ವಿವಿಧ ಬೇಡಿಕೆ Satyagraha ಈಡೇರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಕೋಳಾಲ ನಾಗರಾಜು, ದೇವರಾಜು, ಗ್ಯಾರಂಟಿ ಅನಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗೋಣಿತುಮಕೂರು ಲಕ್ಷಿ$್ಮಕಾಂತ್ ಇದ್ದರು.
ತುರುವೇಕೆರೆ: ತಾಲೂಕಿನಲ್ಲಿ ಹಲವಾರು ಕಾಮಗಾರಿಗಳು ಕಳಪೆಯಾಗಿದ್ದರೂ ಬಿಲ್ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಬಿ.ಎಸ್.ವಸಂತಕುಮಾರ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಮುಖಂಡ ಬಿ.ಎಸ್.ವಸಂತ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ನೂರಾರು ಕಾಮಗಾರಿಗಳು ನಡೆದಿದ್ದು, ಬಹುಪಾಲು ಕಳಪೆಯಾಗಿವೆ. ಇಲಾಖೆ ಮಾಡಬೇಕಾದ ಕಾಮಗಾರಿಗಳನ್ನು ಶಾಸಕರ ಶಿಫಾರಸು ಪಡೆದಿರುವ ಕಾರ್ಯಕರ್ತರು ಮಾಡುತ್ತಿದ್ದಾರೆ. ಅರ್ಹತೆ ಇಲ್ಲದಿರುವವರೂ ಗುತ್ತಿಗೆದಾರರಾಗಿದ್ದಾರೆ. ಕಾಮಗಾರಿಯಲ್ಲಿ ಸಾಕಷ್ಟು ಕಳಪೆಯಾಗಿದ್ದರೂ ಸಹ ಶಾಸಕರು ಮೌನದಿಂದ ಇರುವ ಉದ್ದೇಶವಾದರೂ ಏನು?. ತಾಲೂಕಿನಲ್ಲಿ ನಡೆದಿರುವ ಜಲ ಜೀವನ್ ಯೋಜನೆಯಲ್ಲೂ ಸಾಕಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಿದರು. Satyagraha
ಉಪವಾಸ ಅಂತ್ಯ: ಸತ್ಯಾಗ್ರಹ ಸ್ಥಳಕ್ಕೆ ತಹಸೀಲ್ದರ್ ಕುಂ.ಇ..ಅಹಮದ್ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ನಮ್ಮ ತಾಲೂಕು ಆಡಳಿತ ವ್ಯಾಪ್ತಿಯಲ್ಲಿ ಬರದ ಕಾರಣ ಜಿಲ್ಲಾಧಿಕಾರಿಗಳಿಗೆ ಮನವಿ ಕಳಿಸಿಕೊಡಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯೆಸಿದ್ದ ವಸಂತ ಕುಮಾರ್, 20 ದಿನಗಳ ಕಾಲಾವಕಾಶ ನೀಡುತ್ತಿದ್ದು, ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ವಸಂತ್ ಕುಮಾರ್ಗೆ ತಹಸೀಲ್ದರ್ ಜೂಸ್ ಕುಡಿಸುವ ಮೂಲಕ ಉಪವಾಸ ಅಂತ್ಯಗೊಳಿಸಿದರು.
ಮಾಜಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಮುಖಂಡರಾದ ಟಿ.ಎನ್.ಶಿವರಾಜು, ಕೆಂಪರಾಜು, ಯಜಮಾನ್ ಮಹೇಶ್, ಗುಡ್ಡೇನಹಳ್ಳಿ ನಂಜುಂಡಪ್ಪ, ಕೃಷ್ಣಪ್ಪ, ಬೇವಿನಹಳ್ಳಿ ಬಸವರಾಜು, ಮುನಿಯೂರು ಗಿರಿ, ಜೋಗಿ ಶಿವರಾಜು, ಪಿ.ಕಲ್ಲಳ್ಳಿ ಬಸವರಾಜು, ಬಡಗರಹಳ್ಳಿ ರಂಗಸ್ವಾಮಿ, ಗವಿಯಪ್ಪ ಇದ್ದರು.