ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಿ

ಔರಾದ್​ ತಾಲೂಕು ಸಮರ್ಥ ಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಒಂದು ದಿನದ ಅರಿವಿನ ಕಾರ್ಯಕ್ರಮಕ್ಕೆ ತಾಪಂ ಎಡಿ ಶಿವಕುಮಾರ ಘಾಟೆ ಚಾಲನೆ ನೀಡಿದರು. ಶಾರದಾ ಕಲ್ಮಾಕರ, ರಾಜಕುಮಾರ ಹಲಮಡಗೆ, ಗೌರಿ ಶಂಕರ ಪರ್ತಾಪೂರೆ, ಪ್ರಶಾಂತ ಬಿರಾದರ, ಭಾಗ್ಯಶ್ರೀ, ಸಂಗೀತಾ ಹೊಳಕಡೆ, ರಾಜೇಶ್ರೀ, ಸುನೀಲಕುಮಾರ ವಾಮಾರೆ ಇದ್ದರು

Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಎಡಿ ಶಿವಕುಮಾರ ಘಾಟೆ ಸಲಹೆ
  • ಔರಾದ್​ನಲ್ಲಿ ಅರಿವಿನ ಕಾರ್ಯಕ್ರಮ
ಔರಾದ್​: ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ಪಟ್ಟಣದ ತಾಲೂಕು ಸಮರ್ಥ ಸೌಧದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಕುರಿತು ಸಹಭಾಗಿದಾರ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಅರಿವಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಕಣ್ಣು ತಪ್ಪಿಸಿ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವ ಮಾಹಿತಿಯನ್ನು ಗ್ರಾಮ ಮಟ್ಟದ ಸಿಬ್ಬಂದಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದಾಗ ಅಂತಹ ವಿವಾಹಗಳನ್ನು ತಡೆಹಿಡಿಯಲು ನೆರವಾಗುತ್ತದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಟಕದ ಶಾರದಾ ಕಲ್ಮಾಕರ ಮಾತನಾಡಿ, 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ಬಂದಿದೆ. ಬಾಲ್ಯ ವಿವಾಹಗಳು ನಡೆದಿರುವುದು ಇಂದಿಗೂ ಜೀವಂತವಾಗಿರುವುದಕ್ಕೆ ಸಾಯಾಗಿವೆ. ಬಾಲ್ಯ ವಿವಾಹವನ್ನು ತಡೆಗಟ್ಟುವುದು ಕೇವಲ ಸರ್ಕಾರದ ಕೆಲಸವಲ್ಲ. ಪ್ರತಿ ಮನೆಯಲ್ಲಿ ಹೆತ್ತವರು ಈ ಬಗ್ಗೆ ಗಂಭೀರವಾಗಿ ಚಿಂತಿಸಿದ್ದಲ್ಲಿ ಬಾಲ್ಯವಿವಾಹ ರಹಿತ ರಾಜ್ಯ ನಮ್ಮದಾಗಬಹುದಾಗಿದೆ ಎಂದರು.
ಇಸಿಒ ರಾಜಕುಮಾರ ಹಲಮಡಗೆ, ಗೌರಿ ಶಂಕರ ಪರ್ತಾಪೂರೆ, ಪ್ರಶಾಂತ ಬಿರಾದರ, ಭಾಗ್ಯಶ್ರೀ, ಸಂಗೀತಾ ಹೊಳಕಡೆ ಇತರರಿದ್ದರು. ರಾಜೇಶ್ರೀ ವಂದಿಸಿದರು. ಸುನೀಲಕುಮಾರ ವಾಮಾರೆ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net