ಕೋಲಿ-ಕಬ್ಬಲಿಗ ಸಮಾಜಕ್ಕೆ ಅವಕಾಶ ನೀಡಿ

ಮಲ್ಲಿಕಾರ್ಜುನ ಗೋಸಿ
ಮಲ್ಲಿಕಾರ್ಜುನ ಗೋಸಿ
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುಣ ಗೋಸಿ ಮನವಿ
  • ನಿರ್ಲಕ್ಷ್ಯವಹಿಸಿದರೆ ತಕ್ಕ ಪಾಠದ ಎಚ್ಚರಿಕೆ
ಯಾದಗಿರಿ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಉಳಿದಿರುವ ಒಂದು ಸಚಿವ ಸ್ಥಾನವನ್ನು ಕೋಲಿ, ಕಬ್ಬಲಿಗ ಸಮುದಾಯಕ್ಕೆ ನೀಡಬೇಕು. ಹಾಗೊಂದು ವೇಳೆ ನಿರ್ಲಕ್ಷ್ಯವಹಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದಾಗಿ ಜಿಲ್ಲಾ ಕೋಲಿ, ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರು ಇತ್ತು. ಕರಾವಳಿ ಭಾಗದವರು ಆಗಿದ್ದರೂ ನಮ್ಮ ಸಮಾಜದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ ಎನ್ನುವಷ್ಟರಲ್ಲಿಯೇ ಅವರ ಹೆಸರು ಕೈಬಿಟ್ಟು, ಬೇರೆ ಸಮಾಜದವರನ್ನು ಸೇರಿಸಲಾಗಿದೆ. ಇಂತಹ ಅನ್ಯಾಯ ಸಹಿಸಲು ಆಗುವುದಿಲ್ಲ ಎಂದರು.
ಮಂಕಾಳ ವೈದ್ಯ ಅವರನ್ನು ಕೈಬಿಟ್ಟಿದ್ದರೆ ನಮ್ಮ ಭಾಗದ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಅವರಿಗಾದರೂ ಕೊಡಬಹುದಾಗಿತ್ತು. ಅವರಿಗೂ ಕೊಡದೆ ರಾಜ್ಯದಲ್ಲಿರುವ ಸುಮಾರು ೫೦ ಲಕ್ಷ ಕೋಲಿ, ಕಬ್ಬಲಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು. ರಾಜಕೀಯವಾಗಿ ಸಮಾಜಕ್ಕೆ ಮಾಡಿದ ಅನ್ಯಾಯದ ಬಗ್ಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸುತ್ತೇವೆ. ಮತದಾನ ಮಾಡುವ ಮುಂಚೆ ಆಲೋಚನೆ ಮಾಡಿ, ಸಮಾಜಕ್ಕೆ ಯಾರು ಒಳಿತು ಮಾಡಿದವರಿಗೆ ಮತ ಹಾಕಿ, ಮಾಡದೆ ಇರುವವರಿಗೆ ಹಾಕಬೇಡಿ ಎಂದು ಪ್ರಚಾರ ಮಾಡಲು ಸಿದ್ಧರಿದ್ದೇವೆ ಎಂದು ಗೋಸಿ ಎಚ್ಚರಿಕೆ ನೀಡಿದರು.
ಗುರುಮಠಕಲï ಕ್ಷೇತ್ರದಲ್ಲಿ ಕಳೆದ ಸಲ ಬಾಬುರಾವ್ ಚಿಂಚನಸೂರ್ ಅವರನ್ನು ಕಾಂಗ್ರೆಸ್ ಪಕ್ಷದವರೆ ಸೋಲಿಸಿz್ದÁರೆ. ಆಗ ಅಲ್ಲಿ ಕಾಣದ ಕೈಗಳು ಕೆಲಸ ಮಾಡಿ ಸೋಲಿಸಿz್ದÁರೆ. ಅವರಿಗೂ ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದರು. ಕಲ್ಯಾಣ ಕರ್ನಾಟಕದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವAತಹ ಕೋಲಿ ಸಮಾಜಕ್ಕೆ ಒಂದೂ ಸ್ಥಾನ ಕೊಡದಿರುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದರು. ಈ ವೇಳೆ ಮುಖಂಡರಾದ ಮಲ್ಲು ಪೂಜÁರಿ, ಬಸವರಾಜಪ್ಪ ಕೋಲಕರ, ನಿಂಗಪ್ಪ ಜÁಲಗಾರ, ಭೀಮರೆಡ್ಡಿ ಯರಗೋಳ, ಬಸವರಾಜಪ್ಪ ಬಾಗಲಿ, ಮಹಾದೇವಪ್ಪ ಗಣಪುರ, ಅಯ್ಯಪ್ಪ ನಾಯ್ಕೋಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net