_1766412468358.webp?w=480&auto=format%2Ccompress&fit=max)
_1766412468358.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ರಾಮಯ್ಯ ಯೂನಿವರ್ಸಿಟಿಅಫ್ ಅಪ್ಲೈಡ್ ಸೈನ್ಸಸ್ (ಆರ್‌ಯುಎಎಸ್)ನ10ನೇವಾರ್ಷಿಕ ಘಟಿಕೋತ್ಸವವು ಸೋಮವಾರರಾಮಯ್ಯ ಮೆಡಿಕಲ್ ಕಾಲೇಜುಸಭಾಂಗಣದಲ್ಲಿ ಸಡಗರ,ಸಂಭ್ರಮದಿಂದನಡೆಯಿತು. 10ನೇವರ್ಷದ ಕಾರಣಕ್ಕೆ ಘಟಿಕೋತ್ಸವವುಮಹತ್ವದ ಮೈಲುಗಲ್ಲಾಗಿತ್ತು.
ವಿವಿಕುಲಾಧಿಪತಿ ಡಾ.ಎಂ.ಆರ್.ಜಯರಾಮ್ಅಧ್ಯಕ್ಷತೆಯಲ್ಲಿ ನಡೆದಘಟಿಕೋತ್ಸವದಲ್ಲಿ ಒಟ್ಟು 2095ವಿದ್ಯಾರ್ಥಿಗಳಿಗೆಪದವಿಗಳನ್ನು ವಿತರಣೆ ಮಾಡಲಾಯಿತು.ಈ ಪೈಕಿ 50ಪಿಎಚ್‌ಡಿ,698 ಸ್ನಾತಕೋತ್ತರಪದವಿ ಹಾಗೂ 1347ಪದವಿ ಪ್ರದಾನಮಾಡಲಾಯಿತು.ಇದೇ ವೇಳೆಶೈಕ್ಷಣಿಕವಾಗಿ ಅಮೋಘ ಸಾಧನೆತೋರಿದ 107ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನುವಿತರಿಸಲಾಯಿತು.
ಘಟಿಕೋತ್ಸವಭಾಷಣ ಮಾಡಿದ ಐಐಎಸ್‌ಸಿ ಡೀನ್ಪ್ರೊ. ನವಕಾಂತಭಟ್ ಮಾತನಾಡಿ,ಇಂದು ಎಲ್ಲರೂಸ್ಮಾರ್ಟ್ ಫೋನ್,ಇಂಟರ್ ನೆಟ್,ಸಾಮಾಜಿಕ ಮಾಧ್ಯಮ,ಡಿಜಿಟಲ್ಬ್ಯಾಂಕಿಂಗ್ ಇನ್ನೂ ಅನೇಕತಂತ್ರಜ್ಞಾನದ ಜೊತೆ ನಡೆಯುತ್ತಿದ್ದಾರೆ.2000ನೇ ಇಸವಿಯಲ್ಲಿವಿಶ್ವದ ಜನಸಂಖ್ಯೆಯ ಶೇ 5ಕ್ಕಿಂತಕಡಿಮೆ ಜನರು ಇಂಟರ್ನೆಟ್ಬಳಸುತ್ತಿದ್ದರು.ಆದರೆ ಈಗ ಶೇ.70ಜನರು ಅತ್ಯುತ್ತಮಇಂಟರ್‌ನೆಟ್ ಸಂಪರ್ಕ ಹೊಂದಿದ್ದಾರೆ. 2028ರ ವೇಳೆಗೆಭಾರತವು ವಿಶ್ವದ 3ನೇಅತಿದೊಡ್ಡ ಆರ್ಥಿಕತೆಯಾಗುವನಿರೀಕ್ಷೆಯಿದೆ.
ಶತಮಾನದಮುಂದಿನ ಇಪ್ಪತ್ತೈದು ವರ್ಷದಲ್ಲಿನವಭಾರತ ಮತ್ತು ಅದರ ಹೊಸ ವಿಶ್ವಕ್ರಮವನ್ನು ರೂಪಿಸಲು ನಿಮಗೆ(ವಿದ್ಯಾರ್ಥಿಗಳಿಗೆ)ಉತ್ತಮ ಅವಕಾಶವಿದೆ.ಭಾರತ ಮತ್ತುಕರ್ನಾಟಕ ಸರ್ಕಾರ ಎರಡೂ ವಿಜ್ಞಾನ,ತಂತ್ರಜ್ಞಾನಮತ್ತು ನಾವೀನ್ಯತೆಯಲ್ಲಿ ಪ್ರಮುಖಉಪಕ್ರಮಗಳನ್ನು ಪ್ರಾರಂಭಿಸಿವೆ.ಇದು ಮುಂದಿನಎರಡು ದಶಕಗಳಲ್ಲಿ ಸಮಾನ ಆರ್ಥಿಕಬೆಳವಣಿಗೆಗೆ ಉತ್ತೇಜನ ನೀಡುತ್ತದೆ.ಕಲಿಕೆ ಕೇವಲಶಾಲಾ ಕಾಲೇಜಿಗೆ ಸೀಮಿತವಾಗಿಲ್ಲ.ಮನುಷ್ಯ ಕಲಿಯುವುದುಯಾವಾಗಲೂ ಇದೆ. ತಂತ್ರಜ್ಞಾನಜಗತ್ತಿನಲ್ಲಿ ಸ್ಪರ್ಧಿಸಲುನಿರಂತರವಾಗಿ ಕಲಿಕೆ ಮುಂದುವರೆಸಿಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಹೇಳಿದರು.
ಪದವಿ ಎಂಬುದು ಕೇವಲ ಶೈಕ್ಷಣಿಕ ಗುರುತು ಮಾತ್ರವಲ್ಲ, ಯಾರು ವಿಭಿನ್ನವಾಗಿ ಆಲೋಚನೆ ಮಾಡುತ್ತಾರೋ ಭವಿಷ್ಯ ಅವರನ್ನು ಅರಸಿ ಬರುತ್ತದೆ. ನೀವು ಪಡೆದಿರುವ ಜ್ಞಾನದಿಂದ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಿ. ನಿಮ್ಮ ಪ್ಯಾಷನ್, ನಾಯಕತ್ವ ಗುಣವು ಉಜ್ವಲವಾದ ಹಾಗೂ ಸುಸ್ಥಿರವಾದ ಭವಿಷ್ಯಕ್ಕೆ ಕೊಡುಗೆ ನೀಡುತ್ತದೆ. ಕ್ಯಾಂಪಸ್ ನಿಂದ ಹೊರಗೆ ಹೋದರೂ ಜೀವನದುದ್ದಕ್ಕೂ ಕಲಿಕೆಯನ್ನು ಬಿಡಬೇಡಿ.
ಇಲ್ಲಿಯ ವರೆಗೆ ಆರ್‌ಯುಎಎಸ್ ಸಂಸ್ಥೆಯಲ್ಲಿ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದು, ಆ ಸಾಲಿಗೆ ಹೊಸದಾಗಿ 2095 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ನಾವೀನ್ಯತೆ ಹಾಗೂ ಸಮಗ್ರತೆಯೊಂದಿಗೆ ಮುನ್ನಡೆದು, ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುವ ಭರವಸೆ ನಮಗಿದೆ.