56 ವರ್ಷ ಬಳಿಕ ದಕ್ಷಿಣ ಒಳನಾಡಲ್ಲಿ ಮಳೆ ಕುಂಠಿತ: 2026ರ ಜುಲೈನಲ್ಲಿ ಶೇ.69 ಕೊರತೆ-Rainfall deficit

56 ವರ್ಷದ ಬಳಿಕ  ದಕ್ಷಿಣ ಕರ್ನಾಟಕದಲ್ಲಿ ಮಳೆ ಕೊರತೆ
56 ವರ್ಷದ ಬಳಿಕ ದಕ್ಷಿಣ ಕರ್ನಾಟಕದಲ್ಲಿ ಮಳೆ ಕೊರತೆ
Published on

ಬೆಂಗಳೂರು: ‘ಎಲ್ ನಿನೋ’ ಪ್ರಭಾವವು ಈ ಬಾರಿಯ ನೈಋತ್ಯ ಮಾನ್ಸೂನ್ ಮೇಲೆ ಪರಿಣಾಮ ಬೀರಿರುವ ಕಾರಣ ಮಳೆ ಕೊರತೆ ಮತ್ತು ತಾಪಮಾನಕ್ಕೆ ಸಂಬಂಧಿಸಿದಂತೆ ಹಲವು ದಾಖಲೆ ಬರೆದಿದೆ.

56 ವರ್ಷದ ಬಳಿಕ 2026ರ ಜುಲೈನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಶೇ.69 ಮಳೆ ಕೊರತೆ ಉಂಟಾಗಿದೆ. ಜುಲೈನಲ್ಲಿ ವಾಡಿಕೆಯಂತೆ 79.2 ಮಿಮೀ ಮಳೆಯಾಗಬೇಕಿತ್ತು. ಆದರೆ, 24.7 ಮಿಮೀ ಸುರಿದಿದ್ದು, ಶೇ.69 ಮಳೆ ಅಭಾವವಾಗಿದೆ.
ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, 1971ರಕ್ಕಿಂತ ಹಿಂದಿನ ವರ್ಷದ ಮಳೆ ದತ್ತಾಂಶಗಳು ಲಭ್ಯವಾಗಿಲ್ಲ. ಆದರೆ, 1971ರಿಂದ ಇದುವರೆಗಿನ ದತ್ತಾಂಶ ಅವಲೋಕಿಸಿದರೆ 56 ವರ್ಷದ ಬಳಿಕ ದಕ್ಷಿಣ ಒಳನಾಡಿನಲ್ಲಿ ಪ್ರಸಕ್ತ ವರ್ಷದ ಜುಲೈ ಅವಧಿಯಲ್ಲಿ ಶೇ.69 ಮಳೆ ಕುಂಠಿತವಾಗಿದೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ 108 ವರ್ಷದ ಬಳಿಕ 2026ರ ಜುಲೈನಲ್ಲಿ ಅತ್ಯಂತ ಕಡಿಮೆ ಮಳೆ ಸುರಿದಿದೆ. ವಾಡಿಕೆಯಂತೆ 94 ಮಿಮೀ ಮಳೆಯಾಗಬೇಕಿತ್ತು. ಆದರೆ,16.1 ಮಿಮೀ ಬಿದ್ದಿದ್ದು, ಶೇ.83 ಮಳೆ ಕೊರತೆ ಉಂಟಾಗಿದೆ. 1918ರ ಜುಲೈನಲ್ಲಿ 18.5 ಮಿಮೀ ಮಳೆಯಾಗಿತ್ತು. 1918ರ ಜುಲೈ ನಂತರ 2026ರ ಜುಲೈನಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕುಸಿದಿದೆ. ಅಲ್ಲದೆ, ರಾಜಧಾನಿಯಲ್ಲಿ 116 ವರ್ಷದ ಬಳಿಕ ಗರಿಷ್ಠ ತಾಪಮಾನ ದಾಖಲಾಗಿದೆ. 1914ರ ಜುಲೈನಲ್ಲಿ 33.3 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 116 ವರ್ಷದ ಬಳಿಕ ಅಂದರೆ 2026ರ ಜು.14ರಂದು 33.6 ಡಿ.ಸೆ.ದಾಖಲಾಗಿದ್ದು, ಹಿಂದಿನ ಎಲ್ಲ ದಾಖಲೆ ಅಳಿಸಿಹಾಕಿದೆ.
ತಗ್ಗಿದ ವರುಣ:
ಕೆಲ ದಿನಗಳಿಂದ ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಅಬ್ಬರಿಸುತ್ತಿದ್ದ ವರುಣ ಸೋಮವಾರದಿಂದ ತಗ್ಗಿದೆ. ಮಾನ್ಸೂನ್ ಮತ್ತೆ ದುರ್ಬಲಗೊಂಡ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಕರಾವಳಿಯಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಕೆ ಎಚ್ಚರಿಕೆ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net