ಶಿಕ್ಷಣದೊಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

Provide necessary facilities along with education.
Provide necessary facilities along with education.
Published on
ಮುಳಬಾಗಿಲು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದೊಂದಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ವಿದ್ಯಾರ್ಥಿಗಳು ಖಾಸಗಿ ಶಾಲೆ ಮಕ್ಕಳ ಸಮಾನವಾಗಿ ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಸಾಧಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆನಂದ್​ ಅಭಿಪ್ರಾಯಪಟ್ಟರು.
ಪಟ್ಟಣದ ನೇತಾಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಮಾತೃಪೂಜಾ ಹಾಗೂ ವಿದ್ಯಾರ್ಥಿಗಳಿಗೆ ಟ್ರಾ$್ಯಕ್​ ಸೂಟ್​ ವಿತರಣೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಟ್ರಾ$್ಯಕ್​ ಸೂಟ್​ ವಿತರಿಸಿರುವ ದಾನಿ ಲಕ್ಷಿ$್ಮ ಅಶ್ವತ್ಥ್​ ಸೇವೆ ಶ್ಲಾಘನೀಯ ಎಂದರು.
ಮುಖ್ಯಶಿಕ್ಷಕಿ ಪಾರಿಜಾತಾ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ, ಹಿರಿಯರ ಬಗ್ಗೆ ಗೌರವ ಹಾಗೂ ಕೃತಜ್ಞತೆ ಮನೋಭಾವ ಬೆಳೆಸುವ ಉದ್ದೇಶದಿಂದ ಮಾತೃಪೂಜೆ ಹಮ್ಮಿಕೊಳ್ಳಲಾಗಿದೆ. ಮನೆ ಮತ್ತು ಶಾಲೆಯೇ ಮಕ್ಕಳ ವ್ಯಕ್ತಿತ್ವ ರೂಪಿಸುವ ಮೊದಲ ಪಾಠ ಶಾಲೆಗಳಾಗಿದ್ದು, ಪಾಲಕರಿಗೆ ಗೌರವ ಸಲ್ಲಿಸುವ ಸಂಸ್ಕಾರದಿಂದ ಸುಸಂಸತ ಸಮಾಜ ನಿಮಾರ್ಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದ ತೊಳೆದು ಪೂಜಿಸಿ, ಆಶೀರ್ವಾದ ಪಡೆದರು. ಬಳಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ದಾನಿ ಲಕ್ಷಿ$್ಮ ಅಶ್ವತ್ಥ್​ ಟ್ರಾ$್ಯಕ್​ ಸೂಟ್​ ವಿತರಿಸಿದರು.
ದಾನಿ ಲಕ್ಷಿ$್ಮಅಶ್ವತ್ಥ್​, ಸರ್ವೇಯರ್​ ಅಶ್ವತ್ಥ್​, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್​, ಸಿಆರ್​ಪಿ ಆರ್​.ಕೃಷ್ಣಪ್ಪ, ಮುಖ್ಯಶಿಕ್ಷಕರಾದ ಸುಬ್ರಹ್ಮಣ್ಯ, ಎಂ.ಸಿ.ರಘುನಾಥ್​, ಲಕ್ಷಿ$್ಮನಾರಾಯಣ, ನಿವೃತ್ತ ಮುಖ್ಯಶಿಕ್ಷಕಿ ಸರೋಜಮ್ಮ, ಶಿಕ್ಷಕಿ ನಾಗರತ್ನಮ್ಮ, ಮುಖ್ಯಶಿಕ್ಷಕಿ ಪಾರಿಜಾತಾ, ಶಿಕ್ಷಕರಾದ ಸುನಂದಮ್ಮ, ವಾಣಿ, ಶೋಭಾ, ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net