ಅಕಾಲಿಕ ಮಳೆಗೆ ಅಪಾರ ಹಾನಿ

ಅಕಾಲಿಕ ಮಳೆಗೆ ಅಪಾರ ಹಾನಿ
ಅಕಾಲಿಕ ಮಳೆಗೆ ಅಪಾರ ಹಾನಿ
Published on

ಪ್ರಮುಖ ಮುಖ್ಯಾಂಶಗಳು

  • ಅಕಾಲಿಕ ಮಳೆಗೆ ಬೆಳಗಾವಿಯಲ್ಲಿ ಅಪಾರ ಹಾನಿ
  • ಕೃಷಿ,ತೋಟಗಾರಿಗೆ ಬೆಳೆ ನಷ್ಟ
  • ಹೆಸ್ಕಾಂ ಗೂ ಲಕ್ಷಾಂತರ ರೂ ನಷ್ಟ
ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಅಪಾರ ಹಾನಿ
| ನೆಲ ಕಚ್ಚಿದ ಕೃಷಿ,ತೋಟಗಾರಿಕೆ ಬೆಳೆಗಳು | ಹೆಸ್ಕಾಂಗೂ ವರುಣನ ಶಾಕ್
ಆನಂದ ಭಮ್ಮನ್ನವರ ಚಿಕ್ಕೋಡಿ
ಜಿಲ್ಲೆಯಲ್ಲಿ ಸುರಿದ ಧಾರಾಕಾರ ಅಕಾಲಿಕ ಆಲಿಕಲ್ಲು ಮಳೆಗೆ ಜಿಲ್ಲೆಯ ರೈತಾಪಿ ವರ್ಗ ತತ್ತರಿಸಿದೆ. ಹಿಂಗಾರು ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳು ಮಳೆಯ ಅವಾಂತರಕ್ಕೆ ನೆಲಕಚ್ಚಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.ಕೂಡಲೇ ಜಿಲ್ಲಾಡಳಿತ ಎಚ್ಚತ್ತುಕೊಂಡು ನಷ್ಟದ ಕುರಿತು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಬಿಸಿಲು,ಮಳೆ ವಿದ್ಯುತ್ ಸಮಸ್ಯೆ ನಡುವೆಯು ಹಿಂಗಾರು ಬೆಳೆ ಬೆಳೆದ ರೈತರಿಗೆ ಅಕಾಲಿಕ ಮಳೆ ಬರಸಿಡಿಲಿನಂತೆ ಒಕ್ಕರಿಸಿದೆ.ಇನ್ನೇನು ಫಸಲು ಕೈ ಬಂದಿದ್ದು,ಕೊಯ್ಲು ಮಾಡಲು ಸಿದ್ಧತೆ ಮಾಡಿಕೊಂಡ ರೈತರು ಮಳೆ ಅರ್ಭಟಕ್ಕೆ ನಲುಗಿ ಹೋಗಿದ್ದಾರೆ. ವಿಶೇಷ ಎಂದರೇ ಈ ಬಾರಿ ಆಲಿಕಲ್ಲು ಮಳೆಗೆ ಕಬ್ಬಿನ ಬೆಳೆ ಕೂಡ ಎಲೆಗಳು ತುಂಡಾಗಿ ಇಳುವರಿ ಕುಸಿಯುವ ಭೀತಿ ಎದುರಾಗಿದೆ.
೧೦೬ ಹೆಕ್ಟರ್ ಕೃಷಿ ಬೆಳೆ ಹಾನಿ :
ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಅಲೆಕಲ್ಲು ಮಳೆಗೆ ಗೋಧಿ,ಗೋವಿನ ಜೋಳ, ಕಬ್ಬು ಸೇರಿ 106 ಹೆಕ್ಟರ್ ಪ್ರದೇಶದ ಕೃಷಿ ಬೆಳೆಗಳು ಹಾನಿಯಾಗಿವೆ. ಗೋಧಿ,ಗೋವಿನ ಜೋಳ ಮಳೆಯ ಹೊಡೆತಕ್ಕೆ ನೆಲ ಕಚ್ಚಿವೆ.ಜಿಲ್ಲೆಯ ಗೋಕಾಕ,ರಾಯಭಾಗ ,ಚಿಕ್ಕೋಡಿ,ಮೂಡಲಗಿ ತಾಲೂಕಿನಲ್ಲಿ ಭಾರೀ ಅನಾಹುತ ಸಂಭವಿಸಿದೆ. ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳು ಮಳೆಗೆ ಹಾನಿಯಾಗದಂತೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ತೋಟಗಾರಿಕೆ 150 ಹೆಕ್ಟರ್ ಬೆಳೆ ನಷ್ಟ:
