ದಾರಿ ತಪ್ಪಿದವರನ್ನು ಸರಿದಾರಿಗೆ ತರಲು ಶಿಕ್ಷೆ / VIJAYAPUR

ವಿಜಯಪುರ ಪ್ರವಾಸಿ ಮಂದಿರದಲ್ಲಿ ಜೆಡಿಎಸ್​ ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಜಯಪುರ ಪ್ರವಾಸಿ ಮಂದಿರದಲ್ಲಿ ಜೆಡಿಎಸ್​ ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ವಿಜಯಪುರ : ಪಕ್ಷದ ಹೆಸರಿನಲ್ಲಿ ಗೆದ್ದು, ಬಳಿಕ ದಾರಿ ತಪ್ಪಿದ ಸದಸ್ಯರನ್ನು ಸರಿದಾರಿಗೆ ತರಲು ಶಿಕ್ಷೆ ಅನಿವಾರ್ಯ ಎಂದು ಜೆಡಿಎಸ್​ ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಗುಡುಗಿದ್ದಾರೆ. ವಿಜಯಪುರ ಪುರಸಭೆಯ ಏಳು ಮಂದಿ ಜೆಡಿಎಸ್​ ಸದಸ್ಯರನ್ನು ಜಿಲ್ಲಾಧಿಕಾರಿ ವಜಾ ಮಾಡಿದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಕ್ಷದ ಆದೇಶ ಉಲ್ಲಂಘಿಸಿ ಕಾಂಗ್ರೆಸ್​ಗೆ ಮತ ಹಾಕಿದ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ನಿರ್ದೇಶನ ಹಾಗೂ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಪತ್ರದ ಅನ್ವಯ ನಾನು ದೂರು ಸಲ್ಲಿಸಿದ್ದೆ. ಅದರ ಫಲವಾಗಿ ಜಿಲ್ಲಾಧಿಕಾರಿ ಏಳು ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.ವಜಾಗೊಂಡವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುನೇಗೌಡ ಸದ್ಯಕ್ಕೆ ಸದಸ್ಯತ್ವ ಮಾತ್ರ ಹೋಗಿದೆ, ಮುಂದಿನ ತೀಮಾರ್ನ ಪಕ್ಷ ಮಾಡುತ್ತದೆ ಎಂದರು.
ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಮತ್ತೆ ಪಕ್ಷದಲ್ಲಿ ಹೇಗೆ ಮುಂದುವರಿಸುತ್ತೀರಿ? ಎಂಬ ಪ್ರಶ್ನೆ ಎದುರಾದಾಗ, ರಾಜಕೀಯವೆಂದರೆ ಅನುಕೂಲಸಿಂಧು ರಾಜಕಾರಣ. ಈ ಹಿಂದೆ ಜೆಡಿಎಸ್​, -ಬಿಜೆಪಿ ಎಣ್ಣೆ ಸೀಗೆಕಾಯಿಯಂತಿದ್ದವು, ಈಗ ಒಂದಾಗಿಲ್ಲವೇ? ಹಾಗೆಯೇ ಸಂದರ್ಭಕ್ಕೆ ತಕ್ಕಂತೆ ಪಕ್ಷ ತೀಮಾರ್ನ ಕೈಗೊಳ್ಳುತ್ತದೆ ಎಂದು ನಿಲುವನ್ನು ಸಮರ್ಥಿಸಿಕೊಂಡರು.
ಪುರಸಭೆ ಸದಸ್ಯರಾದ ಎಂ.ಕೇಶವಪ್ಪ, ಸಿ.ಎಂ.ರಾಮು, ಶ್ರೀರಾಮ್​, ವಿಜಯಪುರ ಹೋಬಳಿ ಜೆ.ಡಿ.ಎಸ್​ ಅಧ್ಯಕ್ಷರಾದ ಪುರ ಕೃಷ್ಣ, ಟೌನ್​ ಜೆಡಿಎಸ್​ ಮಾಜಿ ಅಧ್ಯಕ್ಷ ಎನ್​.ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಎಸ್​.ಆರ್​.ಎಸ್​.ಬಸವರಾಜು, ಕಾರ್ಯದರ್ಶಿ ಆಸೀಫ್​, ಪುರಸಭಾ ಮಾಜಿ ಸದಸ್ಯ ಎಚ್​.ಎಂ.ಕೃಷ್ಣಪ್ಪ, ಪ್ರಕಾಶ್​, ಪಿ.ಸಿ.ವಿಜಯಕುಮಾರ್​, ಮಂಜುನಾಥ್​ ಉಪಸ್ಥಿತರಿದ್ದರು.
ಡಿಸಿ ವರ್ಗಾವಣೆಗೂ ಇದಕ್ಕೂ ಸಂಬಂಧವಿಲ್ಲ : ಜಿಲ್ಲಾಧಿಕಾರಿಯಾಗಿದ್ದ ಬಸವರಾಜು ಅವರ ವರ್ಗಾವಣೆಗೂ ಈ ವಜಾ ಪ್ರಕರಣದ ತಲೆದಂಡವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುನೇಗೌಡ, ಬಸವರಾಜು ಅವರು ಕಾನೂನುಬದ್ಧವಾಗಿಯೇ ನಡೆದಿದ್ದಾರೆ. ಸಚಿವ ಕೆ.ಎಚ್​. ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿಯ ಪತ್ನಿಯಾದ ಅನುರಾಧಾ ಅವರು ಈ ಹಿಂದಿನಿಂದಲೂ ಇಲ್ಲಿಗೆ ಬರಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಇದು ಸಾಮಾನ್ಯ ವರ್ಗಾವಣೆಯೇ ಹೊರತು ಈ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ, ಎಂದರು.
ಚರ್ಚೆಗೆ ಗ್ರಾಸವಾದ ಸಮಿತಿಗೆ ಆಯ್ಕೆ : ಫೆ.26ರಂದು 7 ಮಂದಿ ಸದಸ್ಯರ ಸದಸ್ಯತ್ವ ವಜಾ ಆಯಿತು. ಆದರೆ, 27ರಂದು ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ವಜಾಗೊಂಡ ಸದಸ್ಯರು ಮತದಾನ ಮಾಡಿರುವುದು ಹಾಗೂ ವಜಾಗೊಂಡವರ ಪೈಕಿ ಬೈರೇಗೌಡ ಎಂಬುವವರು ಸಮಿತಿಗೆ ಆಯ್ಕೆಯಾಗಿರುವುದು ಈಗ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ. ಈ ಮತದಾನ ಮತ್ತು ಆಯ್ಕೆ ಊರ್ಜಿತವೇ ಎಂಬ ಪ್ರಶ್ನೆಗಳ ಸರಮಾಲೆ ಇಡೀ ಜಿಲ್ಲಾ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರೊಟರಿ ಶಾಲಾ ಮೈದಾನವನ್ನು ಪುರಸಭೆ ವಶಪಡಿಸಿಕೊಂಡ ವಿಷಯದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ವಿಮಲಾ ಬಸವರಾಜು ಅವರ ಪಾತ್ರವೇನೂ ಇಲ್ಲ. ಅದು ರಾಜೇಶ್ವರಿ ಭಾಸ್ಕರ್​ ಅವರ ಅಧಿಕಾರಾವಧಿಯಲ್ಲಿ ನಡೆದ ತೀಮಾರ್ನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net