ಬಸವಕಲ್ಯಾಣದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬಸವಕಲ್ಯಾಣ: ಸೋನಮ್​ ವಾಂಗ್ಚುಕ್​ ಅವರ ಬಂಧನ ಮತ್ತು ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್​ ಖಂಡಿಸಿ ಗ್ರಾಮ ಕ್ರಾಂತಿ ಸೇನೆ ಬಸವ ಕಲ್ಯಾಣ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಬಸವಕಲ್ಯಾಣದಲ್ಲಿ ಮಂಗಳವಾರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸಂದೀಪ ಮುಕಿಂದೆ, ಸುರೇಶ ಮೋರೆ, ರವೀಂದ್ರ ಕೊಳಕುರ, ಆನಂದ ಖಂಡಾಳೆ, ಇಕ್ರಮುದ್ದೀನ್​ ಖಾದೀವಾಲೆ, ಪ್ರಫುಲ್​ ಗಾಯಕವಾಡ ಇತರರಿದ್ದರು.
ಬಸವಕಲ್ಯಾಣ: ಸೋನಮ್​ ವಾಂಗ್ಚುಕ್​ ಅವರ ಬಂಧನ ಮತ್ತು ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್​ ಖಂಡಿಸಿ ಗ್ರಾಮ ಕ್ರಾಂತಿ ಸೇನೆ ಬಸವ ಕಲ್ಯಾಣ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಬಸವಕಲ್ಯಾಣದಲ್ಲಿ ಮಂಗಳವಾರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸಂದೀಪ ಮುಕಿಂದೆ, ಸುರೇಶ ಮೋರೆ, ರವೀಂದ್ರ ಕೊಳಕುರ, ಆನಂದ ಖಂಡಾಳೆ, ಇಕ್ರಮುದ್ದೀನ್​ ಖಾದೀವಾಲೆ, ಪ್ರಫುಲ್​ ಗಾಯಕವಾಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೋನಮ್​ ವಾಂಗ್ಚುಕ್​ ಬಂಧನಕ್ಕೆ ಖಂಡನೆ
  • ಕ್ರಮಕ್ಕೆ ಒತ್ತಾಯ
ಬಸವಕಲ್ಯಾಣ: ಲಡಾಖ್​ನ ಸಾಮಾಜಿಕ ಹೋರಾಟಗಾರ ಸೋನಮ್​ ವಾಂಗ್ಚುಕ್​ ಅವರ ಬಲವಂತದ ಬಂಧನ ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್​ ಖಂಡಿಸಿ ಮತ್ತು ವಿದ್ಯಾರ್ಥಿ ಪಾಲಕರ ಬೇಡಿಕೆ ಈಡೇರಿಸಲು ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಗ್ರಾಮ ಕ್ರಾಂತಿ ಸೇನೆ ಬಸವಕಲ್ಯಾಣ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಮಂಗಳವಾರ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಆಡಳಿತ ಸೌಧದ ಎದುರು ಜಮಾಯಿಸಿದ ಸೇನೆ ಮತ್ತು ಸಂಘಟನೆಯ ಪ್ರಮುಖರು, ವಿದ್ಯಾರ್ಥಿಗಳು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮುಖಂಡರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಅಂತಹ ಪ್ರತಿಭಟನೆ ನಡೆಸಿದ ಸೋನಮ್​ ವಾಂಗ್ಚುಕ್​ ಅವರನ್ನು ಬಂಧಿಸಿರುವುದು, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್​ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸಿ ಸೋನಮ್​ ವಾಂಗ್ಚುಕ್​ ಅವರ ವಿರುದ್ಧ ಕೈಗೊಂಡಿರುವ ಕ್ರಮ ಕೂಡಲೇ ಹಿಂಪಡೆಯಬೇಕು. ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ವಾಪಸ್​ ಪಡೆಯುವ ಜತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ ಮುಕಿಂದೆ, ವಾಯಸ್​ ಆಫ್​ ಅಂಬೇಡ್ಕರ್​ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಮೋರೆ ಮಾತನಾಡಿ, ಕೇಂದ್ರ ಶಿಕ್ಷಣ ಮಂತ್ರಿ ಧಮೇಂರ್ದ್ರ ಪ್ರಧಾನ್​ ರಾಜೀನಾಮೆ ನೀಡಬೇಕು. ಜಂತರ್​ ಮಂತರ್​ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್​ ಹಲ್ಲೆ ಮಾಡಿದ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ರವೀಂದ್ರ ಕೊಳಕುರ, ಆನಂದ ಖಂಡಾಳೆ, ಇಕ್ರಮುದ್ದೀನ್​ ಖಾದೀವಾಲೆ, ಪ್ರಫುಲ್​ ಗಾಯಕವಾಡ ಮಾತನಾಡಿ, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಕುರಿತು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಜೈವಂತ ಸಿಂಗಾರೆ, ಅರ್ಫತ್​ ಅಹಮದ್​, ಅಶೋಕ್​ ಶಿಂಧೆ, ಸತೀಶ ಗಾಯಕವಾಡ, ಮಹಾಂತೇಶ ಗೌರಕರ್​, ಸಾಗರ ರಾಯಗೋಳ್​, ಆಕಾಶ ಕಿಣ್ಣಿಕರ್​, ಕವಿರಾಜ್​ ದೇವಕರ್​, ಓಂಪ್ರಕಾಶ ಮಡಿವಾಳ, ಆತೀಫಿ ಗುಪ್ತಾ, ರಫಿ ಖುರೇಷಿ, ಶಾಹೀದ್​ ಸಗ್ಗೆ, ಜೈಭೀಮ್​ ಕಾಳೆ, ಕರಣ ಸೋನಫುಲೆ, ಅವಿನಾಶ ಗೋಡಬೋಲೆ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net