ ಬೆನ್ನಲ್ಲೇ ಮಾತನಾಡಿರುವ ಅವರು,  ಸದ್ಯ  ರೇಷನ್ ಕಾರ್ಡ್ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆರ್ಥಿಕ ಹೊರೆ ಮತ್ತು ಜನರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಇಕೆವೈಸಿ ಮಾಡಿಸಲು ಗಡುವು

ಕರ್ನಾಟಕದಲ್ಲಿ ಇನ್ನೂ  2.65 ಕೋಟಿ ಕಾರ್ಡ್​​ಗಳ ಇ ಕೆವೈಸಿ ಪ್ರಕ್ರಿಯೆ ಬಾಕಿ ಇದೆ. ಈ ಬಗ್ಗೆ ಮಾತನಾಡಿದ ಅವರು. ಮೊದಲು ಇ ಕೆವೈಸಿ ಬಾಕಿ ಇರುವುದು ಪೂರ್ಣಗೊಳ್ಳಲಿ. 2.65 ಕೋಟಿ ಕಾರ್ಡ್‌‌ಗಳಿಗೆ ಇಕೆವೈಸಿ ಮಾಡಿಸಲು ಸೆ.30ವರೆಗೆ ಇಕೆವೈಸಿಗೆ ಗಡುವು ನೀಡಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. 
ಇಕೆವೈಸಿ ನಂತರ ಎಷ್ಟು ಕಾರ್ಡ್​ಗಳು ಡಿಲೀಟ್​ ಆಗುತ್ತವೆಯೋ ಅದನ್ನು ನೋಡಿಕೊಂಡು, ಅಷ್ಟೇ ಸಂಖ್ಯೆಯ ಹೊಸ ಕಾರ್ಡ್​ಅನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದು ಆಹಾರ ಸಚಿವ  ರಿಜ್ವಾನ್​ ಅವರು ಸ್ಪಷ್ಟನೆ ಕೊಟ್ಟರು.

ಫುಡ್​ ಕಿಟ್​ ಯೋಜನೆ ಪ್ರಗತಿಯಲ್ಲಿದೆ

ಕರ್ನಾಟಕದಲ್ಲಿ 50 ಲಕ್ಷ ಜನರಿಗೆ ಕೇಂದ್ರ ಸರ್ಕಾರ ಇನ್ನು ರೇಷನ್​ ಕಾರ್ಡ್​​ ಸೌಲಭ್ಯ ಮಾಡಿಕೊಡಬೇಕಾಗಿದೆ. ಈ ಬಗ್ಗೆ ನಾವು ಕೇಂದ್ರ ಸರ್ಕಾರದ ಬಗ್ಗೆ ಚರ್ಚೆ ನಡೆಸಬೇಕು. ಸಾಕಷ್ಟು ಕೆಲಸಗಳು ಬಾಕಿ ಇವೆ. ಫುಡ್​ ಕಿಟ್​ ನೀಡುವುದು. ಈ ಯೋಜನೆ ಜಾರಿ ಒಂದು ಹಂತಕ್ಕೆ ಬಂದಿದೆ.ಆದರೆ ಸರ್ಕಾರ ಘೋಷಿಸಿರುವ ಅಕ್ಕಿ ವಿತರಣೆ ಕಾರ್ಯ ಸುಸಜ್ಜಿತವಾಗಿ ಸಾಗುತ್ತಿದೆ ಎಂದು ಹೇಳಿದರ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net