ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ solution

ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ solution
ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ solution
Published on

ಪ್ರಮುಖ ಮುಖ್ಯಾಂಶಗಳು

  • ರೈತ ದಿನಾಚಾರಣೆಯಲ್ಲಿ ಹೇಳಿಕೆ
ದಾಬಸ್​ಪೇಟೆ: ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಬಡ ರೈತರ ನೆರವಿಗೆ ದಾವಿಸಬೇಕಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಆರ್​.ಚನ್ನೇಗೌಡ ಹೇಳಿದರು. solution
ನೆಲಮಂಗಲ ತಾಲೂಕಿನ ದಾಬಸ್​ಪೇಟೆ ಶಿವಗಂಗೆ ರಸ್ತೆಯಲ್ಲಿನ ಶಿವಶ್ರೀ ಬಸವಶ್ರೀ ಸಮುದಾಯ ಭವನದಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚಾರಣೆ ಮತ್ತು ಕಿಸಾನ್​ ಘೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದ್ದರೂ ರೈತರ ಬದುಕು ಹಸನಾಗುತ್ತಿಲ್ಲ. ಬೆಲೆಗಳ ಏರಿಳಿತ, ಹವಮಾನ ವೈಪರಿತ್ಯ, ಕಾಡುಪ್ರಾಣಿಗಳ ಹಾವಳಿ, ರೋಗಗಳ ಭಾದೆ, ಕಳಪೆ ಬಿತ್ತನೆ ಬೀಜ, ಬೆಂಬಲ ಬೆಲೆ ಸಿಗದಿರುವುದು, ಮಾರುಕಟ್ಟೆ ಸಮಸ್ಯೆ, ಸಕಾಲಕ್ಕೆ ಸಿಗದ ಗೊಬ್ಬರ ಸೌಲಭ್ಯ ಹೀಗೆ ಹತ್ತಾರು ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಕೆವಿಕೆ ಹಿರಿಯ ಕೃಷಿ ವಿಜ್ಞಾನಿ ಹನುಮಂತರಾಯ ಮಾತನಾಡಿ, ರೈತರು ಸಮಗ್ರ ಕೃಷಿ ಬೇಸಾಯ ಅಳವಡಿಸಿಕೊಂಡಾಗ ಆದಾಯದ ಮೂಲ ಹೆಚ್ಚಿಸಿಕೊಳ್ಳಬಹುದು. ಕೃಷಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಜಿಕೆವಿಕೆ ವಿಜ್ಞಾನಿ ಸುರೇಶ್​, ತಾಲೂಕು ಉಪಕೃಷಿ ನಿರ್ದೇಶಕಿ ಪಂಕಜಾ ಮಾತನಾಡಿದರು. ಮೀನುಗಾರಿಕೆ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೈತರಿಗೆ ಸೌಲಭ್ಯ ವಿತರಿಸಿ ಸಾಧಕ ರೈತರಿಗೆ ಸನ್ಮಾನ ಮಾಡಲಾಯಿತು.
ಕೃಷಿಕ ಸಮಾಜದ ನಿರ್ದೇಶಕರಾದ ಜಿ.ಪುರುಷೋತ್ತಮ್​, ಕೆ.ಎಸ್​.ನಾಗರಾಜು, ಗುರುರಾಜ್​, ವೆಂಕಟೇಶಯ್ಯ, ನಾರಾಯಣಸ್ವಾಮಿ, ರಾಮಚಂದ್ರಯ್ಯ, ಅರುಣ್​ಕುಮಾರ್​, ರಂಗರಾಜು, ಮೂರ್ತಿ, ಸರೋಜಮ್ಮ, ಶ್ರೀನಿವಾಸ, ಸೋಮಶೇಖರ್​ ಜನಪ್ರತಿನಿಧಿಗಳು, ರೈತ ಸಂಘದ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net