ಕುಡಿದು ಗಲಾಟೆ ಮಾಡಿದ ವಕೀಲನಿಗೆ ಶಿಕ್ಷೆ| High court

High court
High court
Published on
ಬೆಂಗಳೂರು: ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯುಂಟು ಮಾಡುವುದು ಮತ್ತು ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಕೃತ್ಯಗಳನ್ನು ಕ್ರಿಮಿನಲ್​ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬಹುದು ಎಂದಿರುವ ಹೈಕೋರ್ಟ್​, ನ್ಯಾಯಾಲಯದ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ವಕೀಲರೊಬ್ಬರಿಗೆ ಒಂದು ದಿನದ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಕಾರವಾರದ ಹೆಚ್ಚುವರಿ ಸಿವಿಲ್​ ಮತ್ತು ಜೆಎಂಎ್​ಸಿ ನ್ಯಾಯಾಲಯದಲ್ಲಿ ಅಶಿಸ್ತು ತೋರಿದ ವಕೀಲ ಪಂಕಜ್​ ಕೌಶಿಕ್​ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿರುವ ನ್ಯಾಯಮೂರ್ತಿಗಳಾದ ಅನು ಸಿವರಾಮನ್​ ಮತ್ತು ಟಿ.ವೆಂಕಟೇಶ್​ ನಾಯಕ್​ ಅವರಿದ್ದ ವಿಭಾಗೀಯ ಪೀಠ ಸೆ.11ರಂದು ಈ ಆದೇಶ ನೀಡಿದೆ. ನ್ಯಾಯಾಲಯದ ತೀರ್ಪುಗಳನ್ನು ಟೀಕಿಸಲು ಅವಕಾಶವಿದೆ. ಆದರೆ, ನ್ಯಾಯಾಧೀಶರ ವಿರುದ್ಧ ಆಧಾರರಹಿತವಾದ ವೈಯಕ್ತಿಕ ಹೇಳಿಕೆಗಳನ್ನು ನೀಡಿ ನ್ಯಾಯಾಂಗದ ನತೆಗೆ ಧಕ್ಕೆ ತರಲು ಅವಕಾಶ ನೀಡಲಾಗದು ಎಂದಿದೆ.

ಪ್ರಕರಣದ ಹಿನ್ನೆಲೆ: 

ಪಂಕಜ್​ ಕೌಶಿಕ್​ ತಮ್ಮ ವಿರುದ್ಧದ ಪ್ರಕರಣವೊಂದರಲ್ಲಿ ಕಾರವಾರ ನ್ಯಾಯಾಲಯದಲ್ಲಿ ಸ್ವತ@ ವಾದಿಸುತ್ತಿದ್ದರು. 2022ರ ಏ.8ರಂದು ಪ್ರಕರಣದ ವಿಚಾರಣೆ ನಿಗದಿಯಾಗದಿದ್ದರೂ, ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿ ನ್ಯಾಯಾಧೀಶರು ಮತ್ತು ಬೆಂಚ್​ ಕ್ಲರ್ಕ್​ ಮೇಲೆ ಕೂಗಾಡಿದ್ದರು. ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿ, ತಮ್ಮಪತ್ನಿಯ ಪರವಾಗಿ ತೀರ್ಪು ನೀಡಲು ಆಕೆಯಿಂದ ನ್ಯಾಯಾಧೀಶರು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ಬಗ್ಗೆ ಹೈಕೋರ್ಟ್​ನ ರಿಜಿಸ್ಟ್ರಿಗೆ ಮಾಹಿತಿ ನೀಡಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್​ ನ್ಯಾಯಾಧೀಶರು ಕ್ರಮಕ್ಕೆ ಮನವಿ ಮಾಡಿದ್ದರು.
 ಏ.11ರಂದು ಕ್ಷಮಾಪಣಾ ಪತ್ರ ಸಲ್ಲಿಸಿ, ತಮ್ಮ ವಿರುದ್ಧದ ಕ್ರಮ ಕೈಬಿಡುವಂತೆ ಕೋರಿದ್ದರು. ಆದರೆ, ಏ.20ರಂದು ಹಿರಿಯ ವಕೀಲರೊಬ್ಬರು ವಾದಿಸುತ್ತಿದ್ದಾಗ ಪುನಃ ಕಲಾಪಕ್ಕೆ ಪ್ರವೇಶಿಸಿದ್ದ ಪಂಕಜ್​ ಕೌಶಿಕ್​, ತಮ್ಮ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಕೂಗಾಡಿದ್ದರು. ಆಗ ಅವರನ್ನು ಆಸ್ಪತ್ರೆಗೆ ಕಳುಹಿಸಿ ಪರೀಸಿದಾಗ ಮದ್ಯ ಸೇವಿಸಿ ನ್ಯಾಯಾಲಯ ಪ್ರವೇಶಿಸಿದ್ದು ಪತ್ತೆಯಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net