ಯಕ್ಕಂಚಿ ಕ್ರಾಸ್ ಬಳಿಯ ಇಂದಿರಾಗಾಂಧಿ ವಸತಿಶಾಲೆಯ ಅಡುಗೆ ಕೋಣೆಗೆ ಜಿಪಂ ಸಿಇಒ ರಾಹುಲ್ ಸಂಕನೂರ ಭೇಟಿ ನೀಡಿ ಪರಿಶೀಲಿಸಿದರು. ರಮೇಶ ಪಾಟೀಲ್, ರಾಮಚಂದ್ರ, ಜಗನ್ನಾಥ ರೆಡ್ಡಿ, ಕವಿತಾ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಪಂ ಸಿಇಒ ರಾಹುಲ್ ಸಂಕನೂರ ಸೂಚನೆ
ಇಂದಿರಾಗಾಂಧಿ ವಸತಿಶಾಲೆಗೆ ಭೇಟಿ
ಕಮಲಾಪುರ: ಇಂದಿನ ಮಕ್ಕಳು ನಾಡಿನ ಭಾವಿ ಪ್ರಜೆಗಳಾಗಿದ್ದಾರೆ. ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶುಚಿ-ರುಚಿಯಾದ ಆಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಸಂಕನೂರ ಸೂಚನೆ ನೀಡಿದರು.
ಯಕ್ಕಂಚಿ ಕ್ರಾಸ್ ಬಳಿಯ ಇಂದಿರಾಗಾಂಧಿ ವಸತಿಶಾಲೆಗೆ ಗುರುವಾರ ಭೇಟಿ ನೀಡಿ ಅಡುಗೆ ಕೋಣೆ, ಆಹಾರ ಪದಾರ್ಥ, ದವಸ& ಧಾನ್ಯ ಹಾಗೂ ತರಕಾರಿ ಪರಿಶೀಲಿಸಿದ ಅವರು, ಕಳಪೆ ಪದಾರ್ಥಗಳನ್ನು ಬಳಸಬೇಡಿ. ಕೆಲವೆಡೆ ತಿನ್ನಲು ಯೋಗ್ಯವಲ್ಲದ ಹಾಗೂ ದಿನಾಂಕ ಮುಗಿದಿರುವ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಾಸ್ಟೆಲ್ ಆವರಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಎಂದು ಸೂಚನೆ ನೀಡಿದರು.
ಮಹಾಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದ್ರನಗರದಲ್ಲಿ ಜೆಜೆಎಂ ಯೋಜನೆಯಡಿ ಕೈಗೊಂಡ ಪೈಪ್ಲೈನ್, ನಾಗೂರ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಸಾರ್ವಜನಿಕ ಶೌಚಗೃಹ, ತಡಕಲ್ನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೈಗೊಂಡ ಕಾಮಗಾರಿ ಪರಿಶೀಲಿಸಿದರು.
ಕಮಲಾಪುರ ತಾಪಂ ಇಒ ರಮೇಶ ಪಾಟೀಲ್, ಗ್ರಾಮೀಣ ಕುಡಿವ ನೀರು ಸರಬರಾಜು ನಿಗಮದ ಎಇಇ ರಾಮಚಂದ್ರ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಜಗನ್ನಾಥ ರೆಡ್ಡಿ, ಇಂದಿರಾಗಾಂಧಿ ವಸತಿಶಾಲೆ ಪ್ರಭಾರಿ ಪ್ರಾಂಶುಪಾಲೆ ಕವಿತಾ, ವಾರ್ಡನ್ ರವಿಕುಮಾರ, ಪಿಡಿಒಗಳಾದ ಮಂಜುನಾಥ (ಮಹಾಗಾಂವ್), ಅಭಿಜಿತ್ (ಕುರಿಕೋಟಾ), ವಾಹೆದ್ ಅಲಿ (ನಾಗೂರ), ಅಧಿಕಾರಿಗಳಾದ ಗಿರೀಶ ಇಂಡಿ, ಉಮೇಶ ಯಕ್ಕಂಚಿ ಇತರರಿದ್ದರು.
"
ನಾನು ಸರ್ಕಾರಿ ಹಾಸ್ಟೆಲ್ಗಳಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಐಎಎಸ್ ಅಧಿಕಾರಿಯಾಗಿದ್ದೇನೆ. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಶ್ರದ್ಧೆಯಿಂದ ನಿರಂತರ ಅಭ್ಯಾಸ ಮಾಡಿದರೆ ಗುರಿ ತಲುಪಲು ಸಾಧ್ಯ.