ಒಂದೇ ವೇದಿಕೆಯಲ್ಲಿ ಇಬ್ಬರ ಜಯಂತಿಗೆ ಪರ&ವಿರೋಧ / HOSAKOTE
ಹೊಸಕೋಟೆಯ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ ಪಿ.ಮಲ್ಲೇಶ್, ತಾಪಂ ಇಒ ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜ್, ನಗರಸಭೆ ಆರ್ಒ ತ್ಯಾಗರಾಜ್, ಮುಖಂಡ ಶಿವಕುಮಾರ್, ದಲಿತ ಮುಖಂಡರಾದ ಡಿ.ಎಂ.ಮುನಿರಾಜ್, ಕೆಆರ್ಬಿ ಶಿವಾನಂದ, ನರಸಿಂಹಯ್ಯ, ಗುಟ್ಟಳ್ಳಿ ನಾಗರಾಜ್ ಇದ್ದರು.
Published on:
Copied
Follow Us
ಹೊಸಕೋಟೆ : ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಗಳನ್ನು ಒಂದೇ ದಿನ ಆಚರಿಸಬೇಕು ಎಂದು ಎಡಗೈ ಸಮುದಾಯದ ಮುಖಂಡರು ಒತ್ತಾಯಿಸಿದರೆ ಏ.5ರಂದು ಬಾಬು ಜಗಜೀವನ ರಾಮ್ ಜಯಂತಿ ಹಾಗೂ ಏ.14ರಂದು ಡಾ.ಅಂಬೇಡ್ಕರ್ ಜಯಂತಿ ಆಚರಿಸಿ ಇಬ್ಬರೂ ಮಹಾನ್ ನಾಯಕರಿಗೆ ಪ್ರತ್ಯೇಕ ಗೌರವ ಸಲ್ಲಿಸಬೇಕು ಎಂದು ಬಲಗೈ ಸಮುದಾಯದ ಮುಖಂಡರು ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಪುರಸಭೆ ಮಾಜಿ ಸದಸ್ಯ ಎನ್.ನಾಗರಾಜ್ ಮಾತನಾಡಿ, 1980ರಿಂದ ತಾಲೂಕಿನಲ್ಲಿ ಬಲಗೈ ಹಾಗೂ ಎಡಗೈ ಸಮುದಾಯ ಬಾಬು ಜಗಜೀವನ ರಾಮ್ ಹಾಗೂ ಡಾ.ಅಂಬೇಡ್ಕರ್ ಜಯಂತಿಯನ್ನು ಒಟ್ಟಾಗಿ ನಗರದ ಉದ್ಯಾನವನದಲ್ಲಿ ಆಚರಿಸಲಾಗಿತ್ತು. ಆದರೆ ಕಳೆದ ವರ್ಷ ಎರಡೂ ಕಾರ್ಯಕ್ರಮವನ್ನು ಪ್ರತ್ಯೇಕವಾಗಿ ಏಕೆ ಮಾಡಲಾಯಿತೋ ತಿಳಿದಿಲ್ಲ ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ನಾಯಕರಿಗೆ ಜನ್ಮದಿನದಂದೇ ಪ್ರತ್ಯೇಕವಾಗಿ ಗೌರವ ಸಲ್ಲಿಸೋಣ. ಈ ಬಗ್ಗೆ ಉಭಯ ಸಮುದಾಯದ ನಾಯಕರ ಸಮಿತಿ ರಚಿಸಿ ನಿರ್ಧಾರ ಮಾಡೋಣ ಎಂದರು.
ತೀರ್ಮಾನಕ್ಕೆ 24 ಗಂಟೆಗಳ ಗಡುವು : ಕಳೆದ ವರ್ಷ ಈ ಎರಡು ಕಾರ್ಯಕ್ರಮ ಪ್ರತ್ಯೇಕವಾಗಿ ಆಚರಿಸಿದ್ದಕ್ಕೆ ಬೇಸರವಿದೆ. ಎರಡು ಸಮುದಾಯದ ಮುಖಂಡರಲ್ಲಿ ಬಿನ್ನಾಭಿಪ್ರಾಯಗಳಿದ್ದರೆ ಒಟ್ಟಿಗೆ ಕೂತು ಬಗೆಹರಿಸಿಕೊಳ್ಳಿ. ಏ.1ರಂದು ಮತ್ತೊಂದು ತಾಪಂ ಸಭೆ ಹಮ್ಮಿಕೊಳ್ಳಲಾಗುವುದು. ಎರಡೂ ಸಮುದಾಯದವರಿಗೆ 24 ಗಂಟೆ ಕಾಲಾವಕಾಶ ನೀಡಲಾಗುವುದು ಎಂದು ತಹಸೀಲ್ದಾರ್ ಸೋಮಶೇಖರ್ ಹೇಳಿದರು.
ಕಳೆದ ವರ್ಷ ನೀತಿ ಸಂಹಿತೆ ಜಾರಿಯಾಗುವ ಭೀತಿ ಹಾಗೂ ಒಳಮೀಸಲಾತಿ ಕಿಚ್ಚು ಹೆಚ್ಚಾಗುವ ಸಾಧ್ಯತೆ ಇದ್ದ ಕಾರಣ ಶಾಸಕ ಶರತ್ ಬಚ್ಚೇಗೌಡರು ನಗರದ ಅಂಬೇಡ್ಕರ್ ಭವನದ ಮುಂಭಾಗ ಜ.24ರಂದು ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದರು. ಇಬ್ಬರೂ ನಾಯಕರ ಜಯಂತಿಯನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು. ಇದರಿಂದ ಯಾವುದೇ ಸಮುದಾಯದ ನಾಯಕರ ಮನಸ್ಸಿಗೆ ನೋವುಂಟಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ.
ಇಬ್ಬರೂ ನಾಯಕರ ಜಯಂತಿಯನ್ನು ಏ.14ರಂದು ಒಂದೇ ವೇದಿಕೆಯಲ್ಲಿ ಆಚರಿಸೋಣ. ಇಲ್ಲದಿದ್ದರೆ ತಾಲೂಕು ಕಚೇರಿಯಲ್ಲಿ ಪ್ರತ್ಯೇಕವಾಗಿ ಸಾಂಕೇತಿಕವಾಗಿ ಆಚರಣೆ ಮಾಡಿ. ಅವರವರ ಸಮುದಾಯ ಹೊರಗಡೆ ಪ್ರತ್ಯೇಕವಾಗಿ ಆಚರಣೆ ಮಾಡಿಕೊಳ್ಳಲಿ.