ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

Put a stop to the illegal sale of alcohol
Put a stop to the illegal sale of alcohol
Published on
ಹುಳಿಯಾರು: ಹೋಬಳಿಯ ಮೋಟಿಹಳ್ಳಿ ವಡ್ಡರಹಟ್ಟಿಯ ಮಹಿಳೆಯರು ಹಾಗೂ ಅಲ್ಲಿನ ನಿವಾಸಿಗಳು ಗ್ರಾಮದಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ನಿಲ್ಲಿಸಬೇಕು ಎಂದು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದಾರೆ.
ಹುಳಿಯಾರು ಹೋಬಳಿಯ ಗಡಿ ಗ್ರಾಮವಾಗಿರುವ ಮೋಟಿಹಳ್ಳಿ ವಡ್ಡರಹಟ್ಟಿಯಲ್ಲಿ ಕೂಲಿ ಕಾರ್ಮಿಕರು, ಬಡ ಕುಟುಂಬದವರೇ ಹೆಚ್ಚು ವಾಸಿಸುವವರಿದ್ದಾರೆ. ಇಲ್ಲಿ ಅವ್ಯಾಹತವಾಗಿ ಮೂರ್ನಲ್ಕು ಕಡೆ ಮದ್ಯಅಕ್ರಮ ಮಾರಾಟ ನಡೆಯುತ್ತಿದ್ದು, ಇದರಿಂದ ಗ್ರಾಮದ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಮಹಿಳೆಯರು ಪ್ರಶ್ನೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಣ್ಣು ಮಕ್ಕಳಿಗೆ ಧಮಕಿ ಹಾಕುತ್ತಾರೆ ಎಂದು ಹಟ್ಟಿಯ ಮಹಿಳೆಯರು ಆರೋಪಿಸಿದ್ದಾರೆ.
ಗ್ರಾಮದಲ್ಲೇ ಮದ್ಯ ಮಾರಾಟ ಮಾಡುತ್ತಿರುವುದರಿಂದ ಚಿಕ್ಕಮಕ್ಕಳೂ ಸಹ ಮದ್ಯಕ್ಕೆ ಮೊರೆ ಹೋಗಿ ದಾಸರಾಗಿದ್ದಾರೆ. ಕೂಲಿ, ನಾಲಿ ಮಾಡುವ ಅಲ್ಲಿನ ಪುರುಷರು ಸಂಜೆಯಾಗುತ್ತಿದ್ದಂತೆಯೇ ದುಡಿದ ಪೂರ್ಣ ಹಣವನ್ನೂ ಮದ್ಯಕ್ಕೆ ಸುರಿಯುತ್ತಿದ್ದಾರೆ. ಮೀಟರ್​ ಬಡ್ಡಿಗೆ ಹಣ ಪಡೆದು ಕುಡಿದು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ಇಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ನೆಮ್ಮದಿಯಾಗಿ ಜೀವನ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net