ಕಾಶೀ ಜಂಗಮವಾಡಿ ಮಠದಲ್ಲಿ ರಾಜ್ಯೋತ್ಸವ

ಶತಮಾನದ ಕಾಶಿ ಕರ್ನಾಟಕ ಸಂಘ
Dr. Chandrashekhara Shivacharya Jagadguru, KPSC member Shakuntala Dundigaoudar, R.K. Swami of the Kashi Peetha, and others participated in the 71st Karnataka Rajyotsava event organized at the Kashi Jangamawadi Matha.
ಕಾಶೀ ಜಂಗಮವಾಡಿ ಮಠದಲ್ಲಿ ಏರ್ಪಡಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ ಶಿವಾಚಾರ್ಯ ಜಗದ್ಗುರುಗಳು, ಕೆಪಿಎಸ್​ಸಿ ಸದಸ್ಯೆ ಶಕುಂತಲಾ ದುಂಡೀಗೌಡರ್, ಕಾಶೀ ಪೀಠದ ಆರ್.ಕೆ.ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
Published on: 

ವಾರಾಣಸಿ : 71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕಾಶೀ ಜಂಗಮವಾಡಿ ಮಠದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಸದಸ್ಯೆ ಶಕುಂತಲಾ ದುಂಡಿಗೌಡರ್ ಜ್ಯೋತಿಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕಾಶೀ ಜಗದ್ಗುರುಗಳು, ಭಾಷೆ ಮನುಷ್ಯನ ಸಂವಹನದ ಪ್ರಮುಖ ಮಾಧ್ಯಮ. ಪ್ರಾದೇಶಿಕವಾಗಿ ಭಾಷಾವಾರು ಪ್ರಾಂತ್ಯ ರಚನೆಯಾದರೂ, ಅದರ ಬಳಕೆಗೆ ಯಾವುದೇ ಗಡಿಯ ನಿಬಂಧನೆ ಇಲ್ಲ. ಇದಕ್ಕೆ ಸಾಕ್ಷಿ ಕಾಶಿಯಲ್ಲಿ ಶತಮಾನಗಳಿಂದಲೂ ಕನ್ನಡ ಮಾತನಾಡುವ ಜನ ಇದ್ದಾರೆ. ಕಾಶಿಯಲ್ಲಿ ಬಹಳ ಹಿಂದಿನ ಕಾಲದಿಂದಲೂ ಕನ್ನಡ ಸಂಸ್ಕೃತಿಗೆ ಆದ್ಯತೆ ಇದೆ. ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ಎಂಬ ನಾಮಕರಣವಾಗಿದ್ದು 1976ರಲ್ಲಿ. ಆದರೆ 1920ರಲ್ಲೇ ಇಡೀ ದೇಶದಲ್ಲೇ ಮೊಟ್ಟ ಮೊದಲ ಕರ್ನಾಟಕ ಸಂಘ ಸ್ಥಾಪನೆಯಾಗಿದ್ದು ಕಾಶಿಯಲ್ಲಿ. ಅಂದಿನ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಕಾಶೀ ಕರ್ನಾಟಕ ಸಂಘವನ್ನು ಸ್ಥಾಪಿಸಿ ಅದರ ಚಟುವಟಿಕೆ ನಡೆಸಲು ಜಂಗಮವಾಡಿ ಮಠದಲ್ಲಿ ಸ್ಥಳವನ್ನು ನೀಡಿದ್ದರು. ಅದರ ಪರಿಣಾಮ ಶತಮಾನಗಳಿಂದ ಕನ್ನಡಪರ ಸಾಹಿತ್ಯಾತ್ಮಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಗಳು ನಿರಂತವಾಗಿ ನಡೆದುಕೊಂಡು ಬಂದಿವೆ. ಪೀಠದ ಪ್ರಯತ್ನದ ಲವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಕಾಶೀ ವಿದ್ಯಾ ಪೀಠ ಮತ್ತು ಸಂಪೂರ್ಣಾನಂದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಕೂಡ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ಸಾವಿರಾರು ಜನ ಈವರೆಗೆ ಇಲ್ಲಿ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿದ್ದಾರೆ. ಹಾಗೆ ಅಧ್ಯಯನಕ್ಕೆ ಬಂದಂತಹ ವಿದ್ಯಾರ್ಥಿಗಳಿಗೆ ಕಾಶೀ ಜಂಗಮವಾಡಿ ಮಠ ಆಶ್ರಯ ನೀಡಿದೆ. ಮಾತ್ರವಲ್ಲದೆ ಇಂದಿಗೂ ಕರ್ನಾಟಕದಿಂದ ಪ್ರತಿನಿತ್ಯ ಕಾಶಿಗೆ ಬರುವ ಸಾವಿರಾರು ಯಾತ್ರಿಕರಿಗೆ ಊಟ-ವಸತಿಗಳನ್ನು ನೀಡುತ್ತಿದೆ. ಕಾಶಿಯಲ್ಲಿ ಕನ್ನಡದ ವಾತಾವರಣ ಬಲಗೊಳ್ಳುವಲ್ಲಿ ಜಂಗಮವಾಡಿ ಮಠದ ಪಾತ್ರ ಹಿರಿದಾಗಿದೆ ಎಂದು ಜಗದ್ಗುರುಗಳು ವಿವರಿಸಿದರು.

ಕಾರ್ಯಕ್ರಮದಲ್ಲಿ ದುಂಡೀಗೌಡರ್ ದಂಪತಿಗಳಿಗೆ ಜಗದ್ಗುರುಗಳು ಸನ್ಮಾನಿಸಿ ಆಶೀರ್ವದಿಸಿದರು. ಪೀಠದ ವ್ಯವಸ್ಥಾಪಕ ಆರ್.ಕೆ.ಸ್ವಾಮಿ, ಅಖಿಲೇಶ್ ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.