ಕಾಂಗ್ರೆಸ್​ ಸರ್ಕಾರದಿಂದ ಜನಪರ ಆಡಳಿತ

ಸೇಡಂ ತಾಲೂಕಿನ ಬೊಂದೇಂಪಲ್ಲಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಶಂಕುಸ್ಥಾಪನೆ ನೆರವೇರಿಸಿದರು. ಶ್ರೀಯಾಂಕಾ ಧನಶ್ರೀ, ಶಿವಶರಣಪ್ಪ ಜೇವರ್ಗಿ, ಸದಾಶಿವರೆಡ್ಡಿ, ಹೇಮ್ಲಾನಾಯಕ, ಸತೀಶರೆಡ್ಡಿ ರಂಜೋಳ ಇದ್ದರು.
ಸೇಡಂ ತಾಲೂಕಿನ ಬೊಂದೇಂಪಲ್ಲಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಶಂಕುಸ್ಥಾಪನೆ ನೆರವೇರಿಸಿದರು. ಶ್ರೀಯಾಂಕಾ ಧನಶ್ರೀ, ಶಿವಶರಣಪ್ಪ ಜೇವರ್ಗಿ, ಸದಾಶಿವರೆಡ್ಡಿ, ಹೇಮ್ಲಾನಾಯಕ, ಸತೀಶರೆಡ್ಡಿ ರಂಜೋಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿಕೆ
  • ಬೊಂದೇಂಪಲ್ಲಿಯಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ
ಸೇಡಂ: ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆಗಳೊಂದಿಗೆ ಪಕ್ಷಕ್ಕೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿದ್ದಾರೆ. ಹೀಗಾಗಿ ಜನರ ಸಮಸ್ಯೆಗೆ ಸ್ಪಂದಿಸುವುದೇ ಮೊದಲ ಆದ್ಯತೆಯಾಗಿಸಿಕೊಂಡು ನಾವು ಕೆಲಸ ಮಾಡುತಿದ್ದೇವೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಬೊಂದೇಂಪಲ್ಲಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ 2.5 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪ್ರತಿ ವರ್ಷ ಹೆಚ್ಚಿನ ಮಳೆ ಬಂದಾಗ ಸೇತುವೆ ತುಂಬಿ ಸಂಚಾರ ಕಡಿತಗೊಳ್ಳುತ್ತಿತ್ತು. ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೂಡಲೇ ಅನುದಾನ ಒದಗಿಸಿ ಕೆಲಸ ಆರಂಭಿಸಲಾಗಿದೆ. ಯಾವಾಗೆಲ್ಲ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆಯೋ ಆಗ ಬಡ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲಾಗಿದೆ. ಇದೀಗ ಗ್ಯಾರಂಟಿ ಯೋಜನೆ ಮೂಲಕ 52ಸಾವಿರ ಕೋಟಿ ರೂ. ಹಣ ಬಡವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಇದರೊಟ್ಟಿಗೆ ಶಿಕ್ಷಣ ಹಾಗೂ ಆರೋಗ್ಯ ಸೇರಿ ಅನೇಕ ಕ್ಷೇತ್ರಗಳಿಗೆ ಮೂಲಸೌಕರ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಸದಾಶಿವರೆಡ್ಡಿ ಗೋಪನಪಲ್ಲಿ, ಕಾರ್ಮಿಕ ಸಂದ ಅಧ್ಯಕ್ಷ ಸತೀಶರೆಡ್ಡಿ ರಂಜೋಳ, ಜಿಪಂ ಮಾಜಿ ಸದಸ್ಯ ದಾಮೋದರರೆಡ್ಡಿ ಪಾಟೀಲ್​ ಮಾತನಾಡಿದರು.
ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ತಾಪಂ ಇಒ ಸೈಯದ್​ ಪಟೇಲ್​, ಲೋಕೋಪಯೋಗಿ ಇಲಾಖೆ ಎಇಇ ಶಿವಶರಣಪ್ಪ ಜೇವರ್ಗಿ, ಪಂಚಾಯತ್​ರಾಜ್​ ಎಇಇ ವಿಶ್ವನಾಥ ಮಾವಿನಗಿಡ, ಗುತ್ತಿಗೆದಾರ್​ ಶಿವಕುಮಾರ ಸಜ್ಜನ್​, ಭೂನ್ಯಾಯ ಮಂಡಳಿ ಅಧ್ಯಕ್ಷ ರವೀಂದ್ರ ನಂದಿಗಾಮ, ಪ್ರಮುಖರಾದ ಹೇಮ್ಲಾನಾಯಕ, ಗೋವರ್ಧನರೆಡ್ಡಿ ಲಿಂಗಂಪಲ್ಲಿ, ಲಕ್ಷಿ$್ಮಕಾಂತ ಕುಲಕರ್ಣಿ, ಶ್ರೀನಿವಾಸರೆಡ್ಡಿ, ಮನ್ಯಾನಾಯಕ, ಶರಣಪ್ಪ ಪರಿಗೇಡ, ನರಸಿಂಹಲು, ರಾಜಕುಮಾರ ರಾಠೋಡ್​, ವರದರಾಜ್​, ನರಸ್ಯಾನಾಯಕ, ವೆಂಕಟೇಶಗೌಡ, ಹರಿಸಿಂಗ್​, ಭೀಮಶಪ್ಪ ಮೇದಕ, ಹಣಮಂತರೆಡ್ಡಿ, ರಾಜವರ್ಧನ ಇತರರಿದ್ದರು.
ವಿದ್ಯಾರ್ಥಿನಿ ಅನನ್ಯ, ಸಮತಾ ಪ್ರಾರ್ಥಿಸಿದರು. ಸಂಪತಕುಮಾರ ಸ್ವಾಗತಿಸಿದರು. ಶಿಕ್ಷಕ ಕರಿಗೂಳಿ ನಿರೂಪಣೆ ಮಾಡಿದರು.
"

ಮಹಿಳೆಯರು, ವೃದ್ಧರು ವಿವಿಧ ಪಿಂಚಣಿ ಹಣ ಬರುತ್ತಿಲ್ಲ ಎಂದು ಗಮನಕ್ಕೆ ತಂದಿದ್ದಾರೆ. ತಹಸೀಲ್ದಾರ್​ ಅವರು ಕೂಡಲೇ ಕ್ರಮ ಕೈಗೊಂಡು ಯಾವುದೇ ಕಾರಣಕ್ಕೂ ಪಿಂಚಣಿ ನಿಲ್ಲದಂತೆ ನೋಡಿಕೊಳ್ಳಬೇಕು. ಹಣ ಜಮೆ ಆಗುವುದು ನಿಲುಗಡೆಯಾಗಿರುವ ಫಲಾನುಭವಿಗಳನ್ನು ಪತ್ತೆ ಹಚ್ಚಿ ಮರು ಆರಂಭಿಸಲು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಬೇಕು. ಗ್ರಾಮ ಆಡಳಿತಾಧಿಕಾರಿಗಳು, ಗ್ರಾಪಂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು, ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.

— > ಡಾ.ಶರಣಪ್ರಕಾಶ ಪಾಟೀಲ್​, ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net