ಕಲಬುರಗಿ: ಜಿಲ್ಲೆಯಾದ್ಯಂತ ಇದೇ ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ 2026ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-01 ನ್ನು ಕಲಬುರಗಿ ಜಿಲ್ಲೆಯ ಅಫಜಲಪುರ-12, ಆಳಂದ-18, ಚಿಂಚೋಳಿ-10, ಚಿತ್ತಾಪುರ-21, ಕಲಬುರಗಿ ಉತ್ತರ-30, ಕಲಬುರಗಿ ದಕ್ಷಿಣ-23, ಜೇವರ್ಗಿ-17, ಸೇಡಂ-10 ಹೀಗೆ ಜಿಲ್ಲೆಯ ಒಟ್ಟು 141 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ.