ಸರ್ಕಾರಿ ಕಚೇರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಸಹ ಕನ್ನಡವನ್ನು ಕಡ್ಡಾಯಗೊಳಿಸಲಾಗುತ್ತಿರುವುದು ಹೆಮ್ಮೆಯ ವಿಚಾರ. ಎಲ್ಲ ಸಿಬ್ಬಂದಿ ಕನ್ನಡ ಕಲಿತು ವ್ಯವಹರಿಸುವಂತೆ ಮಾಡಲಾಗಿದ್ದು, ಇದರಿಂದ ಬೇರೆ ರಾಜ್ಯಗಳಿಂದ ಬರುವ ಸಿಬ್ಬಂದಿ ಕನ್ನಡ ಕಲಿಯುಂವತಾಗಿರುವುದು ಹೆಮ್ಮೆಯ ವಿಚಾರ ಎಂದರು.
ಕನ್ನಡ ನಾಡು ಸಿರಿ ಮತ್ತು ಸಂಪತ್ತು ಹೊಂದಿರುವ ನಾಡಾಗಿದ್ದು, ಅದರಲ್ಲೂ ಮೈಸೂರು ಜಿಲ್ಲೆ ಐತಿಹಾಸಿಕ ಮತ್ತು ಇತಿಹಾಸ ಚಾರಿತ್ರಿಕವಾಗಿ ಸೊಬಗಿನಿಂದ ಕೂಡಿದೆ. ಇಂತಹ ಕ್ಷೇತ್ರದಲ್ಲಿ ಕಾವೇರಿ ಹರಿದು ಹಲವಾರು ಐತಿಹಾಸಿಕ ಕ್ಷೇತ್ರಗಳನ್ನು ಹುಟ್ಟುಹಾಕಿದೆ. ಉತ್ತಮ ಪರಿಸರದಲ್ಲಿ ನಾವೆಲ್ಲರೂ ಬದುಕು ನಡೆಸುತ್ತಿರುವುದು ನಮ್ಮೆಲ್ಲರ ಪುಣ್ಯ ಎನಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಕಾವೇರಿಯಿಂದ ಗೋದಾವರಿಯನ್ನು ದಾಟಿ ಹರಡಿದ್ದ ಕನ್ನಡ ನಾಡು ಕೇವಲ ಮಣ್ಣಿನ ನೆಲವಲ್ಲ, ಪುಣ್ಯಭೂಮಿಯಾಗಿದೆ. ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸೇರಿದಂತೆ ಮೈಸೂರು ರಾಜರ ಹೋರಾಟ, ಆಡಳಿತ, ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ, ಜಾನಪದ, ವಾಣಿಜ್ಯ, ಶಿಲ್ಪಕಲೆ, ವಿಜ್ಞಾನದ ಕಲಾವೈಭವಕ್ಕೆ ನಾಡು ಜೀವಂತ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಉದಯಕುಮಾರ್, ನಗರಾಧ್ಯಕ್ಷ ಸಿ.ವಿ.ಮೋಹನ್‌ಕುಮಾರ್, ನಿವೃತ್ತ ಉಪನ್ಯಾಸಕ ಕೃಷ್ಣ, ರೋಟರಿ ಕ್ಲಬ್ ಅಧ್ಯಕ್ಷ ಟಿ.ಎನ್.ದಯಾನಂದ್, ಕಾರ್ಯದರ್ಶಿ ಕೆ.ಆರ್.ಪುರುಷೋತ್ತಮ್, ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ, ಭಾಸ್ಕರ್, ಮಹಾಕವಿ ಕೃಷ್ಣ ತಿಪ್ಪೂರು ಇತರರು ಮಾತನಾಡಿದರು.
ವೇದಿಕೆಯಲ್ಲಿ ಸಾಹಿತಿ ಮಹಾಕವಿ ಕೃಷ್ಣತಿಪ್ಪೂರು, ಸಿದ್ದನಕೊಪ್ಪಲು ಹರೀಶ್‌ಕುಮಾರ್, ಜಾನಪದ ಕಲಾವಿದೆ ಕಾಮಾಕ್ಷಿ ನಾಗೇಂದ್ರ ಅವರನ್ನು ಗೌರವಿಸಲಾಯಿತು. ಅಲ್ಲದೆ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸಾತಿ ಗ್ರಾಮದ ಕಾಮಾಕ್ಷಿ ನಾಗೇಂದ್ರ ದಂಪತಿ ಮತ್ತು ತಂಡದವರಿಂದ ವಿರಾಟಪರ್ವ ತೊಗಲು ಬೊಂಬೆ ಪ್ರದರ್ಶನ ಎಲ್ಲರ ಗಮನಸೆಳೆಯಿತು.
ತಾಲೂಕು ಕಸಾಪ ಪದಾಧಿಕಾರಿಗಳಾದ ಚಂದ್ರಶೇಖರ್, ಎಚ್.ಸಿ.ಚಂದ್ರಶೇಖರ್, ಬಿಎಸ್‌ಎನ್‌ಎಲ್ ಕೃಷ್ಣ, ರಾಮಶೆಟ್ಟಿ, ಸ್ವರೂಪರಾಣಿ, ವಂದನಾ, ಹೆಗ್ಗಂದೂರು ಪ್ರಭಾಕರ್, ವರದಯ್ಯ, ಸುರೇಶ್ ಚೌಹಾಣ್, ಸಿದ್ದರಾಜು, ಸೋಮಣ್ಣ, ರಾಜಣ್ಣ, ಬ್ಯಾಂಕ್‌ರಾಘು, ಅಶೋಕ್, ಗೋಪಾಲರಾಜ್, ಗೋಪಾಲ್‌ರಾವ್‌ಕದಂ, ಎಕ್ಷರೆನಾಗೇಂದ್ರ, ರಾಜೀವ್, ವ್ಯಾನ್‌ಸುರೇಶ್, ದೊಡ್ಡಯ್ಯ, ಕೃಷ್ಣಯ್ಯ ಇನ್ನಿತರರು ಇದ್ದರು.