ಒಂದು ವೇಳೆ ಮಾಹಿತಿಗಳ ಪ್ರಕಾರ ಮಂತ್ರಿ ಮಂಡಲ ಪುನಾರಚನೆ ನಿಜವಾದರೆ, ಸುಮಾರು 8-12 ಸಚಿವರ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಖರ್ಗೆ ಜೊತೆ ಚರ್ಚಿಸಿದ ಬಳಿಕ ಈ ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಸಿಗಲಿದೆ. ಸುಮಾರು ಅರ್ಧ ಘಂಟೆ ನಡೆದ ಚರ್ಚೆಯಲ್ಲಿ ಸಿಎಂ, ಬಿಹಾರದ ಚುನಾವಣೆಯ ಸೋಲಿನ ಬಗ್ಗೆಯೂ ಮಾತನಾಡಿದ್ದು, ಈ ವೇಳೆ ಚುನಾವಣೆಯ ಸೋಲಿಗೆ ಧೃತಿಗೆಡಬೇಡಿ ಎಂದು ಧೈರ್ಯ ತುಂಬಿ, ನಿಮ್ಮ ನಾಯಕತ್ವದ ಮೇಲೆ ನಮಗೆ ನಂಬಿಕೆ ಇದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.