ರೇಸ್ ಕೊರ್ಸ್ ಸ್ಥಳಾಂತರಕ್ಕೆ ಖಂಡನೆ

Race course relocation condemned
Race course relocation condemned
Published on
ಕುಣಿಗಲ್: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪಾರಂಪರಿಕ ಕುಣಿಗಲ್ ಕುದುರೆ ಾರ್ಮ್ ಉಳಿವಿಗಾಗಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯ ಸರ್ಕಾರ ಕುಣಿಗಲ್ ಕುದುರೆ ಾರ್ಮ್ ಜಾಗಕ್ಕೆ ಬೆಂಗಳೂರಿನ ಕ್ರಪ್ ಕ್ಲಬ್‌ನ ರೇಸ್ ಕೊರ್ಸ್ ಸ್ಥಳಾಂತರ ಮಾಡಲು 110 ಎಕರೆ ಕುದುರೆ ತಳಿ ಸಂವರ್ದನೆ ಜಾಗವನ್ನು ಬಾಡಿಗೆ ನೀಡುವ ಸಂಚಿವ ಸಂಪುಟದ ನಿರ್ಧಾರವನ್ನು ಖಂಡಿಸಿದರು.
ಶ್ರೀಮಂತರ ಐಷಾರಾಮಿ ಮೋಜಿನ ಆಟವಾದ ಕುದುರೆ ಜೂಜನ್ನು ನಮ್ಮ ಕುಣಿಗಲ್ ಪಟ್ಟಣಕ್ಕೆ ತಂದರೆ, ಈ ಭಾಗದ ರೈತರು, ಯುವಕರು ಜೂಜಿನ ಚಟಕ್ಕೆ ಬಿದ್ದು ಆರ್ಥಿಕ ದಿವಾಳಿಗಳಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಬೇಕಿದ್ದರೆ ಬೇರೆ ಕಡೆ ಜಮೀನು ಕೊಡಲಿ ನಮ್ಮ ಐತಿಹಾಸಿಕ ತಾಣವಾದ ಕುದುರೆ ಾರ್ಮ್‌ನಲ್ಲಿ ಕುದುರೆ ಜೂಜು ಸಂಸ್ಥೆ ಸ್ಥಾಪಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದರು.
ಶಾಸಕ ಡಾ.ರಂಗನಾಥ್ ಅವರು ತಮ್ಮ ರಿಯಲ್ ಎಸ್ಟೇಟ್ ದಂಧೆ ನಡೆಸಲು ಈ ಜಾಗದಲ್ಲಿ ತುಂಬಾ ದಿನದಿಂದ ಕಾಯುತ್ತಿದ್ದಾರೆ. ರೇಸ್ ಕೊರ್ಸ್ ಹೆಸರಿನಲ್ಲಿ ರಂಗನಾಥ್ ಅವರು ಐಷಾರಾಮಿ ರೆಸಾರ್ಟ್, ಗಾಲ್ಪ್ ಮುಂತಾದ ಚಟುವಟಿಕೆಗಳನ್ನು ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಪಶುಸಂಗೋಪನೆ ಇಲಾಖೆಯ ಅದೀನದಲ್ಲಿರುವ ಕುಣಿಗಲ್ ಕುದುರೆ ಾರ್ಮ್ ಜಾಗವನ್ನು 1964 ಭೂ ಕಂದಾಯ ಅಧಿನಿಯಮದ ಪ್ರಕಾರ ಪಶುಸಂಗೋಪನೆಗೆ ಮಾತ್ರ ಬಳಸಬೇಕು. ಈ ಕಾನೂನನ್ನು ಗಾಳಿಗೆ ತೂರಿ ಇಡೀ ಕುದುರೆ ಾರ್ಮ್ ಜಾಗವನ್ನು ವಾಣಿಜ್ಯ ಉದ್ದೇಶದ ಜಮಾಡಿಂದು ಘೋಷಣೆ ಮಾಡಲು ಕಾನೂನು ಬಾಹಿರವಾಗಿ ನೀಲಿ ನಕ್ಷೆ ತಯಾರು ಮಾಡಿಕೊಂಡಿರುವುದು ತಿಳಿದು ಬಂದಿದೆ ಇದನ್ನು ನಮ್ಮ ಹೋರಾಟ ಸಮಿತಿ ಖಂಡಿಸುತ್ತದೆ ಎಂದರು.
ಮುಖಂಡರಾದ ಬಿ.ಎನ್ ಜಗದೀಶ್, ನಾಗಣ್ಣ, ರಾಮಲಿಂಗಯ್ಯ, ಸಿದ್ದರಾಜು, ಕರೀಗೌಡ, ಸಿಂಗಯ್ಯ, ಸಂತೋಷ್, ಸುರೇಶ್ ದೇವರಾಜು, ಹರೀಶ್, ರಾಜಣ್ಣ, ಲಕ್ಷ್ಮೀ ನರಸಿಂಹಯ್ಯ, ಜಯಣ್ಣ, ವಿಜಯ್, ನಿಶಾಂತ್, ಶಿವರಾಮು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net