ರೈತರಿಗೆ ಸೂಕ್ತ ಸಾಲ ಸೌಲಭ್ಯ ಕಲ್ಪಿಸಿ

ಆಳಂದ ಎಪಿಎಂಸಿ ಆವರಣದಲ್ಲಿ ಕೆವೈಡಿಸಿಸಿ ಬ್ಯಾಂಕ್​ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಆರ್​.ಪಾಟೀಲ್​ ಚಾಲನೆ ನೀಡಿದರು. ಅಶೋಕ ಸಾವಳೇಶ್ವರ, ಪವನಕುಮಾರ ರಾಠೋಡ್​, ಶಿವಪುತ್ರಪ್ಪ ಪಾಟೀಲ್​ ಇತರರಿದ್ದರು.
ಆಳಂದ ಎಪಿಎಂಸಿ ಆವರಣದಲ್ಲಿ ಕೆವೈಡಿಸಿಸಿ ಬ್ಯಾಂಕ್​ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಆರ್​.ಪಾಟೀಲ್​ ಚಾಲನೆ ನೀಡಿದರು. ಅಶೋಕ ಸಾವಳೇಶ್ವರ, ಪವನಕುಮಾರ ರಾಠೋಡ್​, ಶಿವಪುತ್ರಪ್ಪ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಆರ್​.ಪಾಟೀಲ್​ ಸಲಹೆ
  • ಆಳಂದನಲ್ಲಿ ಕೆವೈಡಿಸಿಸಿ ಬ್ಯಾಂಕ್​ ಕಟ್ಟಡ ನಿರ್ಮಾಣಕ್ಕೆ ಚಾಲನೆ
ಆಳಂದ: ಗುಣಮಟ್ಟದ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಉತ್ತಮ ಬ್ಯಾಂಕಿಂಗ್​ ಸೇವೆ ಒದಗಿಸಬೇಕು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಸಾಲ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯರೂ ಆದ ಶಾಸಕ ಬಿ.ಆರ್​.ಪಾಟೀಲ್​ ಸಲಹೆ ನೀಡಿದರು.
ಎಪಿಎಂಸಿ ಆವರಣದಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿ&ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಕೆವೈಡಿಸಿಸಿ) ಬ್ಯಾಂಕ್​ನ ಸ್ಥಳಿಯ ಶಾಖೆ ಕಟ್ಟಡ ನಿರ್ಮಾಣ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು ಬೆಳೆ ಸಾಲ, ಕೃಷಿ ಉಪಕರಣ ಖರೀದಿ, ಹೈನುಗಾರಿಕೆ, ಸಣ್ಣ ಉದ್ಯಮ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕ್​ಗಳನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಬ್ಯಾಂಕ್​ಗಳು ರೈತಸ್ನೇಹಿ ಕಾರ್ಯವೈಖರಿ ಅನುಸರಿಸಬೇಕು ಎಂದು ಹೇಳಿದರು.
ರೈತಾಪಿ ವರ್ಗ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಬ್ಯಾಂಕ್​ಗಳ ಆರ್ಥಿಕ ಸ್ಥಿತಿ ಮತ್ತಷ್ಟು ಸದೃಢಗೊಳ್ಳಲಿದೆ. ಇದರಿಂದ ಹೆಚ್ಚಿನ ರೈತರಿಗೆ ಹೊಸ ಬೆಳೆ ಸಾಲ, ಹೈನುಗಾರಿಕೆ ಸಾಲ ಹಾಗೂ ಸ್ವಸಹಾಯ ಚಟುವಟಿಕೆಗಳಿಗೆ ಹಣದ ನೆರವು ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಲಬುರಗಿ&ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಕೆವೈಡಿಸಿಸಿ) ಬ್ಯಾಂಕ್​ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿ, ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದ ತೊಂದರೆ ಆಗುತ್ತಿತ್ತು. ರೈತರ ಬಹುದಿನಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿತ್ತು. ಹೊಸ ಕಟ್ಟಡ ನಿರ್ಮಾಣದಿಂದ ಬ್ಯಾಂಕ್​ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಲಿವೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ ರಾಠೋಡ್​ ಪ್ರಸ್ತಾವಿಕ ಮಾತನಾಡಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಶಿವುಪುತ್ರಪ್ಪ ಪಾಟೀಲ್​, ಶಾಖೆ ವ್ಯವಸ್ಥಾಪಕ ಶರಣಬಸಪ್ಪ, ಪ್ರಮುಖರಾದ ಶರಣಪ್ಪ ಢಗೆ, ಭರತ್​ ಪಾಟೀಲ್​, ವೀರಭದ್ರ ಕೋರೆ, ಬಸವರಾಜ ಪಾಟೀಲ್​, ಮಹಾದೇವ ಪಾಟೀಲ್​, ಸಿದ್ದರಾಮ ಆಳಂಗೆ, ಕಲ್ಯಾಣರಾವ ಮೂಲಗೆ, ವಿಠ್ಠಲ್​ ಹೂಗಾರ, ಶ್ರೀಕಾಂತ ಹೂಗಾರ, ಚನ್ನವಿರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net