ವಿಜಯಪುರದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ / VIJAYAPUR

ವಿಜಯಪುರದ2 ನೇ ವಾರ್ಡ್​ನ ಜಯಚಾಮರಾಜೇಂದ್ರ ಉದ್ಯಾನವನದ ಬಳಿ ರಾತ್ರಿ ವೇಳೆ ರಸ್ತೆಯಲ್ಲಿ ನಿಲ್ಲಿಸಿರುವ ಲಾರಿ ಮತ್ತು ಖಾಸಗಿ ಬಸ್​.
ವಿಜಯಪುರದ2 ನೇ ವಾರ್ಡ್​ನ ಜಯಚಾಮರಾಜೇಂದ್ರ ಉದ್ಯಾನವನದ ಬಳಿ ರಾತ್ರಿ ವೇಳೆ ರಸ್ತೆಯಲ್ಲಿ ನಿಲ್ಲಿಸಿರುವ ಲಾರಿ ಮತ್ತು ಖಾಸಗಿ ಬಸ್​.
Published on

ವಿಜಯಪುರ :

ಪಟ್ಟಣದ 2 ನೇ ವಾರ್ಡಿನಲ್ಲಿರುವ ಜಯ ಚಾಮರಾಜೇಂದ್ರ ಒಡೆಯರ್​ ಉದ್ಯಾನವನದ ಸಮೀಪದ ರಸ್ತೆಯಲ್ಲಿ ರಾತ್ರಿ ವೇಳೆ ಭಾರೀ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ.

ಉದ್ಯಾನವನದ ಪಕ್ಕದ ರಸ್ತೆಯಲ್ಲಿ ರಾತ್ರಿ ಲಾರಿ, ಖಾಸಗಿ ಬಸ್ಸುಗಳು ಸೇರಿದಂತೆ ಹಲವು ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಲಾಗುತ್ತಿದೆ. ಇದರಿಂದ ವಾಯು ವಿಹಾರಕ್ಕೆ ಬರುವವರು ಹಾಗೂ ಆ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳಿಯರು ದೂರಿದ್ದಾರೆ.

ಒಂದು ಬದಿಯಿಂದ ಮತ್ತೊಂದು ಬದಿಗೆ ತಿರುವು ಪಡೆಯುವಾಗ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಹಲವು ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ರಾತ್ರಿ ಬೀದಿ ದೀಪದ ಬೆಳಕು ಕಡಿಮೆ ಇರುವುದರಿಂದ ಭಾರೀವಾಹನಗಳ ಹಿಂದೆ ಬರುವ ವಾಹನಗಳು ಗೋಚರಿಸುತ್ತಿಲ್ಲ. ಹಾಗಾಗಿ ವೃದ್ಧರು, ಮಕ್ಕಳು ಓಡಾಡುವುದು ಕಷ್ಟವಾಗುತ್ತಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸ್​ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ, ರಾತ್ರಿ ಉದ್ಯಾನವನದ ಸಮೀಪ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ "ನೋ ಪಾರ್ಕಿಂಗ್​' ಸೂಚನಾ ಫಲಕ ಅಳವಡಿಸಬೇಕು ಎಂದು ವಾರ್ಡ್​ನ ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net