

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮಾಜಿ ಮುಖ್ಯಮಂತ್ರಿರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮವುಶನಿವಾರ (ಆ.29)ವಿಧಾನಸೌಧದಬ್ಯಾಂಕ್ವೆಟ್ ಹಾಲ್‌ನಲ್ಲಿನಡೆಯಲಿದೆ.
ಚಿತ್ರಕಲಾಪರಿಷತ್‌ನಲ್ಲಿ ಗುರುವಾರ ನಡೆದಸುದ್ದಿಗೋಷ್ಠಿಯಲ್ಲಿ ಈ ಕುರಿತುವಿವರ ನೀಡಿದ ರಾಮಕೃಷ್ಣ ಹೆಗಡೆಜನ್ಮ ಶತಮಾನೋತ್ಸವ ಸಮಿತಿಯಅಧ್ಯಕ್ಷ ಹಾಗೂ ಹಿರಿಯ ಮುಖಂಡಆರ್.ವಿ.ದೇಶಪಾಂಡೆ,ಅಂದು ಸಂಜೆ 4ಗಂಟೆಗೆ ನಡೆಯಲಿರುವಕಾರ್ಯಕ್ರಮವನ್ನು ಉಪರಾಷ್ಟ್ರಪತಿಸಿ.ಪಿ.ರಾಧಾಕೃಷ್ಣನ್ಉದ್ಘಾಟಿಸಲಿದ್ದು,ರಾಜ್ಯಪಾಲ ಥಾವರ್ಚಂದ್ ಗೆಹಲೋತ್,ಮುಖ್ಯಮಂತ್ರಿಡಿ.ಕೆ.ಶಿವಕುಮಾರ್,ಆಂಧ್ರ ಸಿಎಂಚಂದ್ರಬಾಬು ನಾಯ್ಡು,ಕೇಂದ್ರ ಸಚಿವಪ್ರಲ್ಹಾದ್ ಜೋಶಿ,ಮಾಜಿ ಉಪರಾಷ್ಟ್ರಪತಿವೆಂಕಯ್ಯ ನಾಯ್ಡು,ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಮತ್ತಿತರ ಗಣ್ಯರುಪಾಲ್ಗೊಳ್ಳಲಿದ್ದಾರೆ ಎಂದುಹೇಳಿದರು.
ಹೆಗಡೆಯವರುಕರ್ತವ್ಯಕ್ಕೆ ಮಹತ್ವ ನೀಡುತ್ತಿದ್ದರಾಜಕಾರಣಿ. ನಾಡಿನರೈತರು, ಬಡವರಿಗೆತಮ್ಮ ಅಧಿಕಾರವಧಿಯಲ್ಲಿ ವಿಶೇಷಕೊಡುಗೆ ನೀಡಿದ್ದಾರೆ.ಕೈಗಾರಿಕೆ,ಪಂಚಾಯತ್‌ರಾಜ್,ಮತ್ತಿತರಇಲಾಖೆಗಳಿಗೆ ಹೊಸ ಆಯಾಮವನ್ನುನೀಡಿದ್ದು,ಅವರನ್ನುಸ್ಮರಿಸುವುದು ಎಲ್ಲರ ಕರ್ತವ್ಯಎಂದು ದೇಶಪಾಂಡೆ ವಿವರಿಸಿದರು.
ಕಾರ್ಯಕ್ರಮದಮೊದಲಿಗೆ ಡಾ.ಬಿಂದುಸುಬ್ರಮಣಿಯಂ ಮತ್ತು ಡಾ.ಅಂಬಿ ಸುಬ್ರಮಣಿಯಂಅವರಿಂದ ಸಂಗೀತ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿರಾಷ್ಟ್ರೀಯ ನವನಿರ್ಮಾಣ ವೇದಿಕೆಮುಖಂಡರಾದ ಡಾ.ಎಂ.ಪಿ.ನಾಡಗೌಡ,ಟಿ.ಪ್ರಭಾಕರ್,ಹೆಗಡೆ ಪುತ್ರಿಮಮತಾ ನಿಚಾನಿ ಉಪಸ್ಥಿತರಿದ್ದರು.