ಜಿಲ್ಲೆಯಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳಾದ ಮಾವು,ದ್ರಾಕ್ಷಿ, ಕಲ್ಲಂಗಡಿ,ದಾಳೆಅಬೆ ಬೆಳೆಗಳು ಸೇರಿ 150 ಹೆಕ್ಟರ್ ಪ್ರದೇಶದ ಬೆಳೆಗಳಿಗೆ ಹಾನಿಯಾಗಿದೆ.ಅಥಣಿ ತಾಲ್ಲೂಕಿನ 118 ಹೆಕ್ಟರ್ ಪ್ರದೇಶದ ದ್ರಾಕ್ಷಿ, ದಾಳಂಬೆ ಮತ್ತು ಕಲಂಗಡಿ ಬೆಳೆ ಬೆಳೆದ ರೈತರಿಗೆ ನಷ್ಟ ಉಂಟಾಗಿದೆ.ಅದಾಜು 31.78 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ತೋಟಗಾರರಿಗೆ ಇಲಾಖೆ ಅಧಿಕಾರಿಗಳು ನೇಮಕ ಮಾಡಿದ್ದಾರೆ.
ಹೆಸ್ಕಾಂಗೂ ಮಳೆ ಶಾಕ್:
ಅಕಾಲಿಕ ಮಳೆಯ ಅವಾಂತರ ರೈತರ ಬೆಳೆ ಜತೆ ಹೆಸ್ಕಾಂ ಇಲಾಖೆಗೂ ಶಾಕ್ ನೀಡಿದೆ. ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಗೆ ಅಂದಾಜು 50 ವಿದ್ಯುತ್ ಕಂಬಗಳು, 4 ವಿದ್ಯುತ್ ಪರಿಕರಗಳು , ಮತ್ತು 1 ಕಿ.ಮಿ ವಿದ್ಯುತ್ ತಂತಿ ಹಾಳಾಗಿ, ಅಪಾರ ಸಾಕಷ್ಟು ಹಾನಿ ಉಂಟಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದು, ಕಳೆದ ಮೂರು ದಿನದಿಂದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ, ತೋಟಪಟ್ಟಿ ಕಂಬಗಳು ಧರೆಗುರಳಿದ ಪರಿಣಾಮ ಯುಗಾದಿ ಹಬ್ಬವನ್ನು ಕತ್ತಲಲ್ಲಿಯೇ ಆಚರಿಸಿದೆ.
---
ಕೋಟ್-೧
ಜಿಲ್ಲೆಯಲ್ಲಿ ಅಕಾಲಿನ ಮಳೆಗೆ ಅಂದಾಜು 106 ಹೆಕ್ಟರ್ ಕೃಷಿ ಬೆಳೆಗಳಿಗೆ ಹಾನಿ, ರೈತರಿಗೆ ಪರಿಹಾರ ಒದಗಿಸುವ ಕೃಷಿ, ತೋಟಗಾರಿಕೆ ಮತ್ತು ಇಲಾಖೆಯ ಇಲಾಖೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯ ನಿಖರವಾದ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಅಷ್ಟು ಬೇಗ ಸಲ್ಲಿಸಲಾಗುವುದು.
ಎಚ್.ಡಿ.ಕೊಳೇಕರ
ಜಂಟಿ ಕೃಷಿ ನಿರ್ದೇಶಕರು, ಬೆಳಗಾವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net