ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಆರ್.ಎಸ್.ಪಾಟೀಲ್ ಮಾತನಾಡಿದರು. ನ್ಯಾಯಾಧೀಶರಾದ ಈರಣ್ಣಾ, ಬಾಳಾಸಾಹೇಬ್, ರಾಹುಲ್ರಾವ್, ಸಂದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಆಶನಾಳ್ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ನ್ಯಾಯಾಧೀಶ ಮರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಲಯ ಸಿಬ್ಬಂದಿ ನಿರ್ಮಲಾ ಪ್ರಾರ್ಥಿಸಿದರು. ಆರಂಭದಲ್ಲಿ ನ್ಯಾಯಲಯದ ಆವರಣದಲ್ಲಿ ಚಾರಿಟೇಬಲ್ನಿಂದ ಕೊಡಲಾದ ನೀರು, ಆಹಾರ ಸಂಗ್ರಹಿಸಿ ಇಡುವ ಸ್ಟಾಂಡ್ಗಳಲ್ಲಿ ಮಣ್ಣಿನ ಕಪ್ಗಳಲ್ಲಿ ನ್ಯಾಯಾಧೀಶರು ಆಹಾರ, ನೀರು ಹಾಕುವ ಮೂಲಕ ಸಾಂಕೇತಿಕವಾಗಿ ಇದನ್ನು ಉದ್ಘಾಟಿಸಿದರು.