ಪತ್ರಿಕೆ ಹಂಚುವವರಿಗೆ ಸೌಲಭ್ಯ ಕಲ್ಪಿಸಿ

Provide facilities to newspaper distributors
Provide facilities to newspaper distributors
Published on
ಶಿರಾ: ದಿನ ಪತ್ರಿಕೆ ಹಂಚುವ ಅನೇಕರು ಉನ್ನತ ಹುದ್ದೆಗಳನ್ನು ಪಡೆದಿದ್ದು ಯಾವುದೇ ಪ್ರತಿಪಲಾಕ್ಷೆ ಇಲ್ಲದ ವೃತ್ತಿ, ದಿನ ಪತ್ರಿಕೆ ಹಂಚುವ ವೃತ್ತಿ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದ ಜೀ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಶಿರಾ ತಾಲೂಕು ಟಕದ ಪತ್ರಕರ್ತರು ಹಾಗೂ ಪತ್ರಿಕೆ ಹಂಚಿಕೆ ಮಾಡುವ ಸುಮಾರು 95 ಹುಡುಗರಿಗೆ ಜರ್ಕಿನ್​ ವಿತರಿಸಿ ಮಾತನಾಡಿ, ಯಾವುದೇ ಪತ್ರಿಕೆಗಳಲ್ಲಿ ಸುದ್ದಿಯು ಸಮಾಜ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಮಹತ್ಕಾರ್ಯವನ್ನು ಪತ್ರಿಕೆ ಹಂಚುವ ಹುಡುಗರು ಮಾಡುತ್ತಾರೆ. ಆದರೆ, ಪತ್ರಿಕೆ ಹಂಚಿಕೆ ಮಾಡುವ ಹುಡುಗರಿಗೆ ಯಾವುದೇ ಸವಲತ್ತು, ಭದ್ರತೆ ಇಲ್ಲ. ಹಾಗಾಗಿ, ಸರ್ಕಾರಗಳು, ಪತ್ರಿಕಾ ಕಂಪನಿಗಳು ಪತ್ರಿಕೆ ಹಂಚುವ ಹುಡುಗರನ್ನು ಕಡೆಗಣಿಸದೆ ಅವರಿಗೆ ಮೂಲ ಸವಲತ್ತುಗಳನ್ನು ಒದಗಿಸಬೇಕು ಎಂದರು.
ಭಾರತದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್​ ಕಲಾಂ, ಅಮೆರಿಕದ ಅಧ್ಯಕ್ಷರಾಗಿದ್ದ ಬೇಡೆನ್​ ಸಹ ದಿನ ಪತ್ರಿಕೆ ಹಂಚುತ್ತಿದ್ದರು. ಪತ್ರಿಕೆ ಹಂಚುವ ಹುಡುಗರು ನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಎಲ್ಲ ಕಂಪನಿಗಳು ಪತ್ರಿಕೆ ಹಂಚುವ ಹುಡುಗರ ಆರೋಗ್ಯದ ಉದ್ದೇಶಕ್ಕೆ ಹಣಮೀಸಲಿಟ್ಟು ಅವರಿಗೆ ಮೂಲ ಸವಲತ್ತು ನೀಡಿ ಎಂದು ತಿಳಿಸಿದರು.
ಕೆಯುಡಬ್ಲುಜೆ ಜಿಲ್ಲಾಧ್ಯಕ್ಷ ಎಲ್​.ಯೋಗೇಶ್​ ಮಾತನಾಡಿ, ಪತ್ರಿಕೆ ಹಂಚುವ ಹುಡುಗರು ಯೋಧರಿದ್ದಂತೆ, ಸೈನಿಕರು ಗಡಿಯಲ್ಲಿ ದೇಶವನ್ನು ಯಾವುದೇ ಚಳಿ, ಮಳೆ ಎನ್ನದೆ ದೇಶಕಾಯುವ ಕೆಲಸ ಮಾಡುತ್ತಾರೆ. ಪತ್ರಿಕೆ ಹಂಚುವ ಹುಡುಗರು ಚಳಿ, ಮಳಿ ಗಾಳಿ ಎನ್ನದೆ ತಮ್ಮ ಕೆಲಸ ಮಾಡುತ್ತಾರೆ ಎಂದರು.
ಕೆಯುಡಬ್ಲುಜೆ ಶಿರಾ ತಾಲೂಕು ಟಕದ ಅಧ್ಯಕ್ಷ ಎನ್​.ದೇವರಾಜು ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರುರಾಮ್​, ಉಪಾಧ್ಯಕ್ಷರಾದ ದಶರಥ, ಜಯಣ್ಣ ಜಯನುಡಿ, ಚಿ.ನಿ.ಪುರುಷೋತ್ತಮ, ಶಿರಾ ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್​.ಎನ್​. ಜೈಪಾಲ್​, ಪ್ರಧಾನ ಕಾರ್ಯದರ್ಶಿ ಕೆ.ಕುಮಾರ್​, ಉಪಾಧ್ಯಕ್ಷರಾದ ವೀರಭದ್ರಸ್ವಾಮಿ, ಬಾಲಕೃಷ್ಣೇಗೌಡ, ಫಕೃದ್ದೀನ್​ ಬಾಬು, ಓಂಕಾರಪ್ಪ, ವಲೀಸಾಬ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net