ಪಿಯು ಉತ್ತಮ ಉಪನ್ಯಾಸಕ ಪ್ರಶಸ್ತಿ: ಶೇ.90 ಫಲಿತಾಂಶ ಮಾನದಂಡ ನಿಗದಿ ಮಾಡಿದ ಶಿಕ್ಷಣ ಇಲಾಖೆ

ಉತ್ತಮ ಉಪನ್ಯಾಸಕ-ಪ್ರಾಚಾರ್ಯ ಪ್ರಶಸ್ತಿ
ಉತ್ತಮ ಉಪನ್ಯಾಸಕ-ಪ್ರಾಚಾರ್ಯ ಪ್ರಶಸ್ತಿ
Published on

ಪ್ರಮುಖ ಮುಖ್ಯಾಂಶಗಳು

  • 2026-27ನೇ ಶೈಕ್ಷಣಿಕ ಸಾಲಿಗೆ ಉತ್ತಮ ಉಪನ್ಯಾಸಕ ಮತ್ತು ಉತ್ತಮ ಪ್ರಾಂಶುಪಾಲ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
  • ಕಳೆದ 5 ವರ್ಷಗಳಿಂದ 40 ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದಎ, ಶೇ. 90ಕ್ಕಿಂತ ಹೆಚ್ಚಿನ ಫಲಿತಾಂಶವಿರಬೇಕು
  • ಅರ್ಹ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಆ.10ರೊಳಗೆ ಅರ್ಜಿ ಸಲ್ಲಿಸಬಹುದು. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು: ಕಳೆದ 5 ವರ್ಷಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದಿರುವ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಚಾರ್ಯರು ಮಾತ್ರ ಉತ್ತಮ ಉಪನ್ಯಾಸಕ-ಪ್ರಾಚಾರ್ಯ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ತಿಳಿಸಿದೆ.
2026-27ನೇ ಶೈಕ್ಷಣಿಕ ಸಾಲಿಗೆ ಉತ್ತಮ ಉಪನ್ಯಾಸಕ ಮತ್ತು ಉತ್ತಮ ಪ್ರಾಂಶುಪಾಲ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಕಳೆದ 5 ವರ್ಷಗಳಿಂದ 40 ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದಎ, ಶೇ. 90ಕ್ಕಿಂತ ಹೆಚ್ಚಿನ ಫಲಿತಾಂಶವಿರಬೇಕು ಎಂದು ತಿಳಿಸಿದೆ.
ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಆ.10ರೊಳಗೆ ಅರ್ಜಿ ಸಲ್ಲಿಸಬಹುದು. ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮಾ.31ಕ್ಕೆ ಅನ್ವಯವಾಗುವಂತೆ 10 ವರ್ಷಗಳ ಬೋಧನಾ ಅನುಭವ ಹೊಂದಿರುವ ಉಪನ್ಯಾಸಕರು ಹಾಗೂ 3 ವರ್ಷ ಆಡಳಿತ ನಡೆಸಿರುವ ಪ್ರಾಚಾರ್ಯರು ಅರ್ಜಿ ಸಲ್ಲಿಸಬಹುದು.
ಪ್ರತಿ ಜಿಲ್ಲೆಯಿಂದ ಐವರು ಉತ್ತಮ ಉಪನ್ಯಾಸಕರನ್ನು (ಕನ್ನಡ, ಆಂಗ್ಲ ಹಾಗೂ ಇತರೆ ಭಾಷೆಗಳು, ಕಲಾ ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳಿಂದ ತಲಾ ಒಬ್ಬರಂತೆ) ಆಯ್ಕೆ ಮಾಡಲಾಗುತ್ತದೆ.
ಲಿಂಕ್ ಬಳಸಿ, ಕಾಲೇಜಿನ ಪ್ರಾಚಾರ್ಯರ ಲಾಗಿನ್ ಐಡಿ ಮೂಲಕ ಶಿಫಾರಸಿನೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಉಪನ್ಯಾಸಕರ ಸಂಘ ಅಸಮಾಧಾನ

ಸರ್ಕಾರ ನಿಗದಿ ಮಾಡುವ ಮಾನದಂಡಕ್ಕೂ, ವಾಸ್ತವಾಂಶಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಉಪನ್ಯಾಸಕರ ಬೋಧನೆ, ಕಲಿಸುವ ವಿಧಾನ, ಸೇವೆಯನ್ನು ಪರಿಗಣಿಸಬೇಕೇ ವಿನಾ, ಲಿತಾಂಶವೊಂದನ್ನೇ ಮಾನದಂಡವಾಗಿ ಪರಿಗಣಿಸಿದರೆ ಹೇಗೆ?, 40ಕ್ಕಿಂತ ಕಡಿಮೆ ಮಕ್ಕಳಿರುವ ಕಾಲೇಜಿನ ಉಪನ್ಯಾಸಕರು ಪ್ರಶಸ್ತಿಗೆ ಅರ್ಹರಲ್ಲವೇ? ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net