ಎರಂಡೋಲಿ ಗ್ರಾಮದಲ್ಲಿ ಕದ್ದ ಚಿನ್ನ ಖರೀದಿಸಿದ ವ್ಯಾಪಾರಿ ವಿಚಾರಣೆ

police
police
Published on
ಸಂಬರಗಿ: ಕದ್ದ ಚಿನ್ನ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಮಿರಜ್ ತಾಲೂಕಿನ ಎರಂಡೋಲಿ ಗ್ರಾಮದ ಆಭರಣ ಅಂಗಡಿ ಮೇಲೆ ಅಥಣಿ ಪೊಲೀಸರು ಮಂಗಳವಾರ ದಾಳಿ ನಡೆಸಿ, ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಂತಾರಾಜ್ಯ ಪ್ರಕರಣವಾಗಿರುವುದರಿಂದ ಅಂಗಡಿ ಮಾಲೀಕನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಗಡಿ ಭಾಗದ ಎರಂಡೋಲಿ ಗ್ರಾಮದ ಚಿನ್ನದ ವ್ಯಾಪಾರಿ ಬಹುದಿನಗಳಿಂದ ಕರ್ನಾಟಕದಲ್ಲಿನ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನವನ್ನು ಅನಧಿಕೃತವಾಗಿ ಖರೀದಿಸುತ್ತಿದ್ದನು ಎಂಬ ನಿಖರ ಮಾಹಿತಿ ಮೇರೆಗೆ ಕರ್ನಾಟಕ ಪೊಲೀಸರು ವ್ಯಾಪಾರಿಯನ್ನು ಅಥಣಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಈ ಕುರಿತು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಬೇಕಿದ್ದು, ತನಿಖೆ ನಂತರ ವ್ಯಾಪಾರಿ ಯಾರಿಂದ ಕದ್ದ ಮಾಲನ್ನು ಖರೀದಿಸಿದ್ದಾನೆ. ಖರೀದಿ ನಂತರ ಆಭರಣಗಳನ್ನು ಯಥಾಸ್ಥಿತಿಯಲ್ಲಿ ಮಾರಾಟ ಮಾಡಲಾಗಿದೆಯಾ, ಇಲ್ಲವೇ ಕರಗಿಸಿ ಬೇರೆ ಮಾದರಿ ಅಭರಣಗಳನ್ನು ರೂಪಿಸಿ ಮಾರಾಟ
ಮಾಡಲಾಗಿದೆಯಾ ಎಂಬ ಕುರಿತು ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net