ರಾಷ್ಟ್ರಪತಿಯೊಂದಿಗೆ ರಕ್ಷಾಬಂಧನ ಆಚರಣೆ

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಬಕವಿ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ರಕ್ಷಾಬಂಧನ ಆಚರಿಸಿದರು. ಕೃತಿಕಾ ಅಜಿತ್ ಕಾಸರ, ವಿಜಯಲಕ್ಷ್ಮೀ ರಾಜೇಂದ್ರ ಆಸಂಗಿ, ದಿಯಾ ಹುಮಾಯೂನ್ ಸುತಾರ್, ಶೌರ್ಯ ಸಂತೋಷ ಸಮಜೆ ಹಾಗೂ ಪ್ರಣವ್ ಸುರೇಶ ಘಟಲೋಟಿ ಇತರರಿದ್ದರು.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಬಕವಿ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ರಕ್ಷಾಬಂಧನ ಆಚರಿಸಿದರು. ಕೃತಿಕಾ ಅಜಿತ್ ಕಾಸರ, ವಿಜಯಲಕ್ಷ್ಮೀ ರಾಜೇಂದ್ರ ಆಸಂಗಿ, ದಿಯಾ ಹುಮಾಯೂನ್ ಸುತಾರ್, ಶೌರ್ಯ ಸಂತೋಷ ಸಮಜೆ ಹಾಗೂ ಪ್ರಣವ್ ಸುರೇಶ ಘಟಲೋಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಬಕವಿ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆ ವಿದ್ಯಾರ್ಥಿಗಳು ಭೇಟಿ
  • ಭಾರತಿ ತಾಳಿಕೋಟಿ ಹೇಳಿಕೆ

ರಬಕವಿ/ಬನಹಟ್ಟಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಕ್ಷಾಬಂಧನ ಆಚರಿಸಿರುವುದು ನಮಗೆ ಅಪಾರ ಸಂತಸ ಹಾಗೂ ಹೆಮ್ಮೆ ತಂದಿದೆ ಎಂದು ರಬಕವಿ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹೇಳಿದರು.

ಆ. 28ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಂಸ್ಥೆಯ ಐವರು ವಿದ್ಯಾರ್ಥಿಗಳಾದ ಕೃತಿಕಾ ಅಜಿತ್ ಕಾಸರ, ವಿಜಯಲಕ್ಷ್ಮೀ ರಾಜೇಂದ್ರ ಆಸಂಗಿ, ದಿಯಾ ಹುಮಾಯೂನ್ ಸುತಾರ್, ಶೌರ್ಯ ಸಂತೋಷ ಸಮಜೆ ಹಾಗೂ ಪ್ರಣವ್ ಸುರೇಶ ಘಟಲೋಟಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಭಾರತೀಯ ಸಂಪ್ರದಾಯದಂತೆ ರಕ್ಷಾಬಂಧನ ಆಚರಿಸಿದರು.
ರಾಷ್ಟ್ರಪತಿಯವರೊಂದಿಗೆ ನಡೆಸಿದ ಸಂವಾದ ಹಾಗೂ ಅವರ ಮಾತುಗಳು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಸ್ಫೂರ್ತಿ ತುಂಬಿವೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು. ಜಾತಿ, ಪಂಥ, ಧರ್ಮ ಯಾವುದೇ ಸಾಧನೆಗೆ ಅಡ್ಡಿಯಾಗಬಾರದು.
ದೃಢವಾದ ನಂಬಿಕೆ, ಪರಿಶ್ರಮ ಹಾಗೂ ಆತ್ಮ ವಿಶ್ವಾಸದೊಂದಿಗೆ ಗುರಿ ಸಾಧಿಸಬೇಕು. ದೇಶಕ್ಕಾಗಿ ತಮ್ಮಿಂದಾದ ಅತ್ಯುತ್ತಮ ಕೊಡುಗೆ ನೀಡುವ ಹಠವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರಪತಿಯವರು ಹಲವು ಸಂದೇಶಗಳನ್ನು ನೀಡಿದರು ಎಂದು ಭಾರತಿ ತಾಳಿಕೋಟಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